ತುರುವೇಕೆರೆ

ಜನವಿರೋಧಿ ಬಿ.ಜೆ.ಪಿ. ಕಿತ್ತೊಗೆದು ಜನಹಿತ ಬಯಸುವ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ತನ್ನಿ: ನಲಪಾಡ್

ತುರುವೇಕೆರೆಯಲ್ಲಿ ಯುವ ಆಕ್ರೋಷ್ ರ‍್ಯಾಲಿ

ತುರುವೇಕೆರೆ : ಅಚ್ಚೇದಿನ್ ಆಯೇಗಾ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಸರಕಾರ ಜನಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿದೆ ಎಂದು ಯುವ ಕಾಂಗ್ರೇಸ್ ಘಟಕದ ರಾಜ್ಯಾಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್ ಆಕ್ರೋಷ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ತಾಲೂಕು ಯುವ ಕಾಂಗ್ರೇಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವ ಆಕ್ರೋಷ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಉದ್ಯೋಗ ಸೃಷ್ಟಿ ಮಾಡುವುದಾಗಿ ಯುವಜನರನ್ನು ಬಿ.ಜೆ.ಪಿ.ವಂಚಿಸಿದೆ. ಅಗ್ನಿಪಥ್ ಹೆಸರಿನಲ್ಲಿ ಪೂರ್ಣಾವಧಿ ದೇಶ ಸೇವೆ ಮಾಡಬೇಕೆಂಬ ಯುವಕರ ಕನಸನ್ನು ಭಗ್ನಗೊಳಿಸುತ್ತಿದೆ .ರಾಜ್ಯದಲ್ಲಿರುವ ಜನವಿರೋಧಿ ಬಿ.ಜೆ.ಪಿ.ಸರಕಾರವನ್ನು ಕಿತ್ತೊಗೆದು ಜನಹಿತ ಬಯಸುವ ಕಾಂಗ್ರೇಸ್ ಸರಕಾರವನ್ನು ಆಡಳಿತಕ್ಕೆ ತರಲು ಯುವಕರು ಸಂಕಲ್ಪ ಮಾಡಬೇಕಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಅರಿತು ತುರುವೇಕೆರೆಯಲ್ಲಿಯೂ ಪಕ್ಷ ಟಿಕೇಟ್ ನೀಡಿದವರನ್ನು ಎಂ.ಎಲ್.ಎ. ಮಾಡಿ ಎಂದು ಮನವಿ ಮಾಡಿದರು.
ಗಮನ ಸೆಳೆದ ರ‍್ಯಾಲಿ.
ಪಟ್ಟಣದ ಪ್ರವಾಸಿ ಮಂದಿರದಿಂದ ಚೌದ್ರಿ ಕನ್ವೆಷನ್ ಹಾಲ್ ವರೆಗೆ ಯುವ ಕಾಂಗ್ರೇಸ್ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗುವ ಮೂಲಕ ಕಿಡಿಕಾರಿದರು. ಯುವ ಕಾಂಗ್ರೇಸ್ ಅಧ್ಯಕ್ಷರುಗಳಾದ ವಿನಯ್ ಹಾಗೂ ಗುರುರಾಜ್ ನೇತೃತ್ವದಲ್ಲಿ ಬೈಕ್ ರ‍್ಯಾಲಿಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಗಮಸೆಳೆದರು.
ಸೇರು -ಸವ್ವಾಸೇರು
ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿ.ಎಸ್.ಪುರದಲ್ಲಿ ಬ್ಲಾಕ್ ಅದ್ಯಕ್ಷರುಗಳು ಹಾಗೂ ಬೆಮೆಲ್ ಕಾಂತರಾಜ್‌ರವರು ಜಿಲ್ಲಾದ್ಯಕ್ಷ ಶಶಿಹುಲಿಕುಂಟೆಯವರನ್ನು ಆಹ್ವಾನಿಸಿ ಅಂದು ಯುವ ಶಕ್ತಿ ಕಾರ್ಯಕ್ರಮ ನಡೆಸಿದ್ದರು. ಇಂದು ಯುವ ಆಕ್ರೋಷ್ ಹಸರಿನಲ್ಲಿ ರಾಜ್ಯಾಧ್ಯಕ್ಷ ನಲಪಾಡ್‌ರನ್ನು ಆಹ್ವಾನಿಸಿ ತುರುವೇಕೆರೆಯಲ್ಲಿ ರ‍್ಯಾಲಿ ನಡೆಸಿದ್ದಾರೆ. ಸಿ.ಎಸ್.ಪುರದ ಯುವಶಕ್ತಿ ಕಾರ್ಯಕ್ರಮದಿಂದ ದೂರವಿದ್ದ ಮುಖಂಡ ಚೌದ್ರಿರಂಗಪ್ಪ ಮತ್ತಿತರರು ಯುವ ಆಕ್ರೋಷ್ ರ‍್ಯಾಲಿಗೆ ಹಾಜರಾಗಿದ್ದಾರೆ. ಯುವ ಶಕ್ತಿ, ಯುವ ಆಕ್ರೋಷ್ ಹೆಸರಿನಲ್ಲಿ ಬೆರಳೆಣಿಕೆ ದಿನಗಳ ಅಂತರದಲ್ಲಿ ನಡೆದ ಎರಡೂ ಕಾರ್ಯಕ್ರಮಗಳು ಸೇರ ಸವ್ವಾ ಸೇರು ಎಂಬ ವ್ಯಾಖ್ಯಾನದೊಂದಿಗೆ ರಾಜಕೀಯ ಮೊಗಸಾಲೆಯಲ್ಲಿ ಚರ್ಚೆಯಾಗುತ್ತಿವೆ.
ರ‍್ಯಾಲಿಯಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಯುವಕಾಂಗ್ರೇಸ್ ಉಪಾಧ್ಯಕ್ಷ ಸುಮುಖ್, ಎಐಸಿಸಿ ಸದಸ್ಯ ಸುಬ್ರಹ್ಮಣ್ಯಶ್ರೀಕಂಠೇಗೌಡ, ಹಿರಿಯ ಮುಖಂಡ ಚೌದ್ರಿ ಟಿ ರಂಗಪ್ಪ, ವಸಂತ್ ಕುಮಾರ್, ಗೀತಾರಾಜಣ್ಣ. ಟಿ.ಎನ್.ಶಿವರಾಜು ಕಮಲಸ್ವರ್ಣಕುಮಾರ್, ಮಂಜುನಾಥ್, ಯುವ ಕಾಂಗ್ರೇಸ್‌ನ ವಿನಯ್, ಗುರುರಾಜ್, ಮತ್ತಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker