ಕಲೆಕೊರಟಗೆರೆ

ರಂಗಭೂಮಿ ಕಲೆಯು ದೇಶದ ಸಂಸ್ಕೃತಿ ಮತ್ತು ಇತಿಹಾಸ ತಿಳಿಸುತ್ತವೆ : ಶಾಸಕ ಡಾ. ಜಿ ಪರಮೇಶ್ವರ್

ಕೊರಟಗೆರೆ : ರಂಗಭೂಮಿ ಕಲೆಯು ಸಮಾಜದ ಸ್ವಾಸ್ಯ ಉತ್ತಮಗೊಳಿಸಲಿದ್ದು ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತೋರಿಸುತ್ತದೆ ಎಂದು ಶಾಸಕ ಡಾ. ಜಿ ಪರಮೇಶ್ವರ್ ತಿಳಿಸಿದರು.
ಅವರು ಪಟ್ಟಣದ ಶಿವಗಂಗಾ ಕಲ್ಯಾಣ ಮಂಟಪದಲ್ಲಿ ನಡೆದ ಮನೆಯ ಮಾನ ಅಣ್ಣನ ಪ್ರಾಣ ಎನ್ನುವ ಸಾಮಾಜಿಕ ನಾಟಕದಲ್ಲಿ ಹಿರಿಯ ಚಲನಚಿತ್ರ ರಂಗಭೂಮಿ ಕಲಾವಿದ ಡಾ. ಮಯೂರ ಗೋವಿಂದರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಹಿರಿಯ ಕಲಾವಿದರನ್ನು ಗೌರವಿಸಿ ಮಾತನಾಡಿ  ರಂಗಭೂಮಿ ಕಲೆಯ ನಟನೆ ಭಾರತ ಸೇರಿದಂತೆ  ವಿದೇಶದಲ್ಲೂ ಪ್ರದರ್ಶನವಾಗುತ್ತಿದೆ. ಈ ಕಲೆಗಳು ಆಯಾ ದೇಶಗಳ ಸಂಸ್ಕೃತಿ ಮತ್ತು ಚ ಸಾಮಾಜಿಕ ನಾಟಕ ಪ್ರದರ್ಶನ ತುಮಕೂರು ಜಿಲ್ಲೆಯಲ್ಲಿ ವಿರಳವಾಗಿದೆ. ಈ ನಾಟಕದಲ್ಲಿ ನಮ್ಮ ಸಮಾಜದಲ್ಲಿ ಕಡಿಮೆಯಾಗುತ್ತಿರುವ ಅಭಿವ್ಯಕ್ತ (ಒಟ್ಟು )ಕುಟುಂಬದ ಜೀವನ ಸಾರಾಂಶವನ್ನು ಸಾಂಸಾರಿಕ ಕಷ್ಟ ಸುಖಗಳ ಬಗ್ಗೆ ಹೋರಾಟವನ್ನು ತೋರಿಸಿ ಹೆಚ್ಚು ಒತ್ತಡದ ಜೀವನಕ್ಕೆ ನಗೆಯ ನಟನೆ ಮೂಲಕ  ಸಂತೋಷಿಸಿ ಜೀವನಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ ಎಂದರು.
ನನ್ನ ಕೊರಟಗೆರೆ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ನಾಟಕ ಪ್ರದರ್ಶನವಾಗುತ್ತಿದೆ. ನಾನು ಕೂಡ ಎಲ್ಲಾ ನಾಟಕಗಳಿಗೂ ಪ್ರೋತ್ಸಾಹ ನೀಡುತ್ತಿದ್ದೇನೆ .ಇದರ ಉದ್ದೇಶವಾಗಿಯೇ ತಾಲೂಕಿನ ಎಲ್ಲಾ ಕಲೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪಟ್ಟಣದ ಮೆಮೋರಿಯಲ್ ಜಾಗದಲ್ಲಿ ಬೃಹತ್ ಕಲಾ ಮಂದಿರವನ್ನು ಕಟ್ಟುವ ಉದ್ದೇಶ ಹೊಂದಲಾಗಿದೆ. ಇಂದಿನ ನಾಟಕ ಪ್ರದರ್ಶನ ನನ್ನ ಸ್ನೇಹಿತರಾದ ಡಾ.ಮಯೂರ ಗೋವಿಂದರಾಜು ರವರ ನೆನಪಿನಲ್ಲಿ ನಡೆಯುತ್ತಿದ್ದು ರಂಗಭೂಮಿ ಟೆಲಿ ಚಿತ್ರದಲ್ಲಿ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಸಾಮಾಜಿಕ ರಂಗಭೂಮಿ ಕಲಾವಿದರಾದ ಕುಂಬಾರ ನಾಗರಾಜಪ್ಪ, ಮೈಲಾರಪ್ಪ ,ರಾಜಗೋಪಾಲ್, ಗೋಪಿನಾಥ್, ಶ್ರೀಧರಾಚಾರ್, ಮುನಿಯಪ್ಪ ,ಎಸ್ ಪಿ ಎಲ್ ಎನ್ ರಾವ್ ,ಅಕ್ಕಿ ಶ್ರೀನಿವಾಸ್ ,ಶ್ರೀನಿವಾಸ್ (ಕಾಕಾ ),ಹಾಗೂ ಸಾಮಾಜಿಕ ಸೇವೆಗೆ ಶ್ರೀ ಪ್ರಸಾದ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ.ಪಂ ಸದಸ್ಯರಾದ ಎ.ಡಿ ಬಲರಾಮಯ್ಯ, ಕೆ.ಆರ್ ಓಬಳರಾಜು.ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪ್ರಸನ್ ಕುಮಾರ್, ಮುಖಂಡರಾದ ಮಂಜುಳಾ ಗೋವಿಂದರಾಜು, ಪೂರ್ಣಿಮಾ ,ವರದರಾಜು ,ಶ್ರೀ ಲಕ್ಷ್ಮಿ, ರಂಗಭೂಮಿ ಗೋವಿಂದರಾಜು, ಜಮೀರ್, ಗಟ್ಲಹಳ್ಳಿ ಕುಮಾರ್ ,ಪುಟ್ಟಣ್ಣ, ಚಿಕ್ಕರಂಗಯ್ಯ, ಎಲ್ ರಾಜಣ್ಣ ಸೇರಿದಂತೆ ಇತರರು ಹಾಜರಿದ್ದರು

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker