ಕುಣಿಗಲ್
ಕುಣಿಗಲ್ ಸ್ಟಡ್ ಫಾರಂ ಜಾಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆ ನಿರ್ಮಾಣ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ನಿಶ್ಚಿತ

ಕುಣಿಗಲ್ : ಕುದುರೆ ಫಾರಂನ ವಿಶಾಲವಾದ ಜಾಗದಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುವಂತ ಸರ್ಕಾರಿ ಉನ್ನತ ವಿದ್ಯಾ ಸಂಸ್ಥೆಯನ್ನು ನಿರ್ಮಾಣ ಮಾಡುವ ಮೂಲಕ ಸರ್ಕಾರಿ ಭೂಮಿ ಬೇರೆಯವರ ಪಾಲಾಗದಂತೆ ಬಿಜೆಪಿ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.
ಪಟ್ಟಣದ ಜಿಕೆಬಿಎಮ್ಎಸ್ ಶಾಲಾ ಮೈದಾನದಲ್ಲಿ ಬಿಜೆಪಿ ಜನ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ನೀರು ತಗೆದುಕೊಂಡು ಹೋಗುವ ಕೆನಾಲ್ ಗುದ್ದಿ ಪೂಜೆಗೆ ನಾನೇ ಬರುತ್ತೇನೆ ಎಂದ ಅವರು ತುಮಕೂರು ಜಿಲ್ಲೆಯಲ್ಲಿ ಜನರ ಬೆಂಬಲ ನೋಡುತ್ತಿದ್ದರೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದವರು ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಇದ್ದಂತಹ ವೇಳೆಯಲ್ಲಿ ರೈತರ ನೀರಾವರಿ ಯೋಜನೆ ಹೆಸರಿನಲ್ಲಿ ಜನರ ಮೇಲೆ ಎರಡು ಲಕ್ಷ ಕೋಟಿ ಸಾಲದ ಬರೇ ಎಳೆದಿದ್ದರೂ ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಒಳಿತಿಗೋಸ್ಕರ 32 ಸಾವಿರ ಕೋಟಿ ನೀರಾವರಿ ಯೋಜನೆಗೆ ಹಣ ಖರ್ಚು ಮಾಡಿ 7, ಲಕ್ಷ ಹೆಕ್ಟೆರ್ ಭೂಪ್ರದೇಶದ ರೈತರ ವ್ಯವಸಾಯಕ್ಕೆ ಅನುಕೂಲವಾಗಿದೆ ಆದರೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ರೈತರ ನೀರಾವರಿಗೆ ಬಳಸಿದ 54 ಸಾವಿರ ಕೋಟಿ ಯಾರ ಕಿಸೆಗೆ ಹೋಯಿತು ಎಂದು ಪ್ರಶ್ನಿಸಿದರು? ಇದಲ್ಲದೆ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿಯನ್ನು ಹುಟ್ಟು ಹಾಕಿ ಅವರ ಸರ್ಕಾರದ ಭ್ರಷ್ಟ ರಾಜಕಾರಣಿಗಳ ದಾಖಲೆಗಳಿದ್ದರೂ ಯಾವುದೇ ಪ್ರಕರಣವನ್ನು ದಾಖಲಿಸದೆ ಮುಚ್ಚು ಹಾಕಿದ್ದೆ ಕಾಂಗ್ರೆಸ್ ಸರ್ಕಾರದವರ ಸಾಧನೆ, ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಹೆಸರಿನಲ್ಲಿ ಕೆಲಸ ಮಾಡದೆ ಬಿಲ್ ತೆಗೆದುಕೊಂಡಿರುವುದು, ಅನ್ನಭಾಗ್ಯದಲ್ಲಿ ಕನ್ನ ಭಾಗ್ಯ, ಭ್ರಷ್ಟಾಚಾರ ತುಂಬಿತುಳುಕುತ್ತಿತ್ತು ಎಂದು ಸಿಎಂ ರವರು ಮಾತಿನ್ದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು

ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ, ದೀನ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಕಡುಬಡವರಿಗೆ,ರೈತರ ಮಕ್ಕಳಿಗೆ ಕೈಗೊಂಡಿರುವ ಹತ್ತು ಹಲವಾರು ಅಭಿವೃದ್ಧಿ ವಿಚಾರಗಳನ್ನು ಎಳೆ ಎಳೆಯಾಗಿ ಜನರ ಮುಂದಿಟ್ಟ ಅವರು ಮುಂದಿನ ದಿನಗಳಲ್ಲಿ ಜನರು ಬಿಜೆಪಿ ಸರ್ಕಾರಕ್ಕೆ ಆಶೀರ್ವದಿಸಿದರೆ ತುಮಕೂರು ಜಿಲ್ಲೆಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭರವಸೆ ನೀಡಿದ ಅವರು ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಜಿಲ್ಲೆಗೆ ಆನೆ ಬಲ ಬಂದಂತಾಗಿದೆ ಈಗಾಗಲೇ ಡಿ ಕೃಷ್ಣಕುಮಾರ್ ಮೂರು ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ ಅದಕ್ಕೋಸ್ಕರ ಬಿಜೆಪಿ ಸರ್ಕಾರ ಎಲ್ಲಾ ಸ್ಥಾನಮಾನಗಳನ್ನು ನೀಡಿದೆ ಮುಂದಿನ ದಿನಗಳಲ್ಲಿ ಜನರ ಮನಸ್ಸಿನಲ್ಲಿ ಏನಿದೆಯೋ ಅದೇ ಆಗುತ್ತದೆ ಎಲ್ಲರೂ ಒಗ್ಗಟ್ಟಾಗಿ ಕುಣಿಗಲ್ ಕ್ಷೇತ್ರದಲ್ಲಿ ಕಮಲವನ್ನು ಅರಳಿಸುವಂತೆ ದೃಢ ನಿರ್ಧಾರ ಮಾಡಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ ಮಾತನಾಡಿ ತಾಲೂಕಿನಲ್ಲಿ ಸಂಸದರ ಹಾಗೂ ಶಾಸಕರ ದಬ್ಬಾಳಿಕೆ ಜಾಸ್ತಿಯಾಗಿದೆ ಜನರು ಎಚ್ಚೆತ್ತುಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು.
ಬಿಜೆಪಿ ಹಿರಿಯ ಮುಖಂಡ ಹಾಗೂ ಪಿ ಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ ಕೃಷ್ಣಕುಮಾರ್ ಮಾತನಾಡಿ ಮೂರು ಬಾರಿ ಸೋತಿದ್ದೇನೆ ನನ್ನನ್ನು ಪರೀಕ್ಷೆ ಮಾಡಬೇಡಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವದಿಸಬೇಕೆಂದು ಗದ್ಗದಿತರಾದರು
ಈ ಸಂದರ್ಭದಲ್ಲಿ ಸಚಿವರುಗಳಾದ ಮಾಧುಸ್ವಾಮಿ, ಅರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಗೋಪಾಲಯ್ಯ, ಬಿ ಸಿ ನಾಗೇಶ್, ಒಳಗೊಂಡಂತೆ ಅನೇಕ ಶಾಸಕರು ಜಿಲ್ಲಾ ಬಿಜೆಪಿ ಅಧ್ಯಕ್ಷರು ತಾಲೂಕಿನ ಬಿಜೆಪಿ ಮಂಡಲದ ಅಧ್ಯಕ್ಷರು, ನೂರಾರು ಬಿಜೆಪಿ ಮುಖಂಡರು ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.