ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‌ನಿಂದ ಬಾಂಗ್ಲಾ ದೇಶದ 9 ವರ್ಷದ ಬಾಲಕನಿಗೆ ಹೃದಯ ರಂದ್ರ ಶಸ್ತ್ರ ಚಿಕಿತ್ಸೆ ಯಶಸ್ವಿ : ಡಾ.ಜಿ.ಪರಮೇಶ್ವರ್ ಪ್ರಶಂಸೆ
ತುಮಕೂರು : ತುಮಕೂರಿನಲ್ಲಿ ಮೊಟ್ಟಮೊದಲ ಬಾರಿಗೆ ಬಾಂಗ್ಲಾ ದೇಶದ 9 ವರ್ಷದ ಕೌಶಿಕ್ ಬರ್ಮನ್ ಎಂಬ ಬಾಲಕನಿಗೆ ಸಂಕೀರ್ಣವಾದ ಕಾಂಜೆನೈಟಲ್ (ಜನ್ಮಜಾತ ಹೃದಯ ರೋಗ) ಸಮಸ್ಯೆಗೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಅಂತಾರಾಷ್ಟ್ರಿಯ ಮೈಲಿಗಲ್ಲು ದಾಟಿದೆ. ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ನಿರ್ದೇಶಕರು ಆದ ಡಾ.ಜಿ.ಪರಮೇಶ್ವರ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
1000ಕ್ಕೂ ಹೆಚ್ಚು ಕಾರ್ಡಿಯಾಲಜಿ ಪ್ರೊಸೀಜರ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, 130ಕ್ಕೂ ಹೆಚ್ಚು ಹೃದ್ರೋಗ ಶಸ್ತ್ರ ಚಿಕಿತ್ಸೆಗಳನ್ನು ಪೂರ್ಣಗೊಳಿಸಲಾಗಿದೆ. ಇದೀಗ ಆಸ್ಪತ್ರೆಯಲ್ಲಿ ವಿದೇಶಿ ರೋಗಿಯೊಬ್ಬರಿಗೆ ಅತ್ಯುತ್ತಮ ಚಿಕಿತ್ಸೆ ನೀಡಿದ ವೈದ್ಯರ ತಂಡ ಗಮನಾರ್ಹ ಮೈಲಿಗಲ್ಲಿನತ್ತ ದಾಪುಗಾಲು ಹಾಕಿದೆ. ಆ ಮೂಲಕ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಾಗಬಲ್ಲ ಆಧುನಿಕ ಉಪಕರಣಗಳ ಅಳವಡಿಕೆ, ತಜ್ಞ-ನುರಿತ ವೈದ್ಯರ ತಂಡ ತುಮಕೂರಿನಲ್ಲಿದೆ ಎಂಬುದು ಸಾಬೀತಾಗಿದೆ. ಭಾರತದಿಂದ ವಿದೇಶಕ್ಕೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ, ವಿದೇಶದ ರೋಗಿಗಳು ತುಮಕೂರಿನಂತ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ ಪಡೆಯುವಂತಾಗಿದೆ. ಸರ್ಜರಿಯಾದ ನಾಲ್ಕನೇ ದಿನ ಬಾಲಕ ಸಾಮಾನ್ಯರಂತೆ ಚಟುವಟಿಕೆ ಆರಂಭಿಸಿದ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಿಸಿದರು.
ಹೃದಯ ಶಸ್ತ್ರ ಚಿಕಿತ್ಸೆ ಒಳಗಾದ ಬಾಲಕ ಬಾಂಗ್ಲಾ ದೇಶದ ನೊಗಾ ಜಿಲ್ಲೆಯ ತೀರಾ ಹಿಂದುಳಿದ ಪ್ರದೇಶವಾದ ಪಡಸಾವಿಳಿ ಗ್ರಾಮದವನು. ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿದ್ದ ಬಾಲಕನ ಹೃದಯರೋಗ ಸಮಸ್ಯೆಯನ್ನು ಚಿಕಿತ್ಸೆ ಮೂಲಕ ಗುಣಪಡಿಸಿ ಆತನಿಗೆ ಮರುಜನ್ಮ ನೀಡುವಲ್ಲಿ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ ಮುಖ್ಯಸ್ಥರಾದ ಡಾ. ತಮೀಮ್ ಅಹಮ್ಮದ್ ನೇತೃತ್ವದ ತಂಡ ಯಶಸ್ವಿಯಾಗಿದೆ. ಈ ಸಂಕೀರ್ಣವಾದ ಕಾಂಜೆನೈಟಲ್ (ಜನ್ಮಜಾತ ಹೃದಯ ರೋಗ) ಸಮಸ್ಯೆಯನ್ನು ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮೂಲಕ ಬಗೆಹರಿಸಿದ ತಂಡವನ್ನು ಆಸ್ಪತ್ರೆಯ ನಿರ್ದೇಶಕರು ಆದ ಡಾ.ಜಿ.ಪರಮೇಶ್ವರ ಮುಕ್ತಕಂಠದಿಂದ ಶ್ಲಾಘಿಸಿದರು.
ಬಾಲಕನ ಹಿನ್ನಲೆ:-
ಬಾಲಕನ ತಂದ ಬಿಪುಲ್ ಬರ್ಮನ್ ಅವರು ಕೃಷಿಕರಾಗಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗದರಾಗಿದ್ದಾರೆ. ತಮ್ಮ ಗ್ರಾಮದ ಹಿರಿಯೊಬ್ಬರ ಮಾರ್ಗದರ್ಶನದಲ್ಲಿ ಬೆಂಗಳೂರಿಗೆ ಬಂದ ಇವರಿಗೆ ತುಮಕೂರಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‌ನಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ದೊರೆತ ನಂತರ ಡಾ. ತಮೀಮ್ ಅಹಮ್ಮದ್ ಅವರ ಸಂಪರ್ಕ ಪಡೆದುಕೊಂಡು ತಮ್ಮ ಪುತ್ರನ ಹೃದಯರೋಗದ ಮೂಲವನ್ನು ಪತ್ತೆ ಮಾಡಿಕೊಂಡಿದ್ದಾರೆ.
ಕೌಶಿಕ್ ಬರ್ಮನ್‌ಗೆ 2 ವರ್ಷವಿರುವಾಗಲೇ ಕಾಂಜೆನೈಟಲ್(ಜನ್ಮಜಾತ) ಹೃದಯ ರೋಗಕ್ಕೆ ತುತ್ತಾಗಿದ್ದ. ಆದರೆ ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ಸಮಸ್ಯೆ ಉಲ್ಬಣಗೊಂಡಿದ್ದರ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾದಾಗ ರೋಗದ ಸಂಕೀರ್ಣತೆ ಮತ್ತು ತೀಕ್ಷ್ಣತೆಯನ್ನು ಅರಿತ ಡಾ. ತಮೀಮ್ ಅಹಮ್ಮದ್ ನೇತೃತ್ವದ ತಂಡ ಬಾಲಕನಿಗೆ ಒಟ್ಟು 30 ದಿವಸಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿದೆ. ಜನ್ಮಜಾತ ಹೃದ್ರೋಗವು ಸಾಮಾನ್ಯ ಜನನ ದೋಷವಾಗಿದೆ. ಜನ್ಮಜಾತ ಹೃದ್ರೋಗವು ಜನ್ಮ ದೋಷದ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ, ಜನಿಸಿದ 100 ಶಿಶುಗಳಲ್ಲಿ 1 ಶಿಶು ಈ ರೋಗದಿಂದ ಬಳಲಬಹುದು, ಇಂತಹ ವಿಶಿಷ್ಟ ಕಾಯಿಲೆಯಿಂದ ಈ ಬಾಲಕ ಬಳಲುತ್ತಿದ್ದ. ಮಗು ಹುಟ್ಟುವ ಸಂದರ್ಭದಲ್ಲಿ (ಅಂದರೆ ಮಗು ಗರ್ಭಕೋಶದಲ್ಲಿದ್ದಾಗ ತೆರೆದಿರುವ ನರ, ಹುಟ್ಟಿದ ತಕ್ಷಣ ಮುಚ್ಚಿಕೊಳ್ಳಬೇಕು) ಹೃದಯದೊಳಗೆ ಇದ್ದ 2 ಮುಖ್ಯ ವಾಲ್ವ್ಗಳು ಪೂರ್ಣವಾಗಿ ಮುಚ್ಚಿಕೊಳ್ಳದಿದ್ದರಿಂದ ರಕ್ತಸ್ರಾವವಾಗುತ್ತಿತ್ತು. ಇದು ಸಂಕೀರ್ಣ ಪ್ರಕರಣವಾಗಿತ್ತು. ಒಂದು ವೇಳೆ ಇದಕ್ಕೆ ಚಿಕಿತ್ಸೆ ದೊರೆಯದಿದ್ದರೆ, ಹೃದಯ ದೊಡ್ಡದಾಗಿ ಅದರ ಕಾರ್ಯಗಳು ಸ್ಥಗಿತಗೊಳ್ಳುತ್ತಿದ್ದವು. ವಾಲ್ವ್ಗಳು ಮುಚ್ಚಿಕೊಳ್ಳದಿದ್ದರೆ ರಕ್ತದ ಹರಿಯುವಿಕೆಯಲ್ಲಿ ಒತ್ತಡ ಉಂಟಾಗಿ ಹೃದಯಕ್ಕೆ ತೊಂದರೆಯಾಗುತ್ತಿತ್ತು. ಈ ರೀತಿ ಕಾಂಜೆನೈಟಲ್ ಸಮಸ್ಯೆಯನ್ನು 9 ವರ್ಷದ ಕೌಶಿಕ್ ಬರ್ಮನ್ ಎದುರಿಸಿದ್ದ. ಬಾಲಕ ಎದುರಿಸುತ್ತಿದ ಸಮಸ್ಯೆ ಕುರಿತು ಆಸ್ಪತ್ರೆಯ ವೈದ್ಯರ ತಂಡ, ಸುದೀರ್ಘ ಅವಧಿ ಸಮಾಲೋಚನೆ ನಡೆಸಿ ಆಧುನಿಕ ಉಪಕರಣದ ಮೂಲಕ ಓಪನ್ ಆಗಿದ್ದ ನರವನ್ನು ಓಪನ್ ಹಾರ್ಟ್ ಶಸ್ತçಚಿಕಿತ್ಸೆಯ ಮೂಲಕ ಮುಚ್ಚಿ, ಜನ್ಮಜಾತ ರೋಗವನ್ನು ಗುಣಪಡಿಸಿದರು. ಈ ಚಿಕಿತ್ಸೆಯಿಂದ ಮಗುವಿನ ಮುಂದಿನ ಬೆಳವಣಿಗೆ ಉತ್ತಮವಾಗಿದೆ. ಅಲ್ಲದೆ ಸಾಮಾನ್ಯರಂತೆ ಮುಂದಿನ ಭವಿಷ್ಯ ಕಂಡುಕೊಳ್ಳಲಿದ್ದಾನೆ ಎಂದು ‘ಕಾರ್ಡಿಯಾಕ್ ಫ್ರಾಂಟಿ¬ಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಮುಖ್ಯಸ್ಥರಾದ ಡಾ. ಡಾ.ತಮೀಮ್‌ಅಹಮ್ಮದ್ ವಿವರಿಸಿದರು.
ಹೃದಯ, ಶ್ವಾಸಕೋಶ ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಅತ್ಯಾಧುನಿಕ ಯಂತ್ರ, ವೈದ್ಯಕೀಯ ಸಾಧನಗಳನ್ನು ಬಳಸಿ ನಡೆಸಲಾದ ಅಪರೂಪದ ಶಸ್ತ್ರ ಚಿಕಿತ್ಸೆಇದಾಗಿದೆ. ಮಕ್ಕಳ ಹೃದಯರೋಗ ಶಸ್ತ್ರ ಚಿಕಿತ್ಸೆಯನ್ನು ಸಮರ್ಥವಾಗಿ ಮಾಡುವ ಮೂಲಕ ತುಮಕೂರಿನಂತಹ ಪ್ರದೇಶದಲ್ಲಿ ಸೂಕ್ಷ್ಮ ರೀತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಬಹುದೆಂಬುದನ್ನು ತಮ್ಮ ವೈದ್ಯರ ತಂಡ ಈ ಪ್ರಕರಣದ ಮೂಲಕ ಸಾಬೀತು ಪಡಿಸಿದೆ ಎಂದು ಡಾ.ತಮೀಮ್‌ಅಹಮ್ಮದ್ ಅವರು ನುಡಿದರು.
ವೈದ್ಯರ ತಂಡ :-
‘ಕಾರ್ಡಿಯಾಕ್ ಫ್ರಾಂಟಿ¬ಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, 24 ಗಂಟೆಗಳ ತುರ್ತು ನಿಗಾ ಘಟಕ, ಪ್ರಯೋಗಾಲಯಗಳು, ವಿಕಿರಣ ಘಟಕ, ಸಿ ಟಿ ಸ್ಕ್ಯಾನರ್, ಎಂಆರ್‌ಐ ಸ್ಕಾö್ಯನರ್ ಸೌಲಭ್ಯ ಒಳಗೊಂಡಿದೆ. ಪೂರ್ಣ ಪ್ರಮಾಣದ ಹೃದಯ ರೋಗಗಳ ಪತ್ತೆ, ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ, ಶಾಶ್ವತ ಪೇಸ್ಮೇಕರ್ ಅಳವಡಿಕೆ, ವಾಲ್‌ವ್ಲೋಪ್ಲಾಸ್ಟಿ ಸೌಲಭ್ಯ ದೊರೆಯಲಿದೆ.
ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ನ ಮೇಲ್ವಿಚಾರಕರಾದ ಹಾಗೂ “ಕಾರ್ಡಿಯಾಕ್ ಫ್ರಾಂಟಿ¬ಡಾ” ಸಂಸ್ಥೆಯ ನಿರ್ದೇಶಕ ಡಾ.ತಮೀಮ್‌ಅಹಮ್ಮದ್ ನೇತೃತ್ವದ ಡಾ.ಅಬ್ದುಲ್, ಡಾ.ವಾಸುಬಾಬು, ಡಾ.ತಹೂರ್, ಅತೀರಾ, ವಿವೇಕ್, ಮತ್ತು ತಾಂತ್ರಿಕ ಸಿಬ್ಬಂದಿಯನ್ನೊಳಗೊಂಡ ತಂಡ ಸರ್ವಸನ್ನದ್ಧವಾಗಿ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಹಾರ್ಟ್ ಸೆಂಟರ್‌ನ ಸಿಇಓ ಹಾಗೂ ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್ ಅವರು.
ವೈದ್ಯರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಡಾ.ಜಿ.ಪರಮೇಶ್ವರ :-
ಕಾರ್ಡಿಯಾಕ್ ಫ್ರಾಂಟಿ¬ಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ನಡಿಯಲ್ಲಿ ಯಶಸ್ವಿ ಶಸ್ತçಚಿಕಿತ್ಸೆಗಳ ಪಯಣ ಮುಂದುವರಿಸುತ್ತಿರುವ ಡಾ. ತಮೀಮ್ ಅಹಮ್ಮದ್ ಅವರ ನೇತೃತ್ವದ ತಂಡದ ಸಾಧನೆಯನ್ನು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ನಿರ್ದೇಶಕರು ಆದ ಡಾ.ಜಿ.ಪರಮೇಶ್ವರ ಅವರು ಮುಕ್ತಕಂಠದಿಂದ ಶ್ಲಾಘಿಸಿ, ತುಮಕೂರಿನಂತ ಸ್ಥಳದಲ್ಲೂ ಮಹಾನಗರದ ಕಾರ್ಪೋರೇಟ್ ಆಸ್ಪತ್ರೆಗೆ ಸರಿಸಾಟಿಯಾಗಬಲ್ಲ ರೀತಿಯಲ್ಲಿ ವಿನೂತನ ಚಿಕಿತ್ಸಾ ವಿಧಾನಗಳ ಪ್ರಯೋಗದಲ್ಲಿ ಯಶಸ್ವಿಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸದಾ ಲಾಭವನ್ನೇ ನಿರೀಕ್ಷೆ ಮಾಡುವ ಆಸೆಯಿಲ್ಲ. ಜನತಾ ಸೇವೆಯನ್ನು ಮಾಡಬೇಕೆಂಬ ತಂದೆ ಡಾ.ಗಂಗಾಧರಯ್ಯ ಕನಸಿನಂತೆ ತುಮಕೂರು-ಶಿವಮೊಗ್ಗ, ಚಿತ್ರದುರ್ಗ ಮಾರ್ಗದ ಗ್ರಾಮಾಂತರ ಪ್ರದೇಶದ ಬಡಜನರಗೆ ಹೃದಯಕ್ಕೆ ಸಂಬAಧಪಟ್ಟ ಕನಿಷ್ಟ ಮೂಲಭೂತ ಸೇವೆ ನೀಡುವ ಸಂಕಲ್ಪ ನಮ್ಮದಾಗಿದೆ. ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯ ವಿಸ್ತರಣೆ, ನುರಿತ ವೈದ್ಯರ ಸೇವೆಯನ್ನು ಜನಸಮುದಾಯತ್ತ ತಲುಪಿಸುವ ಕೆಲಸ ನಡೆಯುತ್ತಿದೆ. ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಅತಿ ಕಡಿಮೆ ವೆಚ್ಚದಲ್ಲಿ ಮಹಾನಗರಗಳ ಆಸ್ಪತ್ರೆಗಳ ರೀತಿಯಲ್ಲಿ ಆಧುನಿಕ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಸಮಾಜದ ಕಟ್ಟಕಡೆಯ ಬಡಜನರಿಗೆ ಸಂಕಷ್ಟ ಕಾಲದಲ್ಲಿ ಆರೋಗ್ಯ ಸೇವೆ ಸಕಾಲದಲ್ಲಿ ದೊರೆಯಲಿ ಎಂಬ ಗುರಿಯನ್ನು ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಹೊಂದಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪಗ್ರತಿಯನ್ನು ಸಾಧಿಸುವತ್ತ ದಿಟ್ಟ ಹೆಜ್ಜೆ ಇಡಲಿದೆ ಎನ್ನುವ ಆಶಾಭಾವನೆ ನಾನು ಹೊಂದಿದ್ದೇನೆ ಎನ್ನುತ್ತಾರೆ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ನಿರ್ದೇಶಕರು ಆದ ಡಾ.ಜಿ.ಪರಮೇಶ್ವರ ಅವರು.
‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‌ನಲ್ಲಿ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸಾ ಕೇಂದ್ರಕ್ಕೆ ‘ಛಾಯ’ಎಂದು ನಾಮಕರಣ ಮಾಡಲಾಗಿದ್ದು, ವಿದೇಶಿ ಗುಣಮಟ್ಟದ ಆಧುನಿಕ ಸಲಕರಣೆಗಳನ್ನು ಒಳಗೊಂಡ ನುರಿತ ವೈದ್ಯರ ತಂಡ ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾಹೇ ವಿಶ್ವವಿದ್ಯಾಲಯದ ಸಮೂಹ ತಂಡ ಈ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ತುಮಕೂರು ಸುತ್ತಮುತ್ತಲ ಜಿಲ್ಲೆಗಳಲ್ಲಿರುವ ಸಮಾಜದ ಕಟ್ಟಕಡೆಯ ಬಡವರ ಮಕ್ಕಳಿಗೆ ಈ ಆರೋಗ್ಯ ಸೇವೆ ದೊರಕಿಸಲು ಸಂಸ್ಥೆ ಈ ಕೈಂಕರ್ಯ ಕೈಗೊಂಡಿದೆ.
ಸರ್ಕಾರದ ಯೋಜನೆಗಳಿಗೂ ಮುಕ್ತ ಅವಕಾಶ:-
ದೇಶಿ ಹಾಗೂ ವಿದೇಶಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ರೀತಿಯ ಹೃದಯ ರೋಗಗಳಿಗೆ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ನಲ್ಲಿ ಚಿಕಿತ್ಸೆ ನೀಡುವ ಸಾವiರ್ಥ್ಯವನ್ನು ಕಲ್ಪಿಸಲಾಗಿದೆ. ಗ್ರಾಮಾಂತರ ಪ್ರದೇಶದ ರೋಗಿಗಳಿಗೆ ಅತಿ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ತುಮಕೂರು, ಚಿತ್ರದುರ್ಗ, ಹಾಸನ ಮತ್ತು ದಾವಣಗೆರೆ ಜಿಲ್ಲೆ ರೋಗಿಗಳಿಗೆ ಅದರಲ್ಲು ಗ್ರಾಮಾಂತರ ಪ್ರದೇಶದ ಮಂದಿಗೆ ಆಸ್ಪತ್ರೆಯಲ್ಲಿ ಸರ್ಕಾರದ ಬಿ.ಪಿ.ಎಲ್, ಆಯುಷ್ಮಾನ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತವಾಗಿ ಸೇವೆ ಕಲ್ಪಿಸಲಾಗುತ್ತಿದೆ. ಆರಕ್ಷಕ ಇಲಾಖೆಗೂ ಸರ್ಕಾರದ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ ಎಂದು ಡಾ.ಜಿ.ಪರಮೇಶ್ವರ ಅವರು ವಿವರಿಸಿದರು.
ಧನ ಸಹಾಯಕ್ಕೆ ಸ್ವಾಗತ:-
ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ನೀಡಲು ಧನ ಸಹಾಯ ಮಾಡಬಯಸುವ ದಾನಿಗಳ ಮುಂದೆ ಸಂಸ್ಥೆಯು ಸ್ವಾಗತಿಸುತ್ತದೆ. ಇಷ್ಟೇ ಅಲ್ಲದೆ ಸಂಸ್ಥೆಯು ಜಿಲ್ಲೆಯ ಆರಕ್ಷಕ ಇಲಾಖೆ, ಅಗ್ನಿಶಾಮಕ ದಳ, ಕಾರಾಗೃಹ ಇಲಾಖೆ, ಸಶಸ್ತç ಮೀಸಲು ಪಡೆ, ದಕ್ಷಿಣ ಪಶ್ಚಿಮ ರೈಲ್ವೇ ಇಲಾಖೆಗಳ ಸಿಬ್ಬಂದಿಗಳ ಸಾಮಾನ್ಯ ತಪಾಸಣೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ವಸಂತನರಸಾಪುರದ ಇಂಡಸ್ಟ್ರೀಸ್ ಹತ್ತಿರ ಸಣ್ಣ ಆಸ್ಪತ್ರೆಯೊಂದನ್ನು ತೆರೆಯಲು ಸರ್ಕಾರದ ಅನುಮತಿ ಕೋರಲಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಶೀಲ್ ಚಂದ್ರ ಮಹಾಪಾತ್ರ, ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್ ಹಾಗೂ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡ ಹಾಗೂ ಬಾಲಕನ ತಂದ ಬಿಪುಲ್ ಬರ್ಮನ್ ಹಾಗೂ ತಾಯಿ ಶಿವಾನಿ ಮತ್ತು ಬಂಧುಗಳು ಹಾಜರಿದ್ದರು.