ಬಾಬಾ ಸಾಹೇಬ್ ಅಂಬೇಡ್ಕರ್ ಜಗತ್ತಿಗೆ ಸೂರ್ಯನಿದ್ದಂತೆ : ತಹಶೀಲ್ದಾರ್ ಸುರೇಶ್ ಆಚಾರ್
ಮಧುಗಿರಿ : ಬಾಬಾ ಸಾಹೇಬ್ ಅಂಬೇಡ್ಕರ್ ಜಗತ್ತಿಗೆ ಸೂರ್ಯನಿದ್ದಂತೆ ಎಂದು ತಹಶೀಲ್ದಾರ್ ಸುರೇಶ್ ಆಚಾರ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿಯ ಬಳಿ ತಾಲೂಕು ದಲಿತ ಸಾಹಿತ್ಯ ಪರಿಷತ್ ಹಾಗೂ ಆದಿ ಜಾಂಬವ ಮಹಾಸಭಾ ಸಂಘಟನೆಗಳ ವತಿಯಿಂದ ಬಾಬಾ ಸಾಹೇಬ್ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪರಿನಿಬ್ಬಾಣ ದಿನದ ಅಂಗವಾಗಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ತಹಶೀಲ್ದಾರ್ ಸುರೇಶ್ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಇಡೀ ಜಗತ್ತಿಗೆ ಸೂರ್ಯನಿದ್ದಂತೆ ಅವರು ನಮ್ಮ ನಗಲಿ ಹೋದ ದಿನವನ್ನು ಮಹಾಪರಿ ನಿಬ್ಬಾಣ ದಿನವನ್ನಾಗಿ ಆಚರಿಸುತ್ತಾ ಎಲ್ಲರ ಹೃದಯದಲ್ಲಿರುವ ವಿಶ್ವಜ್ಞಾನಿಯ ನೆನಪಿನ ಮಹತ್ವದ ದಿನದಂದು ನಮಗೆಲ್ಲ ಬೆಳಕು ನೀಡಿ ಹೋದ ಅವರಿಗೆ ಇಂದು ದೀಪಗಳನ್ನು ಹಚ್ಚುವ ಮೂಲಕ ಸ್ಮರಣೆ ಮಾಡುತ್ತಿರುವ ದಲಿತ ಸಾಹಿತ್ಯ ಪರಿಷತ್ತಿಗೆ ಅಭಿನಂದನೆ ಸಲ್ಲಿಸಬೇಕು ಅಂಬೇಡ್ಕರ್ ಅವರು ಪ್ರಾಮಾಣಿಕತೆ ಹೆಸರುವಾಸಿಯಾದವರು ಅವರ ನಿಸ್ವಾರ್ಥ ಸೇವೆಯನ್ನು ಪ್ರತಿಯೊಬ್ಬರು ನೆನೆಯಬೇಕಿದೆ ಎಂದರು.
ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹರಾಜು ಮಾತನಾಡಿ ಅಂಬೇಡ್ಕರ್ ಸಾಹೇಬರು ರಚಿಸಿರುವ ಸಂವಿಧಾನದಲ್ಲಿ ದೇಶದ ಪ್ರತಿಯೊಂದು ಜಾತಿ ಹಾಗೂ ಧರ್ಮಗಳಿಗೂ ಸಮಾನವಾದ ಸಾಮಾಜಿಕ ನ್ಯಾಯವನ್ನು ನೀಡಿ ಹೋಗಿದ್ದಾರೆ ಮಹಿಳೆಯರಿಗೆ ವಿಶೇಷವಾದಂತಹ ಹಕ್ಕು ಮತ್ತು ಸ್ವಾತಂತ್ರ‍್ಯವನ್ನು ನೀಡಿದ ದೇಶದ ಪ್ರಥಮ ಮಹಾ ನಾಯಕ ಎಂದರೆ ಅಂಬೇಡ್ಕರ್ ಒಬ್ಬರೇ, ಇಂತಹ ಮಾನವತಾವಾದಿಯನ್ನು ಈ ದೇಶದ ಎಲ್ಲಾ ವರ್ಗದ ಮಹಿಳೆಯರು ತಮ್ಮ ಮನೆ ಹಾಗೂ ಮನಸ್ಸುಗಳಲ್ಲಿ ಅವರ ಫೋಟೋಗಳನ್ನಿಟ್ಟು ಪೂಜಿಸಬೇಕು ಎಂದರು.
ಈ ವೇಳೆ ಮಾನವ ಸರಪಳಿ ನಿರ್ಮಿಸಿ ಮೇಣದಬತ್ತಿ ಬೆಳಗಿಸುವ ಮೂಲಕ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮವನ್ನು ಮಾಡಿ ಅಂಬೇಡ್ಕರ್ ಪ್ರತಿಮೆಗೆ ಗಣ್ಯರಿಂದ ಹೂವಿನ ಹಾರ ಹಾಕುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ರವಿ, ದಲಿತ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಸಾಹಿತಿ ಹನುರಾಜ್, ಕಾರ್ಯದರ್ಶಿ ದಾಸರಹಳ್ಳಿ ರಾಜು, ಖಜಾಂಚಿ ಚಿಕ್ಕ ರಂಗಪ್ಪ ,ಟಿಪಿಎಸ್ ತಿಪ್ಪೇಸ್ವಾಮಿ ಆದಿ ಜಾಂಬವ ಮಹಾಸಭಾ ಉಪಾಧ್ಯಕ್ಷ ಬಿಜವರ ರವಿಕುಮಾರ್, ದ.ಸಂ.ಸ ಸಂಚಾಲಕ ರಂಗನಾಥ್, ಕಲಾವಿದ ಎಸ್ ಸಂಜೀವಯ್ಯ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ರಾಮಪ್ರಸಾದ್, ಶಿಕ್ಷಕ ರಂಗನಾಥ್, ಮುಖಂಡ ಉಪ್ಪಾರಹಳ್ಳಿ ಶಿವಕುಮಾರ್, ನಿಲಯಪಾಲಕರಾದ ರಾಮಾಂಜಿನಪ್ಪ, ಜಯಮ್ಮ, ಗಣೇಶ್ ನಾಯಕ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.