ರಾಷ್ಟ್ರಧ್ವಜಕ್ಕೆ ಅವಮಾನ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತಂಗಿದ್ದ ನಿವಾಸದ ನಿರ್ಲಕ್ಷ್ಯ : ಪ್ರಧಾನಿ ಸೂಚನೆಯನ್ನು ಪಾಲಿಸದ ತಿಪಟೂರು ತಾಲ್ಲೂಕು ಆಡಳಿತ
ತಿಪಟೂರು : ಜಗತ್ತಿಗೆ ಶಾಂತಿ ಮಂತ್ರ, ಅಹಿಂಸೆ, ಅಸ್ವಶೃತೆ ನಿವಾರಣೆ, ಸ್ವದೇಶಿ ಮಹತ್ವ ತಿಳಿಸಿಕೊಟ್ಟ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಉಳಿದು ಕೊಂಡಿದ್ದ ನಿವಾಸವನ್ನು ನಿರ್ಲಕ್ಷ್ಯ ಮಾಡಿ ಅವಮಾನಿಸಿರುವ ಘಟನೆ ತಿಪಟೂರಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನೆಡೆದಿದೆ.
ನಗರದಲ್ಲಿ ತ್ರಿರಂಗಾ ಹಾರಾಟದ ಅಪಮಾನವು ಸ್ವತ: ಶಿಕ್ಷಣ ಸಚಿವ ಬಿಸಿ ನಾಗೇಶ್ ಹಾಗೂ ಬಿಜೆಪಿ ತಾಲ್ಲೂಕು ಅದ್ಯಕ್ಷ ಬಳ್ಳೆಕಟ್ಟೆ ಸುರೇಶ್ ಹಾಗೂ ಬೆಂಬಲಿಗರಿಂದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿ ಪೋಲೀಸ್ ಠಾಣೆಗೂ ದೂರು ದಾಖಾಲಾಗಿರುವ ಜೊತೆಯಲ್ಲಿ ಮತ್ತೊಂದು ಅವಮಾನದ ಸರಣಿ ಮುಂದುವರೆದಿದೆ.
1927 ಆಗಸ್ಟ್ 27 ರಂದು ತಿಪಟೂರಿನ ರ‍್ವೆಲ್ವೆ ನಿಲ್ದಾಣದ ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ನಿವಾಸವು ತಾಲ್ಲೂಕು ಆಡಳಿತದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ನಿವಾಸದ ಮುಂದೆ ಘನ ತ್ಯಾಜ್ಯ ಘಟಕದ ತೊಟ್ಟಿಯನ್ನು ಕಟ್ಟಿ ಮನೆಯ ಸುತ್ತಲೂ ಸಹ ಕಸ ಕಡ್ಡಿಯಿಂದ ತುಂಬಿ ಮಹಾತ್ಮ ಗಾಂಧಿಜಿ ತಂಗಿದ್ದ ಮನೆಗೆ ಅವಮಾನ ಮಾಡಲಾಗಿದೆ.
ಕೇಂದ್ರ ಸರಕಾರವು ಹರ್ ಘರ್ ತ್ರಿರಂಗಾ ಅಭಿಯಾನದ ಮೂಲಕ ದೇಶಕ್ಕೆ ಸ್ವಾಂತ್ರತ್ಯದ ಅಮೃತ ಮಹೋತ್ಸವದ ಆಚರಣೆಗೆ ಪ್ರಧಾನಿ ನರೇಂದ್ರಮೋದಿಯವರು 13 ರಿಂದ 15ರವೆರೆಗೆ ಕರೆ ನೀಡಿದ್ದರೂ ಸಹ ಗಾಂಧೀಜೀ ತಂಗಿದ್ದ ನಿವಾಸದ ಮನೆಯ ಮೇಲೆ ತ್ರಿರಂಗಾ ಹಾರಿಸದೆ ಇಲ್ಲದಿರುವುದು ಮತ್ತೊಂದು ಅವಮಾನ ಮತ್ತು ತಾಲ್ಲೂಕು ಆಡಳಿತದ ನಿರ್ಲಕ್ಷ್ಯವಾಗಿದೆ.
ಇದನ್ನು ಮನಕಂಡ ಮಾಜಿ ಶಾಸಕ ಕೆ. ಷಡಕ್ಷರಿ ಸ್ಥಳಕ್ಕೆ ಭೇಟಿ ನೀಡಿ ನಿವಾಸದ ಎದುರು ಧ್ವಜ ಸ್ತಂಭ ನಿರ್ಮಾಣಕ್ಕೆ ತಯಾರಿ ಮಾಡಿಕೊಂಡಿದ್ದು ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ದೂರಿದ್ದಾರೆ. ಮುಂದಿನ ದಿನಗಳಲ್ಲಿ ಭಾರತೀಯರಿಗೆ ಗಾಂಧೀಜಿ ನೆನಪು ಉಳಿಯ ಬೇಕು ಎಂಬುದಾದರೆ ಇಂತಹ ಸ್ಮಾರಕಗಳ ಉಳಿವು ಇಂದಿನ ಯುವಜನತೆಗೆ ಅತ್ಯವಶ್ಯಕವಾಗಿದೆ ಆದ್ದರಿಂದ ಸರಕಾರಗಳು ಹಾಗೂ ಜನಪ್ರತಿನಿಧಿಗಳ ಆಸಕ್ತಿ ವಹಿಸಬೇಕಾಗಿದೆ.
ಗಾಂಧೀಜಿಯವರ ತಂಗಿದ್ದ ನಿವೇಶನವನ್ನು ಸ್ಮಾರಕ ಮಾಡದಿದ್ದರೂ ಪರವಾಗಿಲ್ಲ ಕನಿಷ್ಠ ಪಕ್ಷ ಮಹಾತ್ಮರು ತಂಗಿದ್ದ ಜಾಗವನ್ನು ಸ್ವಚ್ಛತೆ ಮಾಡುವ ಕಾಯಕಲ್ಪವನ್ನು ಮಾಡಬೇಕಾಗಿದೆ.
ಮಹಾತ್ಮ ಗಾಂಧೀಜಿ ತಂಗಿ ಹೋಗಿದ್ದ ಸ್ಥಳದ ಪ್ರಾವಿತ್ರತೆ ಕಾಪಾಡವ ನಿಟ್ಟಿನಲ್ಲಿ ಅಲ್ಲಿ ಧ್ವಜಸ್ತಂಭ ನಿರ್ಮಿಸಿ ಧ್ವಜಾರೋಹಣ ಮಾಡಲು ಜಿಲ್ಲಾಡಳಿತ ಅನುಮತಿ ಕೂಡಲಿಲ್ಲ, ಕಡೆ ಪಕ್ಷ ಹರ್ ಘರ್ ತ್ರೀರಂಗಾ ರೀತಿಯಲ್ಲಿ ಧ್ವಜಾರೋಹಣ ಮಾಡಲೂ ಕೂಡ ಸರ್ಕಾರ ಅನುಮತಿ ನಿರಾಕರಿಸಿರುವುದು ವಿಪರ್ಯಾಸವಾಗಿದೆ.
-ಕೆ ಷಡಾಕ್ಷರಿ ಮಾಜಿ ಶಾಸಕ
ವರದಿ : ಪ್ರಶಾಂತ್ ಕರೀಕೆರೆ