ತುಮಕೂರು

ಭಾರತೀಯ ಸಂಸ್ಕೃತಿಯಲ್ಲಿ ಗೋಪೂಜೆಗೆ ವಿಶೇಷ ಸ್ಥಾನವಿದೆ : ಶ್ರೀ ಅಟವಿ ಶಿವಲಿಂಗಸ್ವಾಮೀಜಿ

ಡಾ.ಜಿ.ಪರಮೇಶ್ವರ್ ದಂಪತಿಗಳಿಂದ ಗೋಪೂಜೆ

ತುಮಕೂರು : ಭಾರತೀಯ ಸಂಸ್ಕೃತಿಯಲ್ಲಿ ಗೋಪೂಜೆಗೆ ವಿಶೇಷ ಸ್ಥಾನಮಾನವಿದ್ದು,ನೂರು ಪುಣ್ಯಕ್ಷೇತ್ರಗಳ ದರ್ಶನದ ಭಾಗ್ಯ ಒಂದು ಗೋಪೂಜೆಯಿಂದ ದೊರೆಯಲಿದೆ.ಇದು ವೀರಶೈವ,ಲಿಂಗಾಯಿತರಿಗಷ್ಟೇ ಒಳ್ಳೆಯದನ್ನು ಮಾಡುವುದಿಲ್ಲ.ಇಡೀ ಮನುಕುಲಕ್ಕೆ ಒಳ್ಳೆಯದನ್ನು ಮಾಡಲಿದೆ ಎಂದು ಶ್ರೀಅಟವಿ ಜಂಗಮ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗಸ್ವಾಮೀಜಿಗಳು ತಿಳಿಸಿದ್ದಾರೆ.
ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಜಂಗಮ ಸುಕ್ಷೇತ್ರದಲ್ಲಿ ಶ್ರೀಅಟವಿ ಮಹಾಸ್ವಾಮಿಗಳ 122ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳ ಕೊನೆಯ ದಿನದ ಗೋಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು,ಗೋಪೂಜೆಯ ಫಲ ಶ್ರೀಮಠದ ಭಕ್ತಾಧಿಗಳಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಇಂದು 108 ಗೋವುಗಳಿಗೆ 1108 ದಂಪತಿಗಳಿಂದ ಗೋಪೂಜೆ ಹಮ್ಮಿಕೊಳ್ಳಲಾಗಿದೆ.ಇದೊಂದು ಪುಣ್ಯದ ಕಾರ್ಯ ಎಂದರು.
ಶ್ರೀಮಠದ ಪರಮ ಭಕ್ತರಾದ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ದಂಪತಿಗಳು ಇಂದು ಬ್ರಾಹ್ಮಿ ಮರ್ಹೂತದಲ್ಲಿ ಗೋಪೂಜೆ ನೆರವೇರಿಸಿದ್ದಾರೆ.ಈಗಾಗಲೇ 500ಕ್ಕು ಹೆಚ್ಚು ಶರಣ ದಂಪತಿಗಳು ಗೋಪೂಜೆಗೆ ತಮ್ಮ ಹೆಸರು ನೊಂದಾಯಿಸಿದ್ದು,ಮದ್ಯಾಹ್ನ 3 ಗಂಟೆಯವರೆಗೂ ಶರಣರು ಕರೆತಂದಿರುವ ಗೋವುಗಳಿಗೆ ಪೂಜೆ ನಡೆಯಲಿದೆ. ಇದರ ಜೊತೆಗೆ ಎಂದಿನಂತೆ ಕಾರ್ತಿಕ ಲಕ್ಷ ದೀಪೋತ್ಸವ,ಅಕ್ಕಿಪೂಜೆ ಮತ್ತು ರೊಟ್ಟಿ ಉತ್ಸವ ನಡೆಯಲಿದೆ ಎಂದು ಶ್ರೀಅಟವಿ ಶಿವಲಿಂಗಸ್ವಾಮೀಜಿಗಳು ತಿಳಿಸಿದರು.
ಶ್ರೀಅಟವಿ ಜಂಗಮ ಸುಕ್ಷೇತ್ರದ ಮುಂದಿನ ಉತ್ತರಾಧಿಕಾರಿಯಾಗಿ ಶ್ರೀಮಲ್ಲಿಕಾರ್ಜುನ ದೇವರ ನ್ನು ಈಗಾಗಲೇ ನಾಡಿನ ಹಲವು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನೇಮಿಸಿದ್ದು,ಅವರು ಮುಂದಿನ ದಿನಗಳಲ್ಲಿ ಮಠವನ್ನು ನಡೆಸಿಕೊಂಡು ಹೋಗಲಿದ್ದಾರೆ.ನಾವುಗಳು ಅವರಿಗೆ ಬೇಕಾದ ಆಧ್ಯಾತ್ಮ ಸಾಧನೆ, ಧ್ಯಾನ,ತಪಸ್ಸಿನ ಮಾರ್ಗಗಳನ್ನು ಕಲಿಸುತ್ತಾ, ಮಠದಲ್ಲಿಯೇ ಉಳಿಯಲು ಬಯಸಿದ್ದೇವೆ.ಮೊದಲ ದಿನದ ಕೃಷಿ ಮೇಳ,ಎರಡನೇ ದಿನದ ಧರ್ಮಗೋಷ್ಠಿ ಮತ್ತು ಮಹಿಳಾ ಗೋಷ್ಠಿಗಳು ಯಶಸ್ವಿಯಾಗಿ ನಡೆದಿದ್ದು,ಬಂದ ಭಕ್ತಾಧಿಗಳಿಗೆ ಅನ್ನಸಂಪರ್ತಣೆ ನಡೆಸಲಾಗಿದೆ.ಶ್ರೀಅಟವೀಶ್ವರ ಕ್ಷೇಮಾಭಿವೃದ್ದಿ ಹಾಗೂ ಗೋ ಸಂರಕ್ಷಣೆ ಸೇವಾ ಸಮಿತಿ(ರಿ) ಕಾರ್ಯದರ್ಶಿ ಟಿ.ಬಿ.ಶೇಖರ್ ಹಾಗೂ ಇನ್ನಿತರ ಸದ್ಬಕ್ತರು ತಮಗೆ ವಹಿಸಿದ್ದ ಜವಾಬ್ದರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಶ್ರೀಶಿವಲಿಂಗಸ್ವಾಮೀಜಿ ತಿಳಿಸಿದರು.

ಗೋಪೂಜೆ ನೆರವೇರಿಸಿದ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ,ಅಟವಿ ಸ್ವಾಮೀಜಿಗಳ ಆದೇಶದಂತೆ ಕ್ಷೇತ್ರದ ಜನತೆಯ ಜೊತೆಗೆ,ನಾಡಿನ ಜನತೆಗೂ ಒಳಿತಾಗಲಿ ಎಂಬ ಸಂಕಲ್ಪದಿಂದ ಗೋಪೂಜೆಯನ್ನು ದಂಪತಿಗಳಿಬ್ಬರು ನೆರವೇರಿಸಿದ್ದೇವೆ. ಮಠದ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಗೋಸಂರಕ್ಷಣಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೇಖರ್ ಮಾತನಾಡಿ,ಶ್ರೀಅಟವಿ ಸ್ವಾಮೀಜಿಗಳ 122ನೇ ಜನ್ಮಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಸದ್ಭಕ್ತರ ಸಹಕಾರದಿಂದ ಸುಸೂತ್ರವಾಗಿ ನೆರವೇರಿವೆ.ಕೃಷಿ ಮೇಳದಲ್ಲಿ ರೈತರಿಗೆ ಹೊಸ ಕೃಷಿ ಅವಿಷ್ಕಾರಗಳ ಪರಿಚಯ ಮಾಡಿಸಲಾಗಿದೆ.ಇದರ ಜೊತೆಗೆ ಆರೋಗ್ಯ, ಶಿಕ್ಷಣ, ತೋಟಗಾರಿಕೆ, ಪಶುಸಂಗೋಪನೆ ಕುರಿತಂತೆ ಮಳಿಗೆಗಳನ್ನು ತೆರೆದು ಶಾಲಾ ಮಕ್ಕಳಿಗೆ ಕೃಷಿ ಮೇಳದ ಮಹತ್ವ ತಿಳಿಸಲಾಗಿದೆ.ಇದರ ಜೊತೆಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಪ್ಲಾನಿಟೋರಿಯಂ ಸಹ ತೆರೆದು ತಾರಾಲಯದ ವಿವರಣೆ ನೀಡಲಾಗಿದೆ.ಮಹಿಳಾಗೋಷ್ಠಿ, ಧರ್ಮಗೋಷ್ಠಿಗಳು ನಡೆದಿವೆ.ಇದು ಮೊದಲ ಕೃಷಿ ಮೇಳವಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಜನರು ಸೇರುವ ನಿರೀಕ್ಷೆ ಇದೆ ಎಂದರು.
ಶ್ರೀಅಟವಿ ಜಂಗಮ ಸುಕ್ಷೇತ್ರದಲ್ಲಿ ಗೋಶಾಲೆ ನಿರ್ಮಿಸಿಕೊಟ್ಟಿರುವ ಬ್ರಹ್ಮಸಂದ್ರ ಬಸವರಾಜು ಮಾತನಾಡಿ,ಶ್ರೀಅಟವಿ ಶಿವಲಿಂಗಸ್ವಾಮೀಜಿಗಳ ಆಣತಿಯಂತೆ ಗೋಶಾಲೆಯನ್ನು ನಿರ್ಮಿಸಿಕೊಡಲಾಗಿದೆ.ಗೋವುಗಳಿಂದ ಬರುವ ಸಗಣಿ, ಗಂಜಲದಿಂದ ವಿಭೂತಿ, ಚರ್ಮರೋಗಕ್ಕೆ ಔಷಧಿ ತಯಾರು ಮಾಡುವ ಉದ್ದೇಶವಿದೆ.ಈ ಕ್ಷೇತ್ರ ಮುಂದೊಂದು ದಿನ ಪ್ರಕೃತಿ ಚಿಕಿತ್ಸಾ ಕೇಂದ್ರವಾಗಿಯೂ ಪ್ರಸಿದ್ದಿ ಪಡೆಯಲಿದೆ ಎಂಬ ವಿಶ್ವಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರಸ್ವಾಮೀಜಿ,ಬೆಳ್ಳಾವೆ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ,ಮಠದ ಉತ್ತರಾಧಿಕಾರಿ ಶ್ರೀಮಲ್ಲಿಕಾರ್ಜುನ ದೇವರು,ತುಮಕೂರು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್,ಮಹಾನಗರಪಾಲಿಕೆ ಸದಸ್ಯ ಟಿ.ಎಂ.ಮಹೇಶ್,ಶ್ರೀಮತಿ ಶೋಭಾ,ಟ್ರಸ್ಟಿಗಳಾದ ನಂಜುಂಡಪ್ಪ,ಸೀತಕಲ್ಲು ಕೃಷ್ಣಯ್ಯ,ಭೀಮರಾಜು, ಸಿದ್ದವೀರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker