ಗ್ರಾಮಾಂತರ ಕ್ಷೇತ್ರದ ಹೆಗ್ಗೆರೆ ಗ್ರಾಮ ಅಭಿವೃದ್ಧಿ : ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಶಾಸಕ ಡಿ.ಸಿ. ಗೌರಿಶಂಕರ್ ಗೆ ಅಭಿನಂದನೆ
ತುಮಕೂರು : ನಗರದ ಹೊರವಲಯದ ಹೆಗ್ಗೆರೆ ಹೊಸ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮನವಿಗೆ ಸ್ಪಂದಿಸಿದ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್ ಅವರು ಸಂಪೂರ್ಣ ಹೆಗ್ಗೆರೆ ಗ್ರಾಮ ವೀಕ್ಷಣೆ ಮಾಡಿದರು.
ಹೆಗ್ಗೆರೆ ಹೊಸ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ಹೆಗ್ಗೆರೆ ಗ್ರಾಮಸ್ಥರು ಶಾಸಕ ಡಿ.ಸಿ. ಗೌರಿಶಂಕರ್ ರವರನ್ನು ಅವರ ಬಳಗೆರೆ ನಿವಾಸದಲ್ಲಿ ಭೇಟಿಯಾಗುವುದರ ಮೂಲಕ ಹೆಗ್ಗೆರೆ ಗ್ರಾಮದಲ್ಲಿ ಈಗಾಗಲೇ ಶಾಸಕರು 29 ಸಿಸಿ ರಸ್ತೆಗಳನ್ನು ಮಾಡಿರುವುದಕ್ಕೆ ಸಂಬಂಧಿಸಿದಂತೆ ಗೌರವ ಸಮರ್ಪಣೆ ಮಾಡಿ, ಇನ್ನುಳಿದ ಸಿಸಿ ರಸ್ತೆಗಳಿಗೆ ಸಂಬಂಧಿಸಿದಂತೆ ಮತ್ತು ಹೆಗ್ಗೆರೆಯ ಸಮಗ್ರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಹೆಗ್ಗೆರೆ ಗ್ರಾಮಕ್ಕೆ ಭೇಟಿ ನೀಡಿ ಅಭಿವೃದ್ಧಿಪಡಿಸಲು ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಸಂಪೂರ್ಣ ಗ್ರಾಮದ ವೀಕ್ಷಣೆ ಮಾಡುವುದರ ಮೂಲಕ ಇನ್ನುಳಿದ ಅವಧಿಯ ಒಳಗೆ ಎಷ್ಟು ಸಾಧ್ಯವೋ ಅಷ್ಟು ಕಾಮಗಾರಿಗಳನ್ನು ಅನುಷ್ಠಾನ ಮಾಡುತ್ತೇನೆ. ಸಣ್ಣಪುಟ್ಟ ಕಾಮಗಾರಿಗಳನ್ನು ಗ್ರಾಮ ಪಂಚಾಯ್ತಿಯಿಂದ ತಕ್ಷಣ ಕಾರ್ಯಾರಂಭ ಮಾಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಗ್ಗೆರೆ ಗ್ರಾಮದಲ್ಲಿ ಸುಮಾರು 29 ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ನಿರ್ವಹಿಸುವುದರ ಮೂಲಕ ಪ್ರಥಮ ಬಾರಿಗೆ ಹೆಗ್ಗೆರೆ ಗ್ರಾಮದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದೇನೆ ಎಂದರು.
ಇನ್ನುಳಿದ ಅವಧಿಯಲ್ಲಿ ಮತ್ತೊಂದು ಅವಧಿಗೆ ಆಯ್ಕೆಯಾದಲ್ಲಿ ಹೆಗ್ಗೆರೆ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿ ಅವರು, ಇನ್ನುಳಿದ ರಸ್ತೆಗಳಿಗೆ ಸಂಬಂಧಿಸಿದಂತೆ ಮೂರ್ನಾಲ್ಕು ತಿಂಗಳಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಹೇಳಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಗ್ರಾಮಸ್ಥರೊಂದಿಗೆ ಸರಳವಾಗಿ ಗ್ರಾಮಸ್ಥರ ಸಮಸ್ಯೆಗಳನ್ನು ವಾರ್ಡ್ವಾರು ಸಮಸ್ಯೆಗಳನ್ನು ಪಡೆಯುವುದರ ಮೂಲಕ ಅವುಗಳ ಪರಿಹಾರಕ್ಕೆ ಸ್ಥಳದಲ್ಲಿಯೇ ಸೂಚನೆ ನೀಡಿದರು.
ಹೆಗ್ಗೆರೆ ಗ್ರಾಮದ ಅಭಿವೃದ್ಧಿಯ ಕಾಮಗಾರಿಗಳಿಗೆ ಮುನ್ನುಡಿ ಬರೆದ ಶಾಸಕರಿಗೆ ಹೆಗ್ಗೆರೆ ಹೊಸ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ನಾಗರಿಕರು ಗೌರವ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಹೆಗ್ಗೆರೆ ಹೊಸ ಬಡಾವಣೆ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಯ್ಯ ಎಂ, ಕಾರ್ಯದರ್ಶಿ ಸೋಮಶೇಖರ್ ಆಲ್ಯಾಳ, ಸದಸ್ಯರುಗಳಾದ ಜಯಶ್ರೀ, ನಂದಿತಾ, ಪ್ರತಿಭಾ, ಮುತ್ತನರಸಿಂಹ, ಆನಂದಕುಮಾರ್, ಕುಮಾರ್, ಗುಲ್ಪರಾಜ್, ರಂಗಸ್ವಾಮಿ, ಪೈರೋಜ್, ಜಬಿವುಲಾ, ರತ್ನಮ್ಮ, ಜಸ್ಸಿ, ಶಿವಮೂರ್ತಿ, ಮಲ್ಲಿಕ್, ಚಂದ್ರಪ್ಪ, ಆರಾಧ್ಯ, ದೊಡ್ಡಯ್ಯ, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.