ಶಿರಾ ತಾಲ್ಲೂಕಿನಲ್ಲಿ ಭಾರಿ ವರ್ಷದಾರೆ : ತುಂಬಿ ಹರಿಯುತ್ತಿದೆ ಮಲ್ಲಶೆಟ್ಟಿಹಳ್ಳಿ ಪಿಕಪ್
ಶಿರಾ : ತಾಲ್ಲೂಕಿನಲ್ಲಿ ಭಾರಿ ವರ್ಷಧಾರೆ ಸುರಿಯುತ್ತಿದ್ದು, ಹಲವು ಕೆರೆ ಕಟ್ಟೆಗಳಿಗೆ ಉತ್ತಮ ನೀರು ಬಂದಿದೆ. ಕೆಲವು ಪಿಕಪ್‌ಗಳು ತುಂಬಿ ಹರಿಯುತ್ತಿವೆ. ಬೇಸಿಗೆಯಲ್ಲೇ ಮಳೆಯ ಆರ್ಭಟ ಹೆಚ್ಚಾಗಿದ್ದು, ರೈತರು ತಮ್ಮ ಜಮೀನುಗಳನ್ನು ಬಿತ್ತನೆಗೆ ಸಿದ್ದತೆ ಮಾಡುತ್ತಿದ್ದಾರೆ.
ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಕಳ್ಳಂಬೆಳ್ಳ ಭಾಗದ ಮಲ್ಲಶೆಟ್ಟಿಹಳ್ಳಿ ಪಿಕಪ್ ತುಂಬಿ ಹರಿಯುತ್ತಿದೆ. ಹೊನ್ನಗೊಂಡನಹಳ್ಳಿ ಗ್ರಾಮದ ಜಯಮ್ಮ ಎಂಬುವವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಕಸಬಾ ರಾಜಸ್ವ ನಿರೀಕ್ಷಕರಾದ ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಳೆ ವಿವರ: ಶಿರಾ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುಮಾರು 144 ಮಿ.ಮೀ. ಮಳೆಯಾಗಿದೆ. ಕಸಬಾ ಹೋಬಳಿಯಲ್ಲಿ 139 ಮಿ.ಮೀ., ಬುಕ್ಕಾಪಟ್ಟಣ ಹೋಬಳಿಯಲ್ಲಿ 157 ಮಿ.ಮೀ, ಗೌಡಗೆರೆ ಹೋಬಳಿಯಲ್ಲಿ 158 ಮಿ.ಮೀ., ಹುಲಿಕುಂಟೆ ಹೋಬಳಿಯಲ್ಲಿ 119 ಮಿ.ಮೀ. ಕಳ್ಳಂಬೆಳ್ಳ ಹೋಬಳಿಯಲ್ಲಿ 143 ಮಿ.ಮೀ. ಒಟ್ಟು ಶೇ. 144 ಮಿ.ಮೀ. ಮಳೆಯಾಗಿದೆ.