ಪ್ರವೀಣ್ ಹತ್ಯೆ ಖಂಡಿಸಿ ತಿಪಟೂರು ಬಂದ್ : ಜಿಹಾದಿಗಳಿಂದ ಹಿಂದೂ ಕಾರ್ಯಕರ್ತರ ಹತ್ಯೆಗೆ ಖಂಡನೆ
ತಿಪಟೂರು : ಇಂದು ಹಿತರಕ್ಷಣಾ ವೇದಿಕೆ ಹಾಗೂ ಬಜರಂಗದಳ ತಿಪಟೂರು ಪ್ರವೀಣ್ ಹತ್ಯೆ ಖಂಡಿಸಿ ಕರೆದಿದ್ದ ಬಂದ್ ಶಾಂತಿಯುತವಾಗಿ ನಡೆಯಿತು, ಬಂದ್ ಗೆ ಶಾಲಾ ಕಾಲೇಜುಗಳಿಗೆ ಸಂಪೂರ್ಣವಾಗಿ ರಜೆ ಘೋಷಿಸಲಾಗಿತ್ತು.
ನಗರದ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಬೆಂಬಲ ಸೂಚಿಸಿದವು ಆಸ್ಪತ್ರೆ ಮೆಡಿಕಲ್ ಶಾಪ್ ಮಾತ್ರ ತೆರೆದಿದ್ದು ರೋಗಿಗಳಿಗೆ ಯಾವುದೇ ತೊಂದರೆಯಾಗದೆ ಕಾರ್ಯನಿರ್ವಹಿಸಿದವು, ಕೆಲ ಹೋಟೆಲ್ ಗಳು ಸಹ ಮುಚ್ಚಿದ್ದವು ಪೆಟ್ರೋಲ್ ಬಂಕ್ ಮುಚ್ಚಿ ಬೆಂಬಲ ಸೂಚಿಸಿದರು ಹಿಂದೂ ಸಂಘಟನೆ ಗಳು ಕೆಂಪಾಂಬ ದೇವಸ್ಥಾನದಿಂದ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಾದ ದೊಡ್ಡಪೇಟೆ ರೈಲ್ವೇ ಸ್ಟೇಷನ್ ರಸ್ತೆ ಮುಖಾಂತರ ಹಾಸನ್ ಸರ್ಕಲ್ ವರೆಗೂ ಪಾದಯಾತ್ರೆ ನಡೆಸಿದರು.
ಸಿಂಗ್ರಿ ನಂಜಪ್ಪ ವೃತ್ತದ ಬಳಿ ಬಜರಂಗದಳದ ಗೋ ಪ್ರಮುಖ ನಾಗೇಶ್ ಮಾತನಾಡುತ್ತಾ ವಿಕೃತ ಮನಸ್ಸಿನ ಜಿಹಾದಿಗಳು ಹಿಂದೂ ಪರ ಹೋರಾಟಗಾರ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೂಂಡು ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್ ಹತ್ಯೆಯನ್ನು ಮಾಡಿದ್ದಾರೆ ಇವರಿಗೆ ಜೈಲಿನಲ್ಲಿ ರಾಜಾಆತಿಥ್ಯ ಸಿಗುತ್ತಿದ್ದು, ಯಾವುದೇ ಭಯಪಡದೆ ಕೊಲೆ ಮಾಡುತ್ತಿದ್ದಾರೆ ಇಂತಹವರನ್ನು ಪೊಲೀಸರು ನಡುರಸ್ತೆಯಲ್ಲಿ ನಿಲ್ಲಿಸಿ ಶಿಕ್ಷೆ ನೀಡಬೇಕು ಎಂದುರು.
ವಿ ಎಚ್ ಪಿ ಯ ಮುಖಂಡ ಆಟೋ ಹರ್ಷ ಮಾತನಾಡಿ ಪ್ರಪಂಚದಲ್ಲಿ ಹಿಂದೂ ದೇಶವಾದ ಭಾರತದಲ್ಲಿ ಭಾರತೀಯರು ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಾರೆ ಹೊರತು ಬೇರೆ ದೇಶಗಳಲ್ಲಿ ಹೋರಾಡುವುದಿಲ್ಲ, ಜಿಹಾದಿಗಳು ಪ್ರತಿ ತಾಲೂಕಿನಲ್ಲಿಯೂ ಒಬ್ಬರನ್ನೂ ಹತ್ಯೆ ಮಾಡುತ್ತಿದ್ದಾರೆ, ಹಿಂದೂ ಸಮಾಜ ಯಾವುದೇ ಜಾತಿ ಮತ ನೋಡದೆ ಒಗ್ಗಟ್ಟಾಗಬೇಕಿದೆ ಇಲ್ಲಿಯವರೆಗೆ ಹಿಂದುಗಳನ್ನು ಕೊಲೆ ಮಾಡಿದ ಪಾಪಿಗಳಿಗೆ ಸರಿಯಾದ ಸಾಕ್ಷಿ ಇಲ್ಲದೆ ಶಿಕ್ಷೆ ಆಗಿಲ್ಲ ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಶಿಕ್ಷೆ ನೀಡಿದಾಗ ಮಾತ್ರ ವ್ಯವಸ್ಥೆ ಸರಿಯಾಗಲಿದೆ ಎಂದುರು.
ಬಾಳೆಕಾಯಿ ನಟರಾಜು, ಅರಳುಗುಪ್ಪೆ ಯೋಗೀಶ್, ಹಾವೇನಹಳ್ಳಿ ಮಂಜು, ಮೈಲಾರಿ, ಸುಶೀಲ್ ಮುಂತಾದವರು ಮಾತನಾಡಿದರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡಾ ಸ್ಥಳದಲ್ಲಿಯೇ ಮೊಕ್ಕಂ ಹೂಡಿ ಸೂಕ್ತ ಪೊಲೀಸ್ ಬಂದು ಬಸ್ತ್ ವ್ಯವಸ್ಥೆ ಮಾಡಿದ್ದರು. ಪೊಲೀಸ್ ವಿಭಾಗದ ಎ ಎಸ್ ಪಿ ಸಿದ್ದಾರ್ಥ ಗೋಯಲ್ ನಗರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಶೈಲಮೂರ್ತಿ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಕೃಷ್ಣಕುಮಾರ್, ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ದ್ರಾಕ್ಷಾಯಿಣಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಂಡರು