ಕನ್ನಡಿಗರು ಕನ್ನಡಾಂಬೆಯ ಆತ್ಮಗೌರವ ಕಾಪಾಡುವ ದಿಟ್ಟ ಹೆಜ್ಜೆಗಳನ್ನಿಡಿ : ತಹಶೀಲ್ದಾರ್ ಎಂ.ಮಮತ
ಶಿರಾ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ 66ನೇ ಕನ್ನಡ ರಾಜ್ಯೋತ್ಸವ
ಶಿರಾ : ಸೈನಿಕರು ದೇಶ ರಕ್ಷಣೆಗಾಗಿ ದುಡಿದರೆ ಆಯಾಯ ಭಾಷಿಕರು ಆಯಾಯ ಭಾಷೆಯನ್ನು ರಕ್ಷಿಸುವ ಸಲುವಾಗಿ ದುಡಿಯಬೇಕು. ಕನ್ನಡ ನಾಡು, ನುಡಿ ಭಾಷೆ ಪರಂಪರೆಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಕನ್ನಡಾಂಬೆಯ ಆತ್ಮ ಗೌರವ ಕಾಪಾಡುವ ದಿಟ್ಟ ಹೆಜ್ಜೆಗಳನ್ನಿಡಬೇಕು ಎಂದು ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಮಮತ.ಎಂ. ಅವರು ಹೇಳಿದರು.
ಅವರು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಾವು ನವೆಂಬರ್ ಕನ್ನಡಿಗರಾಗದೆ ಕನ್ನಡನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇವೆ, ಕನ್ನಡದಲ್ಲಿಯೇ ಬರೆಯುತ್ತೇವೆ, ಕನ್ನಡೇತರಿಗೂ ಸಹ ಕನ್ನಡ ಕಲಿಸುತ್ತೇವೆ. ಕನ್ನಡ ನುಡಿ ಸಂಸ್ಕೃತಿ ಪರಂಪರೆ ಉಳಿಸಲು ಸದಾ ಕಟಿಬದ್ಧರಾಗುತ್ತೇವೆ ಎಂದು ಪ್ರಮಾಣ ಮಾಡಿದ್ದೇವೆ ಅದೇ ರೀತಿ ನಡೆಯೋಣ. ಕನ್ನಡ ನಾಡು ಎಂಬ ಹೆಸರಲ್ಲೇ ದೀಮಂತ ಶಕ್ತಿ ಇಂತಹ ನಾಡಲ್ಲಿ ಹುಟ್ಟಿರುವ ನಾವೆಲ್ಲರೂ ಧನ್ಯರು. ನಮ್ಮ ನಾಡ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಎಲ್ಲಾರು ಒಗ್ಗೂಡಿ ಆಚರಿಸೋಣ ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ನಾಡ ಧ್ವಜಾರೋಣ ನೆರವೇರಿಸಿ ಮಾತನಾಡಿ ಕನ್ನಡ ನಾಡಿನ ಐತಿಹಾಸಿಕ ಪರಂಪರೆ, ಸಂಸ್ಕೃತಿ, ಸಂಗೀತ, ಶಿಕ್ಷಣ, ಕಲೆ ನಮ್ಮ ಹಿರಿಮೆ. ನಮ್ಮ ಏಕೀಕರಣವನ್ನು ಪ್ರತಿಬಿಂಬಿಸುವ ಈ ಸುವರ್ಣ ದಿನದಂದು ನಾವೆಲ್ಲರೂ ಕೂಡ ನಮ್ಮ ರಾಜ್ಯದ 2000 ಇತಿಹಾಸವನ್ನು ಮೆಲುಕು ಹಾಕಬೇಕು. ಅಂದೇ ಕನ್ನಡ ಜನರ ಹಾಗೂ ಸಂಸ್ಕೃತಿ ದಿಟ್ಟತನ, ಹೋರಾಟದ ಬಗ್ಗೆ ನೃಪತುಂಗ ಅಮೋಘವರ್ಷ ಉಲ್ಲೇಖಿಸಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ರವರು ಮಾತನಾಡಿ ಕನ್ನಡ ಈ ದೇಶದ ಮುಖಮಣಿ ಇದ್ದಹಾಗೆ, ನಾಡಿನ ಜನರ ಸಂಸ್ಕöÈತಿ, ಬದುಕು ನಮ್ಮ ಹೆಮ್ಮೆ. ಈ ನಾಡಿನ ಹೆಮ್ಮೆಯ ಕನ್ನಡದ ಮಾಣಿಕ್ಯ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ ತುಂಬಾ ದುಃಖ ತಂದಿದೆ. ಪುನೀತ್ ರಾಜಕುಮಾರ್ ಕೇವಲ ನಟರಾಗದೆ ಈ ನಾಡಿನ ಮಗನಾಗಿ, ಕನ್ನಡದ ಕಣ್ಮಣಿಯಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ; ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ತೆಂಗು ಮತ್ತು ನಾರು ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಬಿ.ಕೆ.ಮಂಜುನಾಥ್, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಬಿಇಓ ಶಂಕರಯ್ಯ, ತಾ.ಪಂ. ಇ.ಓ. ಅನಂತರಾಮು, ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರ್, ಸರ್ಕಾರಿ ನೌರರ ಸಂಘದ ಅಧ್ಯಕ್ಷ ಬಿ.ಎಂ.ಲಕ್ಷ್ಮೀಶ್, ಎಸ್‌ಕೆಜಿ ರಾಮಣ್ಣ, ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಸೇರಿದಂತೆ ಹಲವರು ಹಾಜರಿದ್ದರು.