ಚಿಕ್ಕನಾಯಕನಹಳ್ಳಿ
ವಿಜೃಂಭಣೆಯಿಂದ ನಡೆದ ಶ್ರೀಶನೇಶ್ವರ ಸ್ವಾಮಿಯ ಕುಂಭಾಭಿಷೇಕ ಮಹೋತ್ಸವ

ಹುಳಿಯಾರು : ಪಟ್ಟಣದ ಶ್ರೀಶನೇಶ್ವರ ಸ್ವಾಮಿಯ 18ನೇವರ್ಷದ ಕುಂಭಾಭಿಷೇಕ
ಮಹೋತ್ಸವದ ಅಂಗವಾಗಿ ಸೋಮವಾರದಂದು ದೇವಾಲಯದಲ್ಲಿ ನಾನಾ ಧಾರ್ಮಿಕಾರ್ಯಕ್ರಮಗಳು ಯಶಸ್ವೀಯಾಗಿ ನಡೆಯಿತು.
ಶ್ರೀಸ್ವಾಮಿಯವರಿಗೆ ಅಭಿಷೇಕ, ಗಣಹೋಮ, ನವಗ್ರಹ, ಮೃತ್ಯುಂಜಯ, ಶನೇಶ್ವರಸ್ವಾಮಿ ಹೋಮ, ನವಗ್ರಹ ಆರಾಧನೆ, ಪಂಚಾಮೃತ ಅಭಿಷೇಕ, ಪೂರ್ಣಾಹುತಿ, ಬಲಿಪ್ರಧಾನ ಮಹಾಮಂಗಳಾರತಿ ಕಳಸಕ್ಕೆ ಕುಂಭಾಬಿಷೇಕ ಹಾಗೂ ಅನ್ನಸಂತರ್ಪಣೆ ನಡೆಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದೇವತೆ ದುರ್ಗಾಪರಮೇಶ್ವರಿ, ಹುಳಿಯಾರಮ್ಮ, ಮತ್ತು ಆಂಜನೇಯಸ್ವಾಮಿ ದೇವರುಗಳು ಪಾಲ್ಗೊಂಡಿದ್ದವು.