ರೋಟರಿ ತುಮಕೂರು ಸಂಸ್ಥೆಗೆ ಸ್ವಂತ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿ : ಫೈಟ್ ಲೆಫ್ಟಿನೆಂಟ್ ಕೆ.ಪಿ. ನಾಗೇಶ್
ರೋಟರಿ ತುಮಕೂರು ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ತುಮಕೂರು : ರೋಟರಿ ತುಮಕೂರು ಸಂಸ್ಥೆಗೆ ಸ್ವಂತ ಕಟ್ಟಡದ ಅಗತ್ಯವಿದ್ದು, ಎಲ್ಲರೂ ಒಂದಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರೋಟರಿ 3190 ಪಿಡಿಜಿ ಮಾರ್ಗದರ್ಶರಾದ ಫೈಟ್ ಲೆಫ್ಟಿನೆಂಟ್ ಕೆ.ಪಿ. ನಾಗೇಶ್ ತಿಳಿಸಿದರು.
ನಗರದ ಎಸ್.ಐ.ಟಿ ಬಿರ್ಲಾ ಸಭಾಂಗಣದಲ್ಲಿ ರೋಟರಿ ತುಮಕೂರು ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ಮಲ್ಲಸಂದ್ರ ಶಿವಣ್ಣ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಅವರು ಮಾತನಾಡಿದರು.
ನಗರದಲ್ಲಿ ರೋಟರಿ ತುಮಕೂರು ಆರಂಭಗೊಂಡು 65 ವರ್ಷಗಳು ತುಂಬಿದ್ದರೂ ಸ್ವಂತ ಕಟ್ಟಡ ಇಲ್ಲ. ಹಾಗಾಗಿ ಶಿವಣ್ಣ ಅವರ ಜತೆ ಸೇರಿ ಎಲ್ಲರೂ ಸ್ವಂತ ಕಟ್ಟಡಕ್ಕೆ ಮುಂದಾಗುವಂತೆ ಸಲಹೆ ನೀಡಿದರು.
ರೋಟರಿ ಸಂಸ್ಥೆ ಹಲವು ಕೆಲಸಗಳ ಮೂಲಕ ಸಾರ್ವಜನಿಕರ ಮಧ್ಯಕ್ಕೆ ತೆರಳಿ ಅವರ ಕಷ್ಟಗಳನ್ನು ಆಲಿಸುವ ಕೆಲಸ ಮಾಡುತ್ತಿದೆ. ಈ ಕಾರ್ಯ ನಿರಂತರವಾಗಿ ಸಾಗಲಿದೆ. ನಮ್ಮ ರೋಟರಿ ಗೌರನ್ನರ್ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚನೆ ನೀಡಿದ್ದಾರೆ. ಅದನ್ನು ಪಾಲಿಸುವುದರ ಜೊತೆಗೆ,ಇಂದಿನ ಮಕ್ಕಳಿಗೆ ಶಿಕ್ಷಣ ಕಲಿಸಿ, ಉತ್ತಮ ಮಾರ್ಗದಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳಿ. ಸಮಾಜದ ಸೇವೆಗೆ ಜೀವನ ಮುಡಿಪಾಗಿಡಿ, ಬದುಕಲ್ಲಿ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ರೋಟರಿಯ ಜೊತೆಗೆ ರೋಟರಿ ಫೌಂಡೇಷನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಫೌಂಡೇಷನ್‌ಗೆ ಉದಾರ ದೇಣಿಗೆ ನೀಡುವ ಮೂಲಕ ಮತ್ತಷ್ಟು ಸಮಾಜ ಸೇವೆಯಲ್ಲಿ ತೊಡಗಲು ಕೋರಿದ ಅವರು, ಹೆಚ್ಚುವರಿ 100 ಸದಸ್ಯರನ್ನು ನೊಂದಾಯಿಸುವಂತೆ ನಿರ್ದೇಶನ ನೀಡಿದರು
ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ, ಭಾರತದಲ್ಲಿಯೇ ಕನ್ನಡ ಚಲನಚಿತ್ರರಂಗ ಬಹಳ ಕಡಿಮೆ ಮಾರುಕಟ್ಟೆಯನ್ನು ಹೊಂದಿದ್ದರು., ಹಿರಿಯರ ಮಾರ್ಗದರ್ಶನ ಹಾಗೂ ಪದಾಧಿಕಾರಿಗಳ ಇಚ್ಛಾಶಕ್ತಿಯಿಂದ ಸ್ವಂತ ಕಟ್ಟಡ ಹೊಂದಿದೆ. ಹಾಗಾಗಿ ಸ್ವಂತ ಕಟ್ಟಡದ ಜತೆಗೆ ಸಮಾಜ ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿದೆ. ಹಾಗೆಯೇ ರೋಟರಿ ಎಂದರೆ ಇಂಗ್ಲೀಷ್, ಈ ಭಾಷೆಯನ್ನು ಆಡಳಿತ ಭಾಷೆಯಾಗಿ ಬಳಸಿ ತಪ್ಪಿಲ್ಲ. ಆದರೆ ಕನ್ನಡಕ್ಕೆ ಆದ್ಯತೆ ನೀಡಿ, ನಿಮ್ಮ ಮಕ್ಕಳಿಗೆ ರಾಮಾಯಣ, ಮಹಾಭಾರತ ಓದಿಸಿ. ಅದರಲ್ಲಿ ಮಾನವೀಯ ಗುಣಗಳಿವೆ ಎಂದು ಹೇಳಿದರು.
ಸೋಲೂರಿನ ಬ್ರಹ್ಮಶ್ರೀ ನಾರಾಯಣಗುರು ಮಠದ ರೇಣುಕಾ ಪೀಠಾಧ್ಯಕ್ಷ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಸೂರಿಲ್ಲದವರನ್ನು ಗುರುತಿಸಿ ಅವರಿಗೆ ಮನೆ ಕಟ್ಟಿಕೊಡುವ ಕೆಲಸ ರೋಟರಿ ಸಂಸ್ಥೆಯಿಂದ ನಡೆಯಲಿ. ಪ್ರತಿ ಅಧ್ಯಕ್ಷರ ಅವಧಿಯಲ್ಲಿ ಒಂದು ಬಡ ಕುಟುಂಬವನ್ನು ಗುರುತಿಸಿ, ಅವರಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡಬೇಕು. ಈ ಕಾಯಕ ಈ ಜಿಲ್ಲೆಯಿಂದ ಆರಂಭವಾಗಲಿ ಎಂದರು.
ರೋಟರಿ ಸಂಸ್ಥೆ ಇಂದು ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಕಾರ್ಯನಿರ್ಹಿಸುತ್ತಿದೆ. ಇದರ ಸೇವೆ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಆಶಿಸಿದರು.
ರೋಟರಿ ತುಮಕೂರು ಅಧ್ಯಕ್ಷ ಜೆ.ಪಿ. ಶಿವಣ್ಣ (ಮಲ್ಲಸಂದ್ರ) ಮಾತನಾಡಿ, ‘ಮುಂದಿನ ಒಂದು ವರ್ಷದಲ್ಲಿ ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ, ಬಡ ರೈತರಿಗೆ ವ್ಯವಸಾಯದ ಸಲಕರಣೆ ನೀಡುವುದು, ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರಿನ ಘಟನೆ ಸ್ಥಾಪನೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಳೆದ ಸಾಲಿನ ರೋಟರಿ 3190 ನ ಕಾರ್ಯದರ್ಶಿ ಭಾಗ್ಯಲಕ್ಷ್ಮೀ ನಾಗರಾಜು ವಾರ್ಷಿಕ ವರದಿ ಮಂಡಿಸಿ, ಕಳೆದ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳನ್ನು ವಿವರಿಸಿದರು. ವಿಶ್ವನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದೇ ವೇಳೆ ಬಡ ಮಕ್ಕಳಿಗೆ ನೋಟ್ ಪುಸ್ತಕ, ರೈತರಿಗೆ ಕೃಷಿ ಸಿಂಪರಣಾ ಯಂತ್ರಗಳು, ಅಂಧರಿಗೆ ವಾಕಿಂಗ್ ಸ್ಟಿಕ್ ವಿತರಿಸಲಾಯಿತು.
ಸಮಾರಂಭದಲ್ಲಿ ರೋಟರಿಯ 2021-22 ನೇ ಸಾಲಿನ ಅಧ್ಯಕ್ಷ ಎ.ಎಸ್.ಬಸವರಾಜ್ ಹಿರೇಮಠ್, ರೋಟರಿ ತುಮಕೂರು ಛಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಎಂ.ಎಸ್.ಉಮೇಶ್, ಉಪಾಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ಕಾರ್ಯದರ್ಶಿ ಎನ್.ಸಿ.ಉಮೇಶ್, ಸಹ ಕಾರ್ಯದರ್ಶಿ ಡಿ.ಎಂ. ಸತೀಶ್, ಮೀನಾಕ್ಷಿ ಶಿವಣ್ಣ, ಬಿಳಿಗೆರೆ ಶಿವಕುಮಾರ್, ಕೆ.ಎಸ್. ಚೇತನ್, ಎಂ.ಎಸ್. ಉಮೇಶ್, ಎಸ್.ಎಲ್. ಕಾಡದೇವರ ಮಠ್, ಟಿ.ಆರ್. ಸದಾಶಿವಯ್ಯ, ಭಾಗ್ಯಲಕ್ಷಿ÷್ಮ ನಾಗರಾಜ್, ಎನ್.ಸಿ. ಉಮೇಶ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.