ಹೈನುಗಾರರು ತಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಬೇಕು : ಸಿ.ವಿ.ಮಹಾಲಿಂಗಯ್ಯ

ತುರುವೇಕೆರೆ : ರಾಸುಗಳ ಆರೋಗ್ಯದ ಗಮನಹರಿಸುವ ಹೈನುಗಾರರು ತಮ್ಮಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ತಿಳಿಸಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಕೊರೊನೋ ಮತ್ತಿತರ ಕಾರಣಗಳಿಂಧಾಗಿ ಮೃತಪಟ್ಟಿದ್ದ 13 ಹೈನುಗಾರರ ಕುಟುಂಬಗಳಿಗೆ ತಮ್ಮ ಗೃಹ ಕಚೇರಿಯಲ್ಲಿ ಪರಿಹಾರಧನ ವಿತರಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ರೈತಾಪಿಗಳು ತಮ್ಮ ಬದುಕಿನ ಒತ್ತಡದ ನಡುವೆ ತಮ್ಮ ಆರೋಗ್ಯದತ್ತ ಗಮನ ಹರಿಸುವುದನ್ನು ಮರೆಯುತ್ತಿದ್ದಾರೆ. ತಮಗಾಗಿ ಒಂದಷ್ಟು ಸಮಯ ಮೀಸಲಿಟ್ಟು ತಮ್ಮ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕಿದೆ, ತುಮುಲ್ ಹೈನುಗಾರರ ಹಿತ ಕಾಯಲು ಬದ್ದವಾಗಿದ್ದು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೊರೋನಾ ಹಾಗೂ ಇತರೆ ಕಾರಣಗಳಿಂದ ಹೈನುಗಾರರು ಮೃತಪಟ್ಟರೇ ಅವರ ಕುಟುಂಬಕ್ಕೆ ತುಮುಲ್ ವತಿಯಿಂದ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಜಿಲ್ಲೆಯಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ಕೋರೋನಾದಿಂದ ಮೃತ ಪಟ್ಟಿದ್ದು ಈಗಾಗಲೇ ಅವರ ಕುಟುಂಬಕ್ಕೆ ತಲಾ 1 ಲಕ್ಷ ರೂಗಳ ಪರಿಹಾರ ನೀಡಲಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ತಾಲೂಕಿನ ಹೆಗ್ಗರೆಯಲ್ಲಿ ನೂತನವಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ ಮಾಡಲು ತುಮುಲ್ ವತಿಯಿಂದ 1.5 ಲಕ್ಷ ರೂಗಳ ಅನುದಾನದ ಚೆಕ್‌ನ್ನು ಹಸ್ತಾಂತರಿಸಿದರು.