ಯುವ ಜನರು ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಹೆಚ್ಚು ಭಾಗವಹಿಸಿ : ಸಂತೋಷ್ ಶೆಡ್ಗೆ
ಶಿರಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇನಾ ನೇಮಕಾತಿ ಉಪನ್ಯಾಸ ಕಾರ್ಯಕ್ರಮ ಶಿರಾ 02:
ಶಿರಾ : ಗ್ರಾಮೀಣ ಭಾಗದ ಯುವ ಜನರು ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ದೇಶವನ್ನು ಕಟ್ಟುವ ಕೆಲಸ ಮಾಡಬೇಕು ಎಂದು 7ನೇ ಏರ್ ಮೇನ್ ನೇಮಕಾತಿ ಕೇಂದ್ರದ ಮುಖ್ಯಸ್ಥರಾದ ವಿಂಗ್ ಕಮಾಂಡರ್ ಸಂತೋಷ್ ಶೆಡ್ಗೆ ಹೇಳಿದರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಎನ್.ಸಿ.ಸಿ. ಘಟಕದ ವತಿಯಿಂದ ವಾಯು ಸೇನಾ ನೇಮಕಾತಿ ಬಗ್ಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಭಾರತೀಯ ವಾಯು ಸೇನಾ ನೇಮಕಾತಿಗೆ ಸಂಬಂಸಿದಂತೆ, ವಿದ್ಯಾರ್ಹತೆ, ದೈಹಿಕ ಸಾಮಾರ್ಥ್ಯ, ವೈದ್ಯಕೀಯ ಪ್ರಕ್ರಿಯೆ ಹಾಗೂ ಸೇವಾ ಅವಯಲ್ಲಿ ನೀಡಲಾಗುವ ಪ್ರೋತ್ಸಾಹ ಮತ್ತು ಬಡ್ತಿ ಹಾಗೂ ವಿಶೇಷ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಟಿ. ರಂಗಪ್ಪ ರವರು ಮಾತನಾಡಿ ಎನ್.ಸಿ.ಸಿ. ವಿದ್ಯಾರ್ಥಿಗಳು ಬಹಳ ಶಿಸ್ತಿನಿಂದ ತರಬೇತಿ ಪಡೆದು, ಅದನ್ನು ಮುಂದಿನ ಜೀವನದಲ್ಲಿ ಮತ್ತು ಸಮುದಾಯದ ಬೆಳವಣಿಗೆಗೆ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂಧರ್ಭದಲ್ಲಿ ಎನ್.ಸಿ.ಸಿ ಅಕಾರಿಗಳಾದ ಲೆಪ್ಟಿನೆಂಟ್ ಬಂಡೀರAಗನಾಥ ಆರ್., ಫಸ್ಟ್ ಆಫೀಸರ್ ಸುಮೇಶ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.