ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ : ಸಿಇಒ ವಿದ್ಯಾಕುಮಾರಿ
ಪಾವಗಡ : ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿ ಪಂ ಮುಖ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು.
ಪಟ್ಟಣದ ತಾ.ಪಂ. ಕಛೇರಿಯಲ್ಲಿ ಪ್ರಥಮ ಬಾರಿಗೆ ಕರೆಯಲಾಗಿದ್ದ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಮಾಡಿದರು.
ತಲೂಕಿನ ಬಹುತೇಕ ಗ್ರಾ.ಪಂ ಅಧಿಕಾರಿಗಳು ಸ್ಥಳೀಯವಾಗಿ ಲಭ್ಯವಿರದೆ ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ನಿರ್ಲಕ್ಷ ತೋರುತ್ತಿರುವುದು ಕೇಳಿಬಂದಿದ್ದು ಅಂತಹವರ ವಿರುದ್ದ ನಿರ್ದಾಕ್ಷöಣ್ಯ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಸಾರ್ವಜನಿಕರು ತಮ್ಮಗೆ ಬೇಕಾದ ಮಾಹಿತಿಗಳನ್ನು ಆರ್ ಟಿ ಐ ನಲ್ಲಿ ಕೇಳಿದಾಗ ಮಾಹಿತಿ ಕೊಡಲು ಅಧಿಕಾರಿಗಳು ಏಕೆ ಎದರುತ್ತೀರಿ, ಸರ್ಕಾರದ ನಿಯಮದ ಪ್ರಕಾರ ಮಾಹಿತಿಗಳನ್ನು ಖಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದರು.
ಪೋತಗಾನಹಳ್ಳಿ, ಬ್ಯಾಡನೂರು, ಗುಜ್ಜನಡು, ಅರಸೀಕರೆ, ವಳ್ಳೂರು, ರ‍್ಯಾಪ್ಟೆ ಗ್ರಾ.ಪಂ.ಪಿಡಿಒ ಗಳ ಕಾರ್ಯ ವೈಖರಿ ಸೇರಿದಂತೆ ಒಟ್ಟು 32 ದೂರುಗಳನ್ನು ಸ್ವೀಕರಿಸಿದ ಅವರು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದರು.
ಪ್ರತಿ ಗ್ರಾಮದಲ್ಲೂ ಶಾಲೆಗಳ ಕಾಂಪೌಂಡ್ ನಿರ್ಮಾಣ ಹಾಗೂ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ವಿಳಂಬ ಮಾಡದೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಇಒ ವಿದ್ಯಾಕುಮಾರಿ ರವರು ಪ್ರತಿ ಮಂಗಳವಾರ ಜಿಲ್ಲೆಯ ಒಂದು ತಾಲೂಕಿಗೆ ಭೇಟಿ ನೀಡಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಯಕ್ರಮ ಕೈಗೊಂಡಿದ್ದು ಗ್ರಾ.ಪಂ ವ್ಯಾಪ್ತಿಯ ಅಭಿವೃದ್ದಿ ಕಾರ್ಯಗಳು, ನರೇಗಾ ಖಾತೆಗಳು, ನೇಮಕಾತಿಗೆ ಸಂಬಂದಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಈ ವೇಳೆ ಜಿ,ಪಂ. ಅಧಿಕಾರಿಗಳಾದ ನರಸಿಂಹಮೂರ್ತಿ, ಸಣ್ಣಮಸಿಯಪ್ಪ, ಉಪ ಕಾರ್ಯದರ್ಶಿ ಆತಿಕ್ ಪಾಷಾ, ಮಖ್ಯ ಲೆಕ್ಕಾದಿಕಾರಿ ನರಸಿಂಹಮೂರ್ತಿ, ನರೇಗಾ ಸಂಯೋಜಕ ನಂಜೇಗೌಡ, ತಾ.ಪಂ. ಇ.ಒ. ಶಿವರಾಜಯ್ಯ, ಎ.ಡಿ. ರಂಗನಾಥ್, ಯೊಜನಾಧಿಕಾರಿ ಮಲ್ಲಿಕಾರ್ಜುನ್, ಮತ್ತು ಗ್ರಾ.ಪಂ ಪಿ.ಡಿ.ಒ.ಗಳು ಹಾಗೂ ಅಧಿಕಾರಿಗಳು ಇದ್ದರು.