ತಿಪಟೂರು

ಕ್ರೀಡೆ ಹಾಗೂ ಭಾಷೆ, ವ್ಯಕ್ತಿಯ ಬೆಳವಣಿಗೆ ಸಹಕಾರಿ : ಲೋಕೇಶ್ವರ್

ತಿಪಟೂರಿನಲ್ಲಿ 21 ನೇವರ್ಷದ ರಾಜ್ಯ ಮಟ್ಟದ ರಸ್ತೆ ಓಟದ ಸ್ವರ್ಥೆ

ತಿಪಟೂರು : ಕ್ರೀಡೆಯ ಆಸಕ್ತಿ ಹಾಗೂ ಕನ್ನಡ ಭಾಷಾಭಿಮಾನವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ದೇಹ ಮತ್ತು ಮನಸ್ಸು ಸಧೃಡವಾಗಲು ಸಾಧ್ಯ ಎಂದು ತಿಪಟೂರು ಸ್ಪೋಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಲೋಕೇಶ್ವರ್ ತಿಳಿಸಿದರು.
ನಗರದ ಅರಳೀಕಟ್ಟೆಯ ಹತ್ತಿರ ತಿಪಟೂರು ಸ್ಪೋಟ್ಸ್ ಕ್ಲಬ್ ಹಾಗೂ ರೋಟರಿ ಸಂಸ್ಥೆ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 21 ನೇ ವರ್ಷದ ರಾಜ್ಯ ಮಟ್ಟದ ರಸ್ತೆ ಓಟದ ಸ್ಪರ್ಥೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕ್ರೀಡೆಯು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆ ಸಹಕಾರಿಯಾಗಿದ್ದು ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ನಿತ್ಯ ಯಾವುದರೂ ಸಹ ಒಂದು ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಬೇಕು ಅದರಂತೆ ನಮ್ಮ ಮಾತೃ ಭಾಷೆಯಾದ ಕನ್ನಡಕ್ಕೆ ತನ್ನದೇ ಆದ ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು ನಾವುಗಳು ಆಡಳಿತದಲ್ಲಿ, ವ್ಯವಹಾರದಲ್ಲಿ ನಮ್ಮ ಕನ್ನಡ ಭಾಷೆಯನ್ನು ಆಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರುಷರ ವಿಭಾಗದಲ್ಲಿ ಇನ್ನೂರಕ್ಕೂ ಹೆಚ್ಚು, ಮಹಿಳಾ ವಿಭಾಗದಲ್ಲಿ 50ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದು ಪುರಷ ವಿಭಾಗದಲ್ಲಿ ಬೆಂಗಳೂರಿನ ಶಿವಾಜಿ ಪ್ರಥಮ, ಉಡುಪಿಯ ಅನಿಲ್ ದ್ವೀತೀಯ, ತಿಪಟೂರಿನ ವಿವೇಕನಂದ ವಿದ್ಯಾ ಸಂಸ್ಥೆಯ ವೈಭವ್ ತೃತೀಯ, ಮೈಸೂರಿನ ಮಣಿಕಂಠ ನಾಲ್ಕನೇ ಸ್ಥಾನ, ಮೈಸೂರಿನ ರಾಹುಲ್ ಐದನೇ ಸ್ಥಾನ, ಹುಬ್ಬಳ್ಳಿಯ ನಾಗರಾಜು ಆರನೇ ಸ್ಥಾನ, ಮಹಿಳಾ ವಿಭಾಗದಲ್ಲಿ ಮೈಸೂರಿನ ಅರಣ್ಯ ಇಲಾಖೆಯ ಅರ್ಚನಾ ಪ್ರಥಮ, ಕೊಡಿಗಿನ ತೇಜಸ್ವಿನಿ ದ್ವೀತೀಯ, ವಿಜಯಪುರದ ಮಲ್ಲೇಶ್ವರಿ ತೃತೀಯ, ಬೆಂಗಳೂರಿನ ಕವಿತಾ ನಾಲ್ಕನೇ ಸ್ಥಾನ, ತಿಪಟೂರಿನ ಕೈದಾಳದ ಸಾನಿಕಾ ಐದನೇ ಸ್ಥಾನ, ಶಿವಮೊಗ್ಗದ ನಾಗಶ್ರೀ ಆರನೇ ಸ್ಥಾನ, ಪಡೆದು ಪ್ರಥಮ ಸ್ಥಾನಕ್ಕೆ ಹತ್ತು ಸಾವಿರ, ಏಳು ಸಾವಿರ, ಆರುಸಾವಿರ, ಐದು ಸಾವಿರ, ನಾಲ್ಕುಸಾವಿರ, ಮೂರುಸಾವಿರ, ಏರಡು ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಯಿತು.
ಕಾರ್ಯಾಕ್ರಮದಲ್ಲಿ ಎಸ್,ವಿ,ಪಿ ವಿದ್ಯಾಸಂಸ್ಥೆ ಸಂಸ್ಥಾಪಕರಾದ ಎಸ್.ಕೆ. ರಾಜಶೇಖರ್, ತಿಪಟೂರು ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಶಿವಪ್ರಸಾದ್, ರೋಟರಿ ಸಂಸ್ಥೆಯ ಅಧ್ಯಕ್ಷೆ ವಿಜಯಕುಮಾರಿ, ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಸವರಾಜು, ನಗರಸಭೆಯ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರಾದ ಓಹಿಲೇಶ್ವರಿಗಂಗಾಧರ್, ಭಾರತಿ ಮಂಜುನಾಥ್, ಆಶ್ರೀಫ್ ಭಾನು, ಮುಂಚಾನೆ ಗೆಳೆಯರ ಬಳಗದ ಎ.ಟಿ ಪ್ರಸಾದ್, ಚೌಡೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್, ದೈಹಿಕ ಶಿಕ್ಷಕರಾದ ಉದಯ್, ಮಧುಚಂದ್ರ, ಶಿವಪ್ರಸಾದ್, ಲೋಕೇಶ್, ಸ್ವಯಂ ಸೇವಕರಾದ ಮಧು ಬನ್ನಿಹಳ್ಳಿ, ಸಾರ್ಥವಳ್ಳಿಶಿವಕುಮಾರ್, ಧರಣೇಶ್, ತೋಂಟಾರಾಧ್ಯ, ನಾಗರಾಜು, ಕಲ್ಪತರು ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್, ಸಂಘಟನೆಗಳು, ಮತ್ತಿತ್ತರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker