ಶಿರಾ

ಕನ್ನಡ ನಾಡು ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ವೈವಿದ್ಯತೆ ಹೊಂದಿದ ನಾಡು : ತಹಶೀಲ್ದಾರ್ ಮಮತ

ವಿವೇಕಾನಂದ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆದ 67ನೇ ಕನ್ನಡ ರಾಜ್ಯೋತ್ಸವ

ಶಿರಾ : ಕನ್ನಡ ನಾಡು ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ವೈವಿದ್ಯತೆಯನ್ನು ಹೊಂದಿದ ನಾಡಾಗಿದೆ. ಕನ್ನಡ ಭಾಷೆ ಅನೇಕ ಮಹನೀಯರಿಂದ ಸಮೃದ್ಧವಾಗಿದೆ. ದೇಶದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವ ಏಕೈಕ ಭಾಷೆ ನಮ್ಮ ಕನ್ನಡ ಭಾಷೆ. ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಅದೃಷ್ಟವಂತರು ಎಂದು ತಹಶೀಲ್ದಾರ್ ಮಮತ ಹೇಳಿದರು.
ಅವರು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ಕನ್ನಡ ನಾಡಿನ ಶಿಲ್ಪಗಳು ಇಂದಿಗೂ ಜನರ ಕಣ್ಮನ ಸೆಳೆಯುತ್ತಿವೆ. ಕನ್ನಡ ನಾಡಿನ ಜನ ಕನ್ನಡ ಭಾಷೆ, ಸಂಸ್ಕೃತಿಯನ್ನು ಯಾವಾಗಲೂ ಪ್ರೀತಿಸಬೇಕು, ಕನ್ನಡ ಭಾಷೆ, ನೆಲ, ಜಲ, ಜೀವಿಗಳಿಗೆ ತೊಂದರೆ ಉಂಟಾದಲ್ಲಿ ಎಲ್ಲರೂ ಒಗ್ಗೂಡಿ ಕನ್ನಡಾಂಬೆಯ ಆತ್ಮಗೌರವ ಕಾಪಡುವ ದಿಟ್ಟ ಹೆಜ್ಜೆ ಇಡಬೇಕಿದೆ. ನವೆಂಬರ್ ಮಾಹೆಯಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಬದಲು ನಮ್ಮ ಬದುಕಿನ ನಿತ್ಯೋತ್ಸವವಾಗಿ ಆಚರಿಸಬೇಕು. ನಾವೆಲ್ಲ ಒಂದೇ ತಾಯಿಯ ಮಕ್ಕಳು ಯಾವುದೇ ಬೇದಬಾವವಿಲ್ಲದೆ ಒಟ್ಟಿಗೆ ಬಾಳೋಣ ಎಂದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಮಾತನಾಡಿ ಕನ್ನಡ ಕೇವಲ ಭಾಷೆಯಲ್ಲ ನಮ್ಮೆಲ್ಲರ ಭಾವನೆ, ಸಂಸ್ಕೃತಿ, ಸಂಸ್ಕಾರ, ನಮ್ಮೆಲ್ಲರ ಬದುಕಿನ ದರ್ಶನ 2000 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ವಿಶ್ವದಲ್ಲೇ ವಿಶಿಷ್ಟ ಸ್ಥಾನವಿದೆ. ಕನ್ನಡ ನಾಡಿನ ಪುಣ್ಯಭೂಮಿಯಲ್ಲಿ ಜನಿಸಿರುವ ನಾವೆಲ್ಲರೂ ಧನ್ಯರು. ಕವಿರಾಜ ಮಾರ್ಗದಲ್ಲಿ ಅಮೋಘವರ್ಷ ನೃಪತುಂಗರು ಬರೆದಿರುವಂತೆ ಕನ್ನಡಿಗರು ಎಂಥಹ ಕಠಿಣ ಪರಿಸ್ಥಿತಿಯನ್ನೂ ಎದುರಿಸುವ ಧೈರ್ಯವುಳ್ಳವರು, ವಿನಯವಂತರು, ಉತ್ತಮ ಗುಣವುಳ್ಳವರು ಎಂದು ಹೇಳಿದ್ದಾರೆ. ಮಾನವ ಜನ್ಮ ಒಂದೇ ಎಂಬ ನೀತಿ ಪಾಠವನ್ನು ಬೋಧಿಸಿದ ಬಸವಣ್ಣನವರು ಕನ್ನಡಿಗರು. ಕನ್ನಡ ಭಾಷೆ ಹಲವಾರು ಕವಿಗಳು, ಸಾಹಿತಿಗಳಿಂದ ಶ್ರೀಮಂತವಾಗಿದೆ. ಕುವೆಂಪುರವರು ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀನು ಕನ್ನಡವಾಗಿರು. ಕನ್ನಡವೇ ನಿತ್ಯ ಕನ್ನಡವೇ ಸತ್ಯ ಎಂದು ಹೇಳಿದ್ದಾರೆ. ವಿಶ್ವದಲ್ಲಿ ಸಹಸ್ರಾರು ಭಾಷೆ ಇವೆ. ಕನ್ನಡ ಭಾಷೆಯನ್ನು ಬೆಳೆಸುವ ಜವಾಬ್ದಾರಿ 6 ಕೋಟಿ ಕನ್ನಡಿಗರ ಮೇಲಿದೆ. ಮುಂದಿನ ಪೀಳಿಗೆಯ ವಾರಸುದಾರರು ನಾವೆಲ್ಲರೂ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆೆ, ಸಂಸ್ಕೃತಿ ನಮ್ಮ ಹೆಮ್ಮ. ಕನ್ನಡ ನಾಡಿನಲ್ಲಿ ಜನಿಸಿದ ನಾವೇ ಪುಣ್ಯವಂತರು ಎಂದ ಅವರು ಕೇಂದ್ರ ಸರಕಾರ ಹೊಸ ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿ ಮಕ್ಕಳ ಮೂಲ ಶಿಕ್ಷಣ ಅವರ ಮಾತೃಭಾಷೆಯಲ್ಲಿ ಆಗಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಇಂಜಿನಿರಿAಗ್ ಶಿಕ್ಷಣ ಕನ್ನಡದಲ್ಲಿ ನೀಡುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಆಲೋಚನೆ ಮಾಡಿದ್ದಾರೆ. ಅದೇ ರೀತಿ ಗೃಹಮಂತ್ರಿ ಅಮಿತ್ ಶಾ ಅವರು ಯಾವುದೇ ರಾಜ್ಯದಲ್ಲಿ ಎಂಬಿಬಿಎಸ್ ವಿದ್ಯಾಭಾಷೆಯನ್ನು ರಾಷ್ಟçಭಾಷೆ ಅಥವಾ ಸ್ಥಳೀಯ ಭಾಷೆಯಲ್ಲಿ ಮಾಡಬೇಕು ಎಂಬ ಆಲೋಚನೆ ಮಾಡಿದ್ದಾರೆ. ಹೀಗಾದರೆ ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣ ದೊರೆಯುತ್ತದೆ ಎಂದರು.

ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಅವರು ಮಾತನಾಡಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕೆನಡಾ ದೇಶದ ಸಂಸದರಾದ ಚಂದ್ರ ಆರ್ಯ ಅವರು ಕೆನಡಾ ಸಂಸತ್‌ನಲ್ಲಿ ಕನ್ನಡದಲ್ಲಿ ಮಾತನಾಡಿರುವುದು ಅವರು ಶಿರಾ ತಾಲ್ಲೂಕಿನವರು ಎಂಬುದು ನಮ್ಮ ಹೆಮ್ಮೆ. ಶಿರಾ ತಾಲ್ಲೂಕು ಇತಿಹಾಸವುಳ್ಳ ಪ್ರದೇಶ, ಶಿರಾ ನಗರದ ಪಕ್ಕದಲ್ಲಿರುವ ಕೈಗಾರಿಕಾ ವಸಹತು ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಮೊದಲು ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಬೇರೆ ರಾಜ್ಯದವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಮೊದಲು ಕನ್ನಡಿಗೆ ಉದ್ಯೋಗ ನೀಡಬೇಕು ಎಂದರು.
ವಿವಿಧ ಸಾಧಕರಿಗೆ ಸನ್ಮಾನ: ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯೋಗ ಕ್ಷೇತ್ರದಿಂದ ವಸಂತಲಕ್ಷ್ಮೀ, ಪತ್ರಿಕೋದ್ಯಮ ಕ್ಷೇತ್ರದಿಂದ ದೇವರಾಜು.ಎನ್, ಸಾಹಿತ್ಯ ಡಾ.ಲಕ್ಕನಹಳ್ಳಿ ಎಸ್.ಶೇಖ್ ಮೊಹಮ್ಮದ್ ಅಲಿ, ರಂಗಭೂಮಿ ಶ್ರೀರಾಮಯ್ಯ, ಸಮಾಜಸೇವೆ ಶಾಂತಮ್ಮ, ಕೃಷಿ ಕ್ಷೇತ್ರ ನಾಗರಾಜು,, ಶಿಕ್ಷಣ ಕ್ಷೇತ್ರ ಸಾವಿತ್ರಮ್ಮ, ನಾಟಿ ವೈದ್ಯರು ರ‍್ರಣ್ಣ, ವಿಶೇಷ ಸನ್ಮಾನಿತರಾಗಿ ಬಿ.ಕೆ.ನರಸಿಂಹರಾಜು ಬೇವಿನಹಳ್ಳಿ-ಅರೆವಾದ್ಯ ತಂಡದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಅಂಬುಜ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎಲ್.ರಂಗನಾಥ್, ಡಿವೈಎಸ್‌ಪಿ ನವೀನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ, ನಗರಸಭೆ ಸದಸ್ಯರಾದ ಉಮಾ ವಿಜಯರಾಜ್, ರಂಗರಾಜು, ಗ್ರೇಡ್-2 ತಹಶೀಲ್ದಾರ್ ಆರ್.ವಿ.ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್.ಆರ್, ತಾ.ಪಂ. ಇ.ಓ ಅನಂತರಾಜು, ಪೌರಾಯುಕ್ತ ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker