ಪಾವಗಡ

ವಿರುಪಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಾರದಮ್ಮ ಪಾಂಡುರಂಗಪ್ಪ ಆಯ್ಕೆ

ಪಾವಗಡ : ಪಾವಗಡ ತಾಲೂಕು ವಿರುಪಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗೌಡೇಟಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಾರದಮ್ಮ ಪಾಂಡುರಂಗಪ್ಪ ಅವರು ಇಂದು ಬಿಜೆಪಿ ಬೆಂಬಲಿತ ಸದಸ್ಯ ಜೂಲಪ್ಪ ಲಕ್ಷ್ಮೀನಾರಾಯಣ ಅವರ ಬೆಂಬಲದೊಂದಿಗೆ ಪಂಚಾಯಿತಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಿ ಅವರನ್ನು ಕೆಳಗಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ನಡೆದ ಚುನಾವಣೆಯಲ್ಲಿ 12 ಮತಗಳ ಪೈಕಿ 9 ಮತಗಳನ್ನು ಪಡೆಯುವ ಮುಖೇನ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇವರ ವಿರುದ್ಧ ಸ್ಪರ್ಧೆ ಮಾಡಿದಂತ ಮಮತಾ ರಾಜಶೇಖರ್ ಅವರು ಕೇವಲ ಮೂರೇ ಮೂರು ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಜಯಶೀಲರಾದ ಶಾರದಮ್ಮ ಅವರನ್ನು ಚುನಾವಣಾಧಿಕಾರಿಗಳು ಅಧಿಕಾರದ ಗೌಪ್ಯತೆಯನ್ನು ಭೋದಿಸಿದರು.
ಈ  ಸಂಧರ್ಭದಲ್ಲಿ  ಮುಖಂಡರಾದ ಗೌಡೇಟಿ ನರಸಿಂಹಮೂರ್ತಿ, ವಿರುಪಸಮುದ್ರ ಗ್ರಾಮದ ನರಸಯ್ಯ, ಅಶ್ವತಪ್ಪ, ಸ್ವಾಮಿ, ಜಯರಾಮಯ್ಯ ಶಿವರಾಮು ರಮೇಶ್ ಹಾಗೂ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker