ದೊಡ್ಡಮಾಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಅಶ್ವಥನಾರಾಯಣ, ಉಪಾಧ್ಯಕ್ಷರಾಗಿ ಪಾರ್ವತಮ್ಮ ರಾಮಾಂಜನೇಯ ಅವಿರೋಧ ಆಯ್ಕೆ
ಮಧುಗಿರಿ : ರಾಜೀನಾಮೆ ಯಿಂದ ತೆರವಾಗಿದ್ದ ದೊಡ್ಡಮಾಲೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡಮಾಲೂರು ಗ್ರಾ.ಪಂ ಅಧ್ಯಕ್ಷರಾಗಿದ್ದ ಪಂಚಾಯಕ್ಷರಯ್ಯ ಹಾಗೂ ರಾಮಾಂಜಿನಮ್ಮ ನವರು ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಯಿತು ಎರಡು ಸ್ಥಾನಗಳಿಗೆ ಯಾರು ಸಹ ನಾಮಪತ್ರ ಸಲ್ಲಿಸದ ಕಾರಣ ಸೂರನಾಗೇನಹಳ್ಳಿ ಕ್ಷೇತ್ರದ ಅಶ್ವಥನಾರಾಯಣ ಅಧ್ಯಕ್ಷರಾಗಿ ಜೋಗೇನಹಳ್ಳಿ ಕ್ಷೇತ್ರದ ಪಾರ್ವತಮ್ಮ ರಾಮಾಂಜನೇಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಪ್ರಕಟಿಸಿದರು.
ನೂತನವಾಗಿ ಆಯ್ಕೆಯಾದ ಗ್ರಾ.ಪಂ ಅಧ್ಯಕ್ಷ ಆಶ್ವಥನಾರಾಯಣ ಮಾತನಾಡಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ವಿಧಾನ ಪರಿಷತ್ತ್ ಸದಸ್ಯ ರಾಜೇಂದ್ರ ರವರ ಸಹಕಾರ ದಿಂದ ಆಯ್ಕೆಯಾಗಿದ್ದೇವೆ ಎಂದರು. ಕೆ.ಎನ್.ರಾಜಣ್ಣನವರು ತಳ ಸಮುದಾಯದವರ ಆಯ್ಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾರ ಸಹಕಾರದಿಂದ ಗ್ರಾಮದ ಅಭಿವೃದ್ದಿಗೆ ಬದ್ಧವಾಗಿರುತ್ತೆನೆ ಎಂದರು .
ಮಾಜಿ ತಾ.ಪಂ.ಸದಸ್ಯ ಜೆ.ಡಿ.ವೆಂಕಟೇಶ್ ಮಾತನಾಡಿ ಕೊಡಿಗೇನಹಳ್ಳಿ ಹೋಬಳಿಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ಅವರು ಶಾಸಕರಾಗಿದ್ದ ಕಾಲಾವಧಿಯಲ್ಲಿ ನಮ್ಮ ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಈ ಚುನಾವಣೆಯೂ ಸಹ ಅವರ ಆಶೀರ್ವಾದದಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಗ್ರಾ.ಪಂ.ನ ಅಧಿಕಾರ ಹಿಡಿಯಲು ಸಾದ್ಯವಾಗಿದೆ ಎಂದರು.
ಗ್ರಾ. ಪಂ ಸದಸ್ಯರಾದ ರೂಪನಾಗೇಂದ್ರ, ರಾಮಾಂಜಿನಮ್ಮ, ಭಾಗ್ಯಮ್ಮ, ಅರುಣಾ, ಗಂಗಾಧರನಾಯ್ಕ, ರಾಜಪ್ಪ, ಪಂಚಾಕ್ಷರಯ್ಯ,ಮುಖಂಡರಾದ ಡಾ.ಜೀವಿಕ ಸಂಜೀವಮೂರ್ತಿ, ಪುನೀತ್, ನರಸೇಗೌಡ, ಕಿಟ್ಟಪ್ಪ ,ಸಿದ್ದಪ್ಪ,ನಾಗಭೂಷಣ್, ಪಿಡಿಓ ಡಾ.ಶಿವನಂದಯ್ಯ ಹಾಗೂ ಮತ್ತಿತರರು ಇದ್ದರು