ಕೊರಟಗೆರೆ

ಕೆರೆಗಳ ಸಂರಕ್ಷಣೆಗೆ ಪ್ರತ್ಯೇಕ ಅನುದಾನಕ್ಕೆ ಒತ್ತಾಯ : ಡಾ.ಜಿ.ಪರಮೇಶ್ವರ್

ತಾಲೂಕಿನ ಗಟ್ಲಹಳ್ಳಿ ಕೆರೆಗೆ ಭಾಗಿನ ಅರ್ಪಿಸಿದ ಶಾಸಕ ಡಾ.ಜಿ.ಪರಮೇಶ್ವರ್

ಕೊರಟಗೆರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಬರುವ ಅಯವ್ಯಯದಲ್ಲಿ ಕೆರೆಗಳ ಸಂರಕ್ಷಣೆಗೆ ಪ್ರತ್ಯೇಕ ಅನುದಾನ ಮಂಡಿಸುವಂತೆ ಕೋರುವುದಾಗಿ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ತಾಲೂಕಿನ ನಡೆದ ಚನ್ನರಾಯನದುರ್ಗ ಹೋಬಳಿಯ ಗಟ್ಲಹಳ್ಳಿ ಗ್ರಾಮದ ಗಟ್ಲಹಳ್ಳಿಕೆರೆ ತುಂಬಿಹರಿದ ಹಿನ್ನಲೆಯಲ್ಲಿ ಕಿರುನೀರಾವರಿ ಇಲಾಖೆಯಿಂದ ಏರ್ಪಡಿಸಿದ್ದ ಗಂಗಾಪೂಜೆ ನೆರವೇರಸಿ ಭಾಗಿನ ಅರ್ಪಿಸಿ ಮಾತನಾಡಿ ಪ್ರಕೃತಿಕ ವೈಪರಿತ್ಯಗಳಿಂದ ಮಳೆಯು ಆಕಾಲಿಕವಾಗಿ ಬೀಳುತ್ತಿದ್ದು ನನ್ನ ವಿಧಾನಸಭಾ ವ್ಯಾಪ್ತಿಯಲ್ಲೇ ಮಳೆಯು ಕೆಲವು ಭಾಗದಲ್ಲಿ ಉತ್ತಮವಾಗಿ ಹಾಗಿದೆ ಕೆಲವು ಬಾಗದಲ್ಲಿ ಕೊರತೆ ಇದೆ, ಈ ರೀತಿ ಹಾವಾಮಾನ ವೈಪರಿತ್ಯಗಳು ವರ್ಷಗಳಲ್ಲಿ ಏರುಪೇರುಗಳಾಗುತ್ತಿರುತ್ತವೆ,ಆದ್ದರಿಂದ ಗ್ರಾಮ ಪಟ್ಟಣ ನಗರ ಪ್ರದೇಶಗಳಲ್ಲಿರುವ ಕೆರೆಗಳನ್ನು ಮೊದಲು ಸಂರಕ್ಷಿಸುವ ಯೋಜನೆಗೆ ಸರ್ಕಾರ ಮುಂದಾಗಬೇಕು ಪ್ರತಿ ಕೆರೆಗಳಲ್ಲಿ ಹೊಳೆತ್ತುವ ಕಾಮಗಾರಿಗಳು ಹಾಗಬೇಕಿದ್ದು, ಈ ಕೆಲಸದಲ್ಲಿ ಗ್ರಾಮಸ್ಥರ ಪಾತ್ರ ಮಹತ್ವದಿದ್ದು ಇದರಿಂದ ಮಳೆ ಬಿದ್ದಂತ ನೀರು ಹೆಚ್ಚು ಶೇಖರಣೆಯಾಗಲ್ಲಿದ್ದು ಬಿದ್ದಂತಹ ಮಳೆ ವ್ಯಯವಾಗುವುದಿಲ್ಲ, ಹಲವಾರು ಕೆರೆಗಳು ಶಿಥೀಲಾವಾಗುತ್ತಿದ್ದು ಅವುಗಳ ದುರಸ್ತಿ ಆಭಿವೃಧಿಗೆ ವಿಶೇಷ ಅನುಧಾನದ ಅವಶ್ಯಕವಿದೆ ಎಂದರು.
ಈ ಹಿಂದೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ವಿಶ್ವಬ್ಯಾಂಕ್ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಕೆರೆಗಳ ಸಂರಕ್ಷಣೆಗೆ 800 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು.ಆದ್ದರಿಂದ ಈ ಭಾರಿಯ ಅಯವ್ಯಯದಲ್ಲಿ ಮಾನ್ಯ ಮುಖಮುಂತ್ರಿಗಳು ಕೆರೆಗಳ ಸಂರಕ್ಷಣೆಗೆ ವಿಶೇಷ ಅನುಧಾನ ನೀಡು ವಂತೆ ಒತ್ತಾಯಿಸಿ ಮನವಿ ಮಾಡಲಾಗುವುದು ಇದರಿಂದ ವರುಣನ ಅತಿಋಷ್ಟಿ ಅನಾಋಷ್ಟಿ ಯ ಪ್ರಭಾವ ಸ್ವಲ್ವ ಕಡಿಮೆಯಾಗುತ್ತದೆ ಬಯಲು ಸೀಮೆ ಪ್ರದೇಶಗಳಿಗೆ ಬೃಹತ್ ನೀರಾವರಿ ಯೋಜನೆಗಳೋಂದಿಗೆ ಮಳೆನೀರನ ಹೆಚ್ಚು ಕ್ರೂಢೀಕರಣಕ್ಕಾಗಿ ಕೆರೆಗಳ ಪುನಶ್ಚೇತನ ಅಗತ್ಯವಾಗಿದೆ ಎಂದರು. ಗಟ್ಲಹಳ್ಳಿ ಕೆರೆ ತಂಬಿದ ಹಿನ್ನಲೆಯಲ್ಲಿ ಸಂಪ್ರದಾಯದಂತೆ ಗಂಗಾ ಪೂಜೆ ನರವೇರಿಲಾಗಿದ್ದು ಇದಕ್ಕೆ ಗ್ರಾಮಸ್ಥರು ವಿಶೇಷವಾಗಿ ಮಹಿಳೆಯರು ಗಾಮಪಂಚಾಯಿತಿ ಅದ್ಯಕ್ಷ ಸದಸ್ಯ ಜೊತಗೂಡಿರುವುದು ಸಂತೋಷತಂದಿದೆ, ಎತ್ತನಹೊಳೆ ಯೋಜನೆಯಲ್ಲಿ ಕೆರೆ ತುಂಬಿಸುವ ಕಾರ್ಯದಲ್ಲಿ ಈ ಕೆರೆಯು ಸೇರಿದೆ, ಗ್ರಾಮಸ್ಥರ ಕೊರಿಕೆಯಂತೆ ಈ ಗ್ರಾಮದಲ್ಲಿ ಶಾಲಾ ಕಾಂಪೌಂಡ್ ಆಟದ ಮೈದಾನ ಡೈರಿ ಕಟ್ಟಡ ಮಾಡಿಕೊಡಲಾಗುವುದು ,ಗಟ್ಲಗೊಲ್ಲಹಳ್ಳಿ ಗ್ರಾಮದ ಆಂಜಿನೇಯಸ್ವಾಮಿ ದೇವಾಲಯಕ್ಕೆ ಸಮುದಾಯ ಭವನ ಕಟ್ಟಲು ಅನುಧಾನ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಹಿದಾ ಜಮ್ ಜಮ್ ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ದೋಡ್ಡಸಿದ್ದಯ್ಯ ಕಿರುನೀರಾವರಿ ಇಲಾಖೆ ಎಇ ರಮೇಶ್‌ಕುಮಾರ್ ಎಇಇ ಗಳಾದ ಉಮಾಮಹೇಶ್ ಮಂಜುನಾಥ್ ಮಲ್ಲಯ್ಯ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಅರಕರೆ ಶಂಕರ್ ಕೋಡ್ಲಹಳ್ಳಿ ಅಶ್ವಥನಾರಾಯಣ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಯುವ ಅದ್ಯಕ್ಷ ವಿನಯಕುಮಾರ್ ಮಹಿಳಾ ಅದ್ಯಕ್ಷರುಗಳಾದ ಜಯಮ್ಮ ಶೈಲಜ ಗ್ರಾಪಂ ಅದ್ಯಕ್ಷ ಶಿವರಾಮ್ ಮಾಜಿ ಅದ್ಯಕ್ಷೆ ಲಕ್ಷೀ ಸದಸ್ಯೆ ರಾಮಾಮಣಿ ಮಾಜಿ ತಾಪಂಸದಸ್ಯ ರವಿಕುಮಾರ್ ಮುಖಂಡರುಗಳಾದ ಗೊಂದಿಹಳ್ಳಿರಂಗರಾಜು ವೆಂಕಟಪ್ಪ ಚಿನ್ನಿಗಣ್ಣ ದೋಡ್ಡಸಿದ್ದಪ್ಪ ಕುಮಾರ್ ಬಸವರಾಜು ಕಿರಣ್ ಕೇಬಲ್‌ಆನಂದ್ ಸೇರಿದಂತೆ ಇತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker