ಶಿರಾ ತಾಲ್ಲೂಕಿನಾದ್ಯಂತ ಕೆರೆ ಒತ್ತುವರಿ ತಡೆಗಟ್ಟಿ : ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ ತಾ.ಪಂ. ಸಭಾಗಂಗಣದಲ್ಲಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು
ಶಿರಾ : ತಾಲೂಕಿನಾದ್ಯಂತ ಕೆರೆ ಒತ್ತುವರಿ ಆಗದಂತೆ ಅಧಿಕಾರಿಗಳು ಗಮನ ವಹಿಸಿ. ಒತ್ತಯವರಿಗೆ ಯಾರಿಗೂ ಅವಕಾಶ ಮಾಡಿಕೊಡಬೇಡಿ, ಈಗಾಗಲೇ ಹಳ್ಳಗಳ ಒತ್ತುವರಿಯಿಂದ ಸಾವಿರಾರು ಎಕರೆ ಜಮೀನಗಳ ತೋಟಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿ ಕೆರೆಗಳ ಒತ್ತುವರಿಯನ್ನು ಎರಡು ತಿಂಗಳೊಳಗೆ ತೆರವುಗೊಳಿಸಬೇಕು ಎಂದು ಶಾಸಕ ಡಾಕ್ಟರ್ ಸಿ ಎಂ ರಾಜೇಶ್ ಗೌಡ ತಾಕೀತು ಮಾಡಿದರು.
ಅವರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ಒಂದನೇ ಮತ್ತು ಎರಡನೇ ತ್ರೆöÊಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗಿಂತ ಸಿಜೇರಿಯನ್ ಹೆಚ್ಚು ಆಗುತ್ತಿವೆ ಎಂದು ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿವೆ. ಸಹಜ ಹೆರಿಗೆಗಳನ್ನೂ ಸಿಜೇರಿಯನ್ ಮಾಡಲಾಗುತ್ತಿದೆಯೇ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ವೈದ್ಯರಿಗೆ ಪ್ರಶ್ನಿಸಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಡಿಎಮ್ ಗೌಡ ಅವರು ಮಾತನಾಡಿ ಶಿರಾ ತಾಲೂಕಿನ ಗಡಿಭಾಗದ ತಾಲೂಕುಗಳಿಂದ ಗಂಭೀರ ಸಮಸ್ಯೆಗಳ ಗರ್ಭಿಣಿ ಸ್ತಿçÃಯರು ಹೆರಿಗೆಗೆ ಆಗಮಿಸಿರುವುದರಿಂದ ಸಿಜರಿಯನ್ ಮಾಡಿ ಜೀವ ಉಳಿಸಬೇಕಾದ ಪರಿಸ್ಥಿತಿ ಇದೆ. ಇಡೀ ತುಮಕೂರು ಜಿಲ್ಲೆಯಲ್ಲಿ ನಮ್ಮ ಆಸ್ಪತ್ರೆಯಲ್ಲಿ ಮಾತ್ರ ಸಾಂಪ್ರದಾಯಿಕ ರೀತಿಯಲ್ಲಿ ಸಹಜ ತೆರಿಗೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಶಿರಾ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ಪಕ್ಕದ ಆಂದ್ರಪ್ರದೇಶ, ಹಾಗೂ ಪಕ್ಕದ ತಾಲ್ಲೂಕಿನಿಂದಲೂ ಗರ್ಭಿಣಿಯರು ಚಿಕಿತ್ಸೆಗೆ ಬರುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ಸಿಬ್ಬಂದಿ ಅವಶ್ಯಕತೆ ಇದೆ. ಆದ್ದರಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಪೂರೈಸಿ ಎಂದು ವೈದ್ಯರಾದ ಡಾ.ಸಿ.ಎಂ.ಗೌಡ ಶಾಸಕರಿಗೆ ಮನವಿ ಮಾಡಿದರು.
ಶಿರಾ ಪಶು ಆಸ್ಪತ್ರೆಯಲ್ಲಿ ವೈದ್ಯರು ಕುರಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಿದ ಕಾರಣ 10,000 ಬೆಲೆಬಾಳುವ ಕುರಿಗಳನ್ನು ಕೇವಲ ಇನ್ನೂರುಗಳಿಗೆ ಮಾಂಸ ಮಾರುವವರಿಗೆ ಮಾಡಬೇಕಾದ ಸ್ಥಿತಿ ರೈತರಿಗೆ ಉಂಟಾಗಿದೆ ಎಂದು ನಾಮನಿರ್ದೇಶನ ಸದಸ್ಯ ಯಲಿಯೂರ್ ಮಂಜುನಾಥ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಶು ಇಲಾಖೆ ವೈದ್ಯ ರಮೇಶ್ ಲಸಿಕೆ ಕೊರತೆ ಇದೆ ಎಂದರು. ನಂತರ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಜಾನುವಾರುಗಳಿಗೆ ನಾನಾ ವಿಧವಾದ ಕಾಯಿಲೆಗಳು ಬರುತ್ತವೆ ಆದುದರಿಂದ ಲಸಿಕೆಯನ್ನು ದಾಸ್ತಾನು ಇಟ್ಟುಕೊಳ್ಳಬೇಕೆಂದು ವೈದ್ಯರಿಗೆ ತಿಳಿಸಿದರು.
ಸರ್ಕಾರಿ ಸೌಲಭ್ಯಗಳನ್ನು ನೇರವೇರಿ ಫಲಾನುಭವಿಗೆ ನೀಡಿ: ತೋಟಗಾರಿಕೆ ಇಲಾಖೆ ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡದೆ ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಮತ್ತೊಮ್ಮೆ ಆರೋಪ ಕೇಳಿ ಬಂದರೆ ತೋಟಗಾರಿಕೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಮತಾ, ನಗರಸಭೆ ಪೌರಾಯುಕ್ತ ಯೋಗಾನಂದ, ತಾಲೂಕ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ತಾಲೂಕು ಪಂಚಾಯಿತಿ ಯೋಜನ ಪ್ರಾಧಿಕಾರದ ಅಧಿಕಾರಿ ರಂಗನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.