ಕೊರಟಗೆರೆ
ಬೆಸ್ಕಾಂ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ
ಕೊರಟಗೆರೆ : ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಾರ್ಯ ಮತ್ತು ಪಾಲನಾ ಘಟಕ 1 ಮತ್ತು 2 ,ಕೋಳಾಲ ,ತೋವಿನಕೆರೆ ,ಹೊಳವನಹಳ್ಳಿ ,ಶಾಖೆಗಳಿದ್ದು ಒಟ್ಟು ಸುಮಾರು 68.418 ವಿದ್ಯುತ್ ಗ್ರಾಹಕರಿದ್ದು.ಇವರಿಗೆ ವಿದ್ಯುತ್ ಸಂಪರ್ಕ ಒದಗಿಸಲು 11 ಕೆ.ವಿ ವಿದ್ಯುತ್ ಮಾರ್ಗಗಳು ಮತ್ತು ಎಲ್.ಟಿ ವಿದ್ಯುತ್ ಮಾರ್ಗಗಳನ್ನು ವಿಸ್ತರಿಸಿ ವಿವಿಧ ಸಾಮರ್ಥ್ಯದ ಪರಿವರ್ತಕಗಳನ್ನು ಅಳವಡಿಸಿ.ವಿದ್ಯತ್ ಸರಬರಾಜಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಳೆಗಾಲ ಪ್ರಾರಂಭವಾಗಿರುವುದರಿಂದ ಭಾರಿ ಗಾಳಿ ಮತ್ತು ಮಳೆಗೆ ಮರಗಿಡಗಳು ಬೆವಿಕಂ ವಿದ್ಯುತ್ ಮಾರ್ಗಗಳ ಮೇಲೆ ಬಿದ್ದು .ತಂತಿಗಳು ತುಂಡಾಗಿ ಅಪಾಯವಾಗುವ ಸಂಭವ ಹೆಚ್ಚಾಗಿರುತ್ತದೆ.ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವೈರುಗಳನ್ನು ಮುಟ್ಟಬಾರದು .ಸಮಸ್ಯೆ ಕಂಡುಬಂದಲ್ಲಿ ಮೇಲ್ಕಾಣಿಸಿದ ಶಾಖೆಯ ವ್ಯಾಪ್ತಿಗೆ ಬರುವ ಗ್ರಾಮಗಳ ಸಾರ್ವಜನಿಕರು ಇಂತಹ ಸಂದರ್ಭದಲ್ಲಿ ಸಂಬಂಧ ಪಟ್ಟ ಶಾಖಾಧಿಕಾರಿಗಳಿಗೆ ಮತ್ತು ವಿದ್ಯುತ್ ವಿತರಣಾ ಕೇಂದ್ರಕ್ಕೆ ತಿಳಿಸಲು ಕೋರಲಾಗಿದೆ.
ಕಾರ್ಯ ಮತ್ತು ಪಾಲನಾ ಘಟಕ- 1 ಶಾಖಾಧಿಕಾರಿ ಹೆಸರು – ವಿ.ಪ್ರಸನ್ನಕುಮಾರ್.ಮೊ ನಂ – 9449843937.
ಕಾರ್ಯ ಮತ್ತು ಪಾಲನಾ ಘಟಕ – 2 ಶಾಖಾಧಿಕಾರಿ ಹೆಸರು – ಮಲ್ಲಯ್ಯ ಹೆಚ್.ಸಿ , ಮೊ ನಂ – 9449843949.
ತೀತಾ ಶಾಖೆ- ಶಾಖಾಧಿಕಾರಿ ಹೆಸರು – ಟಿ.ವೀರೇಶ್ ,ಮೊ ನಂ 9449843930.
ಎಂ.ಯು.ಎಸ್.ಎಸ್.ನ ಹೆಸರು 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಕೊರಟಗೆರೆ. ಮೊ ನಂ.8277895819
ತೋವಿನಕೆರೆ ಶಾಖೆ – ಶಾಖಾಧಿಕಾರಿ ಹೆಸರು – ಅಶೋಕ್ ನಾಯ್ಕ್. ಮೊ ನಂ- 9449843948 , 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ.ತೋವಿನಕೆರೆ ಮೊ.ನಂ 8277895814.
ಕೋಳಾಲ ಶಾಖೆ – ಶಾಖಾಧಿಕಾರಿ ಹೆಸರು – ಮನೋಜ್ ಸಿ.ಬಿ ಮೊ.ನಂ 9449843962 ,66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಕೋಳಾಲ. ಮೊ ನಂ – 8277895816.
ಹೊಳವನಹಳ್ಳಿ ಶಾಖೆ – ಶಾಖಾಧಿಕಾರಿ ಹೆಸರು – ಬಿ.ಸಿ ಯೋಗೇಶ್ ,ಮೊ ನಂ – 9449843945 ,66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಹೊಳವನಹಳ್ಳಿ ಮತ್ತು ನಿಟ್ರಹಳ್ಳಿ. ಮೊ ನಂ – 636305495 ಮತ್ತು 8904297698. ಸಂಪರ್ಕಿಸಲು ಕೋರಲಾಗಿದೆ.
ವಿದ್ಯುತ್ ಮಾರ್ಗಗಳ ಕೆಳಗೆ ತೋಟಗಳನ್ನು ನಿರ್ಮಿಸುವುದಾಗಲೀ ,ಗಿಡಗಳನ್ನು ನೆಡುವುದಾಗಲೀ ,ಕಟ್ಟಡ ನಿರ್ಮಾಣ ಕೆಲಸಗಳಾಗಲೀ ,ವಿದ್ಯುತ್ ಕಂಬಗಳಿಗೆ ತಂತಿ/ ಹಗ್ಗ ಕಟ್ಟಿ ಬಟ್ಟೆ ಒಣಗಿಸುವುದು ,ಸಾಕು ಪ್ರಾಣಿಗಳನ್ನು ಕಂಬಕ್ಕೆ ಕಟ್ಟುವುದು,ಮನೆಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲು ಕೊಕ್ಕೆ ಹಾಕುವುದು,ಹುಲ್ಲಿನ ಬಣವೆಗಳನ್ನು ವಿದ್ಯುತ್ ಮಾರ್ಗದ ಕೆಳಗೆ ಹಾಕುವುದು,ವಿದ್ಯುತ್ ಕಂಬಗಳಿಗೆ ಆಧಾರವಾಗಿ ಹಾಕಿರುವ ಗೈ- ವೈರುಗಳನ್ನು ತೆಗೆಯುವುದು ಇತ್ಯಾದಿ ಕೆಲಸಗಳನ್ನು ಮಾಡುವುದರಿಂದ ವಿದ್ಯುತ್ ಅಪಘಾತಗಳು ಆಗುವ ಸಂಭವವಿರುವುದರಿಂದ ಈ ರೀತಿಯ ಕೆಲಸಗಳನ್ನು ಕಡ್ಡಾಯವಾಗಿ ಮಾಡಬಾರದೆಂದು ಸೂಚಿಸಲಾಗಿದೆ. ಮತ್ತು ಅನಧಿಕೃತ ವ್ಯಕ್ತಿಗಳಿಂದ ಯಾವುದೇ ರೀತಿಯ ವಿದ್ಯುತ್ ನ ಕೆಲಸಗಳನ್ನು ಮಾಡಿಸಬಾರದೆಂದು ಸೂಚಿಸಿದ್ದು ಈ ಮೇಲಿನ ಎಲ್ಲಾ ಅಂಶಗಳನ್ನು ಅನುಸರಿಸದೆ ಸಾರ್ವಜನಿಕರಿಗೆ ಯಾವುದೇ ರೀತಿಯ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಬೆ ವಿ ಕಂ ಇಲಾಖೆಯು ಯಾವುದೇ ರೀತಿಯ ಜವಾಬ್ದಾರಿಯಾಗುವುದಿಲ್ಲವೆಂದು ಕೊರಟಗೆರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಜಿ ಅರಸರಾಜು ತಿಳಿಸಿದ್ದಾರೆ.