ದಬ್ಬೇಘಟ್ಟ ರಸ್ತೆ ಕಾಮಗಾರಿ ತ್ವರಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ತುರುವೇಕೆರೆ : ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ನೆನಗುದಿಗೆ ಬಿದ್ದಿರುವ ರಸ್ತೆ ಅಗಲೀಕರಣ ಕಾರ್ಯ ಕೈಗೆತ್ತುಕೊಂಡು, ತುರ್ತಾಗಿ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿ ದಬ್ಬೇಘಟ್ಟ ರಸ್ತೆ ಅಗಲೀಕರಣ ಹೋರಾಟ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ರಸ್ತೆ ತಡೆ ನೆಡೆಸುವ ಮೂಲಕ ಅಹೋರಾತ್ರಿ ಧರಣಿಗೆ ಮುಂದಾದರು.
ಪ್ರತಿಭಟನಾಕಾರರ ಪರವಾಗಿ ದಬ್ಬೇಘಟ್ಟ ರಸ್ತೆ ಅಗಲೀಕರಣ ಹೋರಾಟ ಸಮಿತಿಯ ಜಿ.ಆರ್. ರಂಗೇಗೌಡ ಮಾತನಾಡಿ ದಬ್ಬೇಘಟ್ಟ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ಕಾಮಗಾರಿ ಆರಂಭಿಸಿ ವರುಷಗಳೇ ಉರುಳಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ದಬ್ಬೇಘಟ್ಟ ರಸ್ತೆಯ ಕೆಲ ಪಟ್ಟಭದ್ರಾಹಿತಾಸಕ್ತಿಗಳು ರಸ್ತೆ ಅಗಲೀಕರಣ ಕಾರ್ಯಕ್ಕೆ ತೊಡಕಾಗಿದ್ದಾರೆ. ಸ್ಥಳಿಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ರಸ್ತೆ ಅಗಲೀಕರಣ ಕಾರ್ಯವನ್ನು ದಿಟ್ಟತನದಿಂದ ಕೈಗೆತ್ತುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಜನಹಿತಕ್ಕಾಗಿ ರಸ್ತೆ ನಿರ್ಮಾಣ ಕಾರ್ಯ ಚುರುಕುಗೊಳ್ಳಬೇಕಿದ್ದು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಅಹೋರಾತ್ರಿ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಸಮನ್ವಯ:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನಯೀಮುನ್ನಿಸ್ಸಾ ರಸ್ತೆ ತಡೆ ನೆಡೆಸಿ ಸಂಚಾರಕ್ಕೆ ಅಡ್ಡಿಪಡಿಸುವುನ್ನು ಕೈ ಬಿಡುವಂತೆ ಪ್ರತಿಭಟನಾಕಾರರಿಗೆ ತಿಳಿಸಿದರು. ಸ್ಥಳದಲ್ಲಿದ್ದ ಮುಖ್ಯಾದಿಕಾರಿಗಳಿಗೆ ರಸ್ತೆ ಅಗಲೀಕರಣ ಕಾರ್ಯ ಕೈಗೆತ್ತುಕೊಳ್ಳುವಂತೆ ಸೂಚಿಸಿದರು. ಅಗಲೀಕರಣ ಕಾರ್ಯ ಕೂಡಲೇ ಆರಂಭವಾದರೇ ಪ್ರತಿಭಟನೆ ಹಿಂತೆದುಕೊಳ್ಳುವುದಾಗಿ ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿದರು.
ಅಗಲೀಕರಣ ಕಾರ್ಯಕ್ಕೆ ಚಾಲನೆ;
ತಹಶೀಲ್ದಾರ್ ಸೂಚನೆಯಂತೆ ನೆನಗುದಿಗೆ ಬಿದ್ದಿದ್ದ ವಾಣಿಜ್ಯಮಳಿಗೆಗಳ ಮುಂದಿನ ಅಗಲೀಕರಣ ಕಾರ್ಯಕ್ಕೆ ಮುಖ್ಯಾದಿಕಾರಿಗಳು ಚಾಲನೆ ದೊರಕಿಸಿದರು. ಇದೇ ತಿಂಗಲ 22 ರಂದು ಮತ್ತೆ ಸಬೆ ನೆಡೆಸಿ ಅಗಲೀಕರಣ ಕಾರ್ಯದ ಅಂತಿಮ ರೂಪು ರೇಷೆಗಳನ್ನು ರೂಪಿಸಲಾಗುವುದು. ಅಲ್ಲಿಯವರೆಗೂ ಸಹಕರಿಸುವಂತೆ ಪ್ರತಿಭಟನಾಕಾರರಿಗೆ ತಿಳಿಸಿದರು
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್, ಪ.ಪಂ. ಮಾಜಿಅಧ್ಯಕ್ಷ ಹೆಚ್.ಆರ್. ರಾಮೇಗೌಡ,ಜಿ.ಪಂ. ಮಾಜಿ ಅಧ್ಯಕ್ಷ ಎನ್.ಆರ್. ಜಯರಾಮ್, ಕಾಂಗ್ರೇಸ್ ಮುಖಂಡ ಸುಬ್ರಹ್ಮಣ್ಯಶ್ರೀಕಂಠೇಗೌಡ, ಡಿ.ಪಿ.ರಾಜು, ಪ.ಪಂ. ಸದಸ್ಯ ಯಜಮಾನ್‌ಮಹೇಶ್, ಡಿ.ಎಸ್.ಎಸ್.ನ ದಂಡಿನಶಿವರಕುಮಾರ್, ಸಿ.ಐ.ಟಿ.ಯು.ನ ಸತೀಶ್, ಆಟೋ ಚಾಲಕರ ಸಂಘದ ಗಂಗಾಧರ್, ಜಯಕರ್ನಾಟಕ ಸಂಘಟನೆಯ ಸುರೇಶ್, ಕರವೇಯ ಉಪೇಂದ್ರ, ಕನ್ನಡ ರಕ್ಷಣಾ ವೇದಿಕೆಯ ಡ್ಯಾನಿಯಲ್, ಸ್ವರ್ನಕುಮಾರ್, ಜಾಫರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.