ಕುಣಿಗಲ್
ಪತ್ರಕರ್ತ ರೇಣುಕಾ ಪ್ರಸಾದ್ ತಾಲ್ಲೋಕ್ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ
ಕುಣಿಗಲ್ : ತಾಲ್ಲೋಕ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡ ಸುವರ್ಣ ಪ್ರಗತಿ ಕನ್ನಡ ದಿನಪತ್ರಿಕೆಯ ವರದಿಗಾರ ಬಿ ಎನ್ ರೇಣುಕಾ ಪ್ರಸಾದ್ ಅವರಿಗೆ ತಾಲೂಕಿನ ಹಲವಾರು ಹಿತೈಷಿಗಳು, ಸ್ನೇಹಿತರು, ಅಧಿಕಾರಿ ವರ್ಗದವರು, ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರು ಹಾಗೂ ಮತ್ತಿತರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೇಣುಕಾ ಪ್ರಸಾದ್ ತಾಲೂಕ್ ಆಡಳಿತ ನನ್ನ ಪತ್ರಿಕಾ ಕಾರ್ಯ ವೈಖರಿಯನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಹಾಗೂ ಈ ಪ್ರಶಸ್ತಿ ದೊರೆಯಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಸಹಕಾರ ನೀಡಿದ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.