ಚಿಕ್ಕನಾಯಕನಹಳ್ಳಿ
ಸ್ವಾತಂತ್ರ್ಯ ದಿನಾಚರಣೆಗೆ ತಾಲ್ಲೂಕು ಆಡಳಿತದಿಂದ ಸಿದ್ದತೆ
ಚಿಕ್ಕನಾಯಕನಹಳ್ಳಿ : ತಾಲ್ಲೂಕು ಆಡಳಿತ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ 75 ನೇ ಸ್ವಾತಂತ್ರö್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲು ಮಳೆಯ ಭೀತಿಯ ನಡುವೆ ಸಕಲ ಸಿದ್ದತೆಯನ್ನು ಕೈಗೊಂಡಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗು ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ ಸೋಮವಾರ ಬೆಳಗ್ಗೆ 9 ಗಂಟೆಗೆ ರಾಷ್ಟç ಧ್ವಜಾರೋಹಣ ಮಾಡಿ ಗೌರವ ದೀಕ್ಷೆ ಸ್ವೀಕರಿಸುವರು. ಆರಕ್ಷಕ ಇಲಾಖೆ, ಶಾಲಾ ಮಕ್ಕಳು, ಗೃಹರಕ್ಷಕ ದಳದವರಿಂದ ಗೌರವ ದೀಕ್ಷೆ ಪಡೆದು ಸಂದೇಶವನ್ನು ನೀಡುವರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ತೇಜಸ್ವಿನಿ, ಸಿಪಿಐ ನಿರ್ಮಲ, ಪುರಸಭಾಧ್ಯಕ್ಷೆ ಪುಷ್ಪಾ, ಇಓ ವಸಂತ್‌ಕುಮಾರ್, ಬಿಇಓ ಮನಮೋಹನ್, ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಹಾಜರಿರುವರು. ಸಂಜೆ 6.30ರಿಂದ ಕನ್ನಡ ಸಂಘದ ವೇದಿಕೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.