ಚಿಕ್ಕನಾಯಕನಹಳ್ಳಿ
ಹನುಮಂತಪುರ ಆಂಜನೇಯ ದೇವಾಲಯದ ಹುಂಡಿ ಹಣ ಕಳವು
ಹುಳಿಯಾರು : ದೇವಾಲಯದ ಬಾಗಿಲ ಬೀಗ ಕಟ್ ಮಾಡಿ ಒಳನುಗ್ಗಿ ಹುಂಡಿ ಹೊತ್ತೊಯ್ದು ದೇವಾಲಯದ ಪಕ್ಕದ ಜಮೀನಿನಲ್ಲಿ ಹುಂಡಿ ಹೊಡದು ಹಣ ದೋಚಿಕೊಂಡು ಹೋಗಿರುವ ಪ್ರಕರಣ ಹುಳಿಯಾರು ಸಮೀಪದ ಹನುಮಂತಪುರದಲ್ಲಿ ಶನಿವಾರ ರಾತ್ರಿ ಜರುಗಿದೆ.
ಹುಳಿಯಾರು ಹೋಬಳಿಯ ಮೋಟಿಹಳ್ಳಿ ಮಜುರೆಯ ಹನುಮಂತಪುರದ ಆಂಜನೇಯ ದೇವಾಲಯದಲ್ಲಿ ಹುಂಡಿ ಹಣ ಕಳುವಾಗಿದೆ. ಶನಿವಾರ ರಾತ್ರಿ ಗ್ಯಾಸ್ ಕಟರ್‌ನಲ್ಲಿ ದೇವಾಲಯದ ಬೀಗ ಕಟ್ ಮಾಡಿ ಕಳ್ಳರು ಒಳ ನುಗ್ಗಿದ್ದಾರೆ. ದೇವಾಲಯದಲ್ಲಿ 6 ತಿಂಗಳಿಂದ ಹೊಡೆಯದೆ ಹಣ ಸಂಗ್ರಹಿಸಿಟ್ಟ ಹುಂಡಿಯನ್ನು ದೇವಾಲಯದಿಂದ ಹೊತ್ತೊಯ್ದಿದ್ದಾರೆ.
ದೇವಾಲಯದ ಸ್ವಲ್ಪ ದೂರದ ಜಮೀನೊಂದರಲ್ಲಿ ಹುಂಡಿಯನ್ನೂ ಸಹ ಗ್ಯಾಸ್ ಕಟರ್‌ನಲ್ಲಿ ಕಟ್ ಮಾಡಿ ಅದರಲ್ಲಿದ್ದ ಹಣವನ್ನು ದೋಚಿ ಹುಂಡಿಯನ್ನು ಜಮೀನಿನಲ್ಲೇ ಬಿಟ್ಟು ಹೋಗಿದ್ದಾರೆ. ಹುಳಿಯಾರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.