ಹಾಲು ಉತ್ಪಾದಕರಿಗೆ ಆರೋಗ್ಯ ಕಾಳಜಿಗಾಗಿ ಕುರ್ಚಿ ವಿತರಣೆ
ತಿಪಟೂರು : ಹಾಲು ಉತ್ಪಾದಕರು ಆರ್ಥಿಕತೆಯ ಜೊತೆಯಲ್ಲಿ ಅವರ ಆರೋಗ್ಯದ ಕಾಳಜಿಯನ್ನು ಗಮಿನಿಸುವುದು ಸಂಘಗಳ ಉತ್ತಮ ಕೆಲಸವಾಗಿದೆ ಎಂದು ಕರ್ನಾಟಕ ರಾಜ್ಯ ಹಾಲು ಮಂಡಳದ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ತಿಳಿಸಿದರು.
ಕಸಬಾ ಹೋಬಳಿಯ ಕೆ. ಕರೀಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಉತ್ಪಾದಕರಿಗೆ ಕುಳಿತುಕೊಳ್ಳುವ ಕುರ್ಚಿಗಳನ್ನು ಉಚಿತವಾಗಿ ನೀಡಿ ಮಾತನಾಡಿದರು.
ತುಮೂಲ್ ಯಾವಾಗಲೂ ರೈತರ ಕಾಳಜಿಗೆ ಮತ್ತು ಉನ್ನತಿಗೆ ಹಲವಾರು ಯೋಜನೆಗಳನ್ನು ಜಾರಿಗೋಳಿಸುತ್ತಿದ್ದು ಅದೇ ರೀತಿಯಲ್ಲಿ ಕರೀಕೆರೆ ಸಂಘವು ನೂತನ ಕಾರ‍್ಯಕ್ರಮಗಳನ್ನು ರೂಪಿಸುತ್ತಿದೆ ಅದರಂತೆ ಒಕ್ಕೂಟದಲ್ಲಿ ರಾಸು ವಿಮೆ, ಉತ್ಪಾದಕರ ವಿಮೆ, ವಿದ್ಯಾರ್ಥಿ ವೇತನ ಇಂತಹ ಹಲವಾರು ಯೋಜನೆಗಳನ್ನು ಜಾರಿಯಲ್ಲಿದೆ ಆದ್ದರಿಂದ ರೈತರು ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಎಂದರು.
ಕರೀಕೆರೆ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ ಉತ್ಪಾದಕರು ಹಾಲು ಸರಬರಾಜು ಮಾಡುವ ಜೊತೆಗೆ ಅವರ ಆರೋಗ್ಯ ಕಾಳಜಿಯು ಸಹ ನಮ್ಮದಾಗಿರುತ್ತದೆ ಅದರಂತೆ ಹಿಂದೆ ಪಶು ಅಂತ್ಯ ಸಂಸ್ಕಾರಕ್ಕೆ ಎರಡು ಸಾವಿರ ಪೋತ್ಸಾಹ ಧನವನ್ನು ನೀಡಿದ್ದು ನಮ್ಮ ಸಂಘವು ಯಾವಾಗಲೂ ರೈತ ಅಭಿವೃದ್ದಿಯ ಪರ ಇರುತ್ತದೆ ಎಂದರು.
ಇದೇ ಸಂಧರ್ಬದಲ್ಲಿ ರಾಸು ಮರಣ ಪರಿಹಾರ ಹಾಗೂ ಉತ್ಪಾದಕರ ಮರಣ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.
ಕಾರ‍್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಶಿವನಂದಸ್ವಾಮಿ, ನಿರ್ದೇಶಕರಾದ ರಾಜಶೇಖರ್, ದಿನೇಶ್, ಉಷಾ ಮಂಜುನಾಥ್, ಲತಾ ಶಂಕರಪ್ಪ, ಮರುಳಸಿದ್ದಸ್ವಾಮಿ, ಲತೇಶ, ಮಾಜಿ ಅಧ್ಯಕ್ಷ ಪ್ರಶಾಂತ್‌ಕರೀಕೆರೆ, ಮಾಜಿ ಗ್ರಾ ಪಂ ಸದಸ್ಯ ರಾಜಶೇಖರ್ ಪರಮೇಶ, ಉತ್ಪಾದಕರಾದ ಬಸವರಾಜು, ಶಂಕರಪ್ಪ, ಗೌರಮ್ಮ, ನೀಲಕಂಠಯ್ಯ, ಘನಶ್ಯಾಂ, ವಿಜಯಣ್ಣ, ಲೋಕೇಶ, ಕಾರ್ಯದರ್ಶಿ ಸಿದ್ದರಾಮಯ್ಯ, ಹಾಲು ಪರೀಕ್ಷಕ ರವಿ ಮತ್ತಿತ್ತರು ಹಾಜರಿದ್ದರು.