ಕೊರಟಗೆರೆಜಿಲ್ಲೆತುಮಕೂರು

ಅಜ್ಜಿಯನ್ನೇ ಮನೆಯಿಂದ ಹೊರಹಾಕಿದ ಮೊಮ್ಮಗ : ಅಜ್ಜಿಗೆ ವರವಾದ ಎಸಿ ನ್ಯಾಯಾಲಯ ಆದೇಶ : ಮನೆ ಹಸ್ತಾಂತರ ಮಾಡಿದ ಕೊರಟಗೆರೆ ತಹಶೀಲ್ದಾರ್

ಕೊರಟಗೆರೆ : ಕೊರಟಗೆರೆ ಪಟ್ಟಣದ 3ನೇ ವಾರ್ಡಿನ ಹನುಮಂತಪುರ ವಾಸಿಯಾದ ಲೇ.ರಾಮಯ್ಯನ ಮಡದಿಯಾದ ಕಾವಲಮ್ಮ ಎನ್ನುವ ವೃದ್ದೆಯ ತನ್ನ ಮಗಳಾದ ಲೇ.ಲಕ್ಷö್ಮಮ್ಮನ ಮಗನಾದ ಮಾರುತಿ ಎಂಬಾತ ಕಳೆದ 6ತಿಂಗಳ ಹಿಂದೆಯಷ್ಟೆ ಮನೆಯಿಂದ ಹೊರಹಾಕಿದ ದಾರುಣ ಘಟನೆ ನಡೆದಿದೆ. ಹಿರಿಯ ನಾಗರೀಕ ಕಾಯ್ದೆಯಂತೆ ವಯೋವೃದ್ದೆ ಅಜ್ಜಿಯು ಮತ್ತೇ ಪೊಲೀಸರ ಭದ್ರತೆಯಲ್ಲಿ ಮನೆ ಸೇರಿದ್ದಾರೆ.
ವಯೋವೃದ್ದೆ ಕಾವಲಮ್ಮ ನ್ಯಾಯಕ್ಕಾಗಿ ವಿಶೇಷ ಚೇತನ ಮಗನ ಜೊತೆಗೂಡಿ ಮನೆಗಾಗಿ ಕೊರಟಗೆರೆ ತಹಶೀಲ್ದಾರ್ ಮೂಲಕ ಮಧುಗಿರಿ ಎಸಿ ನ್ಯಾಯಾಲಯಕ್ಕೆ ಕಳೆದ 6ತಿಂಗಳ ಹಿಂದೆಯಷ್ಟೆ ಅರ್ಜಿ ಸಲ್ಲಿಸುತ್ತಾರೆ. ಮನೆ ಕಂದಾಯ, ಮನೆ ಕ್ರಯ, ವಿದ್ಯುತ್ ಪಾವತಿ ಶುಲ್ಕದ ರಸಿದಿ ಪತ್ರ ಸೇರಿದಂತೆ ಇನ್ನೀತರ ದಾಖಲೆ ಪರಿಶೀಲಿಸಿದ ಮಧುಗಿರಿ ಎಸಿ ನ್ಯಾಯಾಲಯವು 78ವರ್ಷ ವಯಸ್ಸಿನ ಕಾವಲಮ್ಮನ ಪರವಾಗಿ ತೀರ್ಪುನೀಡಿ ಆದೇಶ ಮಾಡಿದ್ದಾರೆ.
ಮಧುಗಿರಿ ಉಪವಿಭಾಗಾಧಿಕಾರಿ ರಿಸಿ ಆನಂದ್‌ರವರ ಆದೇಶದಂತೆ ಕೊರಟಗೆರೆ ತಹಶೀಲ್ದಾರ್ ನರಸಿಂಹಮೂರ್ತಿ ಮತ್ತು ಪೊಲೀಸ್ ಇಲಾಖೆಯ ಎಎಸೈ ಧರ್ಮೆಗೌಡ, ರಾಮಚಂದ್ರಪ್ಪ ಸೇರಿದಂತೆ ಕಂದಾಯ ಇಲಾಖೆಯ ಪ್ರತಾಪ್‌ಕುಮಾರ್, ಬಸವರಾಜು, ಪವನಕುಮಾರ್, ರಘು ನೇತೃತ್ವದ ಪೊಲೀಸರ ತಂಡ ವಯೋವೃದ್ದೆ ಅಜ್ಜಿ ಕಾಮಲಮ್ಮ ಮತ್ತು ವಿಶೇಷ ಚೇತನ ಬೈರೇಗೌಡನಿಗೆ ಮತ್ತೇ ಮನೆ ಹಸ್ತಾಂತರ ಮಾಡುವಲ್ಲಿ ಯಶಸ್ವಿ ಆಗಿರುವ ಘಟನೆ ನಡೆದಿದೆ.

ಅಜ್ಜಿ ಕಾವಲಮ್ಮ ಪರವಾಗಿ ಆದೇಶ ಮಾಡಿರುವ ಮಧುಗಿರಿ ಎಸಿ ನ್ಯಾಯಾಲಯದ ಪ್ರತಿ.

ಮನೆಮುಂದೆ ಮೊಮ್ಮಗನ ಹೈಡ್ರಾಮ..
ವಯೋವೃದ್ದೆ ಅಜ್ಜಿಯಾದ ಕಾವಲಮ್ಮ ಮನೆಯ ಹಸ್ತಾಂತರಕ್ಕೆ ಮನೆಯ ಹತ್ತಿರ ಬಂದ ತಹಶೀಲ್ದಾರ್ ಮತ್ತು ಪೊಲೀಸರ ಮುಂದೆಯೇ ಅಜ್ಜಿಯ ಮೊಮ್ಮಗ ಮಾರುತಿ ಎಂಬಾತ ಹೈಡ್ರಾಮ ಸೃಷ್ಟಿಸಿದ್ದಾರೆ. ಮತ್ತೇ ಅಜ್ಜಿಗೆ ಭಯಗೊಳಿಸುವ ರೀತಿಯಲ್ಲಿ ಯುವಕರನ್ನು ಸೇರಿಸಿ ಗಲಾಟೆ ಸೃಷ್ಟಿಸಲು ಪ್ರಯತ್ನಿಸಿದ್ದಾನೆ. ಸ್ಥಳದಲ್ಲಿಯೇ ಇದ್ದ ಪೊಲೀಸರ ತಂಡ ಪುಂಡ ಯುವಕರಿಗೆ ಬಿಸಿಮುಟ್ಟಿಸಿ ಮನೆಯನ್ನು ಕಾಲಿ ಮಾಡಿಸಿ ಅಜ್ಜಿಗೆ ಹಸ್ತಾಂತರ ಮಾಡಿರುವ ಘಟನೆಯು ನಡೆದಿದೆ.

ನನ್ನ ಮೊಮ್ಮಗ ಮಾರುತಿ ಎಂಬಾತ ನನಗೇ ಜೀವದ ಬೆದರಿಕೆ ಹಾಕಿ ಮನೆಯಿಂದ ಹೊರಗಡೆ ಹಾಕಿದ. ಏನು ತಿಳಿಯದ ನನ್ನ ವಿಶೇಷ ಚೇತನ ಮಗನಿಗೆ ನಾನೇ ದಿಕ್ಕು. ಮತ್ತೇ ನನಗೇ ಏನಾದ್ರು ಸಮಸ್ಯೆ ಆದರೇ ಅದಕ್ಕೆ ಮಾರುತಿನೇ ಪ್ರಮುಖ ಕಾರಣ. ಮಧುಗಿರಿ ಎಸಿ, ಕೊರಟಗೆರೆ ತಹಶೀಲ್ದಾರ್ ಮತ್ತು ಪೊಲೀಸರಿಗೆ ದೇವರು ಒಳ್ಳೆಯದು ಮಾಡಲಿ.                                                                                      -ಕಾವಲಮ್ಮ. ವಯೋವೃದ್ದೆ. ಕೊರಟಗೆರೆ

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker