ಶಿರಾ
ಸಾರ್ವಜನಿಕರ ಅನುಕೂಲಕ್ಕಾಗಿ ತಂಗುದಾಣ ನಿರ್ಮಾಣ : ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ : ಶಿರಾ ಮತ್ತು ಬುಕ್ಕಾಪಟ್ಟಣ ನಡುವೆ ಸಂಚರಿಸುವ ಎಲ್ಲಾ ಸರಕಾರಿ ಸಾರಿಗೆ ಹಾಗೂ ಖಾಸಗಿ ಸಾರಿಗೆ ಬಸ್ಸುಗಳು ಕಡ್ಡಾಯವಾಗಿ ಮಿನಿ ವಿಧಾನಸೌಧದ ಬಳಿಯಲ್ಲಿರುವ ಬಸ್ ತಂಗುದಾಣದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಮಿನಿ ವಿಧಾನಸೌಧದ ಬಳಿ ನೂತನವಾಗಿ ನಿರ್ಮಾಣವಾಗಿರುವ ಬಸ್ ತಂಗುದಾಣವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಹಲವು ದಿನಗಳಿಂದ ಸಾರ್ವಜನಿಕರ ಬೇಡಿಕೆಯಾಗಿದ್ದ ಬಸ್ ತಂಗುದಾಣವನ್ನು ಜನತೆಗೆ ಅನುಕೂಲವಾಗಲೆಂದು ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಮಾರುತೀಶ್, ಬಿಜೆಪಿ ನಗರ ಅಧ್ಯಕ್ಷ ವಿಜಯರಾಜ್, ಓಬಿಸಿ ಘಟಕದ ಅಧ್ಯಕ್ಷ ಬಿ.ಇ.ಮಲ್ಲಯ್ಯ, ಕೋಟೆ ರವಿ, ಅಣ್ಣಪ್ಪ, ವಕೀಲರಾದ ರಾಜು, ಸೂರ್ಯ ಗೌಡ, ರಾಜು, ತಿಮ್ಮರಾಜು, ಮಂಜುನಾಥ್, ರಾಜಣ್ಣ, ರಾಮು ಸೇರಿದಂತೆ ಹಲವರು ಹಾಜರಿದ್ದರು.