ಬೀದರ : ಆಧುನಿಕತೆ ಮತ್ತು ಯಾಂತ್ರಿಕರಣದ ಇಂದಿನ ಕಾಲದಲ್ಲಿ ಬಹುತೇಕ ಜನರು ಜನಪದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ದೇಶಿ ಜನಪದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸುವ ಬೆಳೆಸುತ್ತ, ಮುಂದಿನ ಯುವ ಪೀಳಿಗೆಗೆ ಇದರ ಸಾರತ್ವ ತಿಳಿಸುವ ನಿಟ್ಟಿನಲ್ಲಿ ಇಂತಹ ಜನಪದ ಉತ್ಸವ, ಜಾತ್ರೆಗಳು ಸಹಕಾರಿಯಾಗುತ್ತವೆ ಎಂದು ವಿಧಾನ ಪರಿಷತ್ತಿನ ಸಭಾಪತಿಗಳಾದ ರಘುನಾಥರಾವ ಮಲ್ಕಾಪುರೆ ನುಡಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲೂಕಾ ಘಟಕ ಬೀದರ, ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ನಾವದಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ, ಸಂಸ್ಕೃತಿ ಸಚಿವಾಲಯ ಹಾಗೂ ಕರುಣಾಮಯ ಯುವಕ ಸಂಘ ನಾವದಗೇರಿ ಬೀದರ ಇವರ ಸಹಕಾರದಲ್ಲಿ ಶ್ರಾವಣ ಸಮಾಪ್ತಿ ಪ್ರಯುಕ್ತ ಹಮ್ಮಿಕೊಂಡ ನಮ್ಮೂರು ನಾವದಗೇರಿ ಜನಪದ ಜಾತ್ರೆ ಮತ್ತು ಜಾನಪದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
ಶ್ರಾವಣ ಸಮಾಪ್ತಿಯಲ್ಲಿ ಅನೇಕ ಜನಪದ ಕಲಾತಂಡಗಳಿಗೆ ಆಹ್ವಾನಿಸಿ ಹೊಸ ಮೆರಗನ್ನು ಕೊಟ್ಟು ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ ಮಾಡಿ ಜನಪದ ಕಲೆ ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಪ್ರಯುಕ್ತ ನಾವೆಲ್ಲರೂ ನಶಿಸಿ ಹೋಗುತ್ತಿರುವ ನಮ್ಮ ಭವ್ಯ ಭಾರತದ ಜಗತ್ತಿನಲ್ಲಿಯೇ ಶ್ರೀಮಂತ ಸಂಸ್ಕೃತಿಯಾದ ಜನಪದ ಸಂಸ್ಕೃತಿ ಉಳಿಸುವುದು ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಉತ್ಸವಗಳು, ಜಾತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆ ಮಾಡಿ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿ ರಾಷ್ಟಿçÃಯ ಭಾವೈಕ್ಯತಾ ಮನೋಭಾವನೆಯನ್ನು ಯುವಜನರಲ್ಲಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿಂದೂ ಧರ್ಮದ ಚಿಂತಕರಾದ ಈಶ್ವರಸಿಂಗ್ ಠಾಕೂರ್ ಮಾತನಾಡಿ “ಶುಕ್ಲತೀರ್ಥ ಮಂದಿರವು ನಮ್ಮ ಬೀದರ ನಗರದ ಎಲ್ಲಾ ಅತ್ಯುನ್ನತ ಝರಿಗಳಲ್ಲಿ ಇದೂ ಕೂಡಾ ಶ್ರೇಷ್ಠ ತೀರ್ಥಕ್ಷೇತ್ರವಾಗಿದೆ. ಇಲ್ಲಿ ಶುಕ್ಲ ಮನೆಗಳು ತಪಸ್ಸು ಮಾಡಿದ ಸ್ಥಳವಾಗಿದೆ. ಇಲ್ಲಿನ ನೀರಿನಲ್ಲಿ ಔಷಧಿಯ ಗುಣಧರ್ಮ ಹೊಂದಿದ್ದು, ಅನೇಕ ಚರ್ಮರೋಗದ ರೋಗಿಗಳು ಈ ನೀರಿನಲ್ಲಿ ಸ್ನಾನ ಮಾಡಿದರೆ ಅಂದು ರೋಗವಾಸಿಯಾಗುತಿತ್ತು. ಆದರೆ ಇಂದಿನ ದಿನಗಳಲ್ಲಿ ಈ ನೀರಿನಲ್ಲಿ ಚರಂಡಿ ನೀರು ಸೇರಿಕೊಂಡು ಕಲ್ಮಶವಾಗುತ್ತಿವೆ. ಪ್ರವಾಸೋದ್ಯಮ ಇಲಾಖೆಯವರು ಈ ಐತಿಹಾಸಿಕ ಸ್ಥಳಕ್ಕೆ ಗಮನವಹಿಸಿ ವಿಶೇಷ ಯೋಜನೆ ರೂಪಿಸಿ ಅಭಿವೃದ್ಧಿಗೊಳಿಸಬೇಕೆಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಆಡಳಿತ ಮಂಡಳಿ ಸದಸ್ಯರಾದ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ “ಶುಕ್ಲತೀರ್ಥ ಮಡಿವಾಳೇಶ್ವರ ಶಿವಮಂದಿರ ಹಲವು ಐತಿಹಾಸಿಕ ಪ್ರಧಾನ್ಯತೆ ಹೊಂದಿದೆ. ಇಂತಹ ಐತಿಹಾಸಿಕ ಪವಿತ್ರ ಸ್ಥಳದಲ್ಲಿ ಸುಮಾರು ವರ್ಷಗಳಿಂದ ಜಾನಪದ ಪರಿಷತ್ತಿನ ವತಿಯಿಂದ ವಿಭಿನ್ನ ರೀತಿಯಲ್ಲಿ ರಾಜ್ಯಮಟ್ಟದ ಕಲಾವಿದರಿಗೆ ಆಹ್ವಾನಿಸಿ ಜನಪದ ಕಲೆ ಸಂಸ್ಕೃತಿಯನ್ನು ಈ ಭಾಗದ ಜನತೆಗೆ ತಿಳಿಸಿಕೊಡುವ ಕಾರ್ಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅಖಿಲ ಭಾರತ ಜನಪದ ಸಮ್ಮೇಳನ ಬೀದರ ಆಯೋಜಿಸಲು ಪರಿಷತ್ತಿನ ರಾಜ್ಯ ಅಡಳಿತ ಮಂಡಳಿ ಸಮಿತಿ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ ಪತ್ರ ವ್ಯವಹಾರ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿ ಹೊಸಳ್ಳಿ, ಡೆನ್ ನೆಟ್ವರ್ಕ್ ಮಾಲಿಕರಾದ ರವೀಂದ್ರ ಸ್ವಾಮಿ, ವೈಬ್ಸ್ ಹೊಟೇಲ್ ಮಾಲಿಕರಾದ ರಾಜು ಮಾಳಗೆ, ರಾಜ್ಯ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಸಮುದಾಯ ಮುಖಂಡರಾದ ಭರತ ಶೆಟಕಾರ, ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುಂಡಲಿಕರಾವ ಪಾಟೀಲ ಗುಮ್ಮಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂತೋಷ ಕಾಮಣ್ಣ, ಶಿವರಾಜ ಬೆನಕನಳ್ಳಿಕರ್, ಸಂಗಪ್ಪ ಬೀಕ್ಲೆ, ಅನೀಲ ರಾಜಗಿರಾ, ಮಡಿವಾಳಯ್ಯ ಸ್ವಾಮಿ, ರಾಜಕುಮಾರ ಡೊಂಗರಗಿ, ಭಕ್ತರಾಜ ಪಾಟೀಲ, ಬಾಲಾಜಿ ಪಾಟೀಲ, ಸಾಯಿ ಮಡಿವಾಳ, ನಾಗೇಶ ಖ್ಯಾಮಾ, ಶಿವಕುಮಾರ ದಾನಾ, ಪ್ರಮೋದ ಸ್ವಾಮಿ, ರವಿ ಗಿರಿ, ನೀಲೇಶ ಪಾಂಡ್ರೆ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಮಂಠಾಳೆ, ಪವನ ಬಿರಾದಾರ, ಕೃಷ್ಣ ಕುಂಬಾರ, ಸುನೀಲ ಕೋಳಿ, ದಿಲೀಪ ಕೋಳಿ, ಸಾಗರ ಗೌರ, ವಿಜಯ ಮೇತ್ರೆ, ಅಶೋಕ ಬರಿದಾಬಾದೆ, ಕಿರಣ ಕೋಳಿ, ಸಚಿನ ಕುಂಬಾರ, ನಾಗನಾಥ ಮಾನೆ, ಗುಂಡು ಬಜಾರೆ, ಗಣೇಶ ಹೆಬ್ಬಾಳೆ ಸೇರಿದಂತೆ ಅನೇಕರಿದ್ದರು.
ಎಸ್.ಬಿ.ಕುಚಬಾಳ ನಿರೂಪಿಸಿದರು. ಕಜಾಪ ಜಿಲ್ಲಾ ಸಂಚಾಲಕ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷರಾದ ಓಂಪ್ರಕಾಶ ಬಜಾರೆ ಪ್ರಾಸ್ತಾವಿಕ ಮಾತನಾಡಿದರು. ಸೇವಾ ಸಮಿತಿ ಅಧ್ಯಕ್ಷ ರಾಜಕುಮಾರ ಜಮಾದಾರ ವಂದಿಸಿದರು.