ಟಿ.ಬಿ.ಸಿ. ನಾಲಾ ಅಗಲೀಕರಣದ ಹೆಸರಿನಲ್ಲಿ ಕೋಟ್ಯಾಂತರ ರೂ ಹಣ ಗುಳುಂ : ಎಂ.ಟಿ.ಕೃಷ್ಣಪ್ಪ
ತುರುವೇಕೆರೆ: ಕಾವೇರಿ ನೀರಾವರಿ ನಿಗಮದ ಟಿ.ಬಿ.ಸಿ. ನಾಲಾ ಅಗಲೀಕರಣದ ಹೆಸರಿನಲ್ಲಿ ಮಾನದಂಡ ಅನುಸರಿಸದೇ ಕೋಟ್ಯಾಂತರ ರೂಗಳನ್ನು ಗುತ್ತಿಗೆದಾರರು ಹಾಗೂ ಕಾವೇರಿ ನೀರಾವರಿ ಅಧಿಕಾರಿಗಳು ಶಾಮೀಲಾಗುವ ಮೂಲಕ ವ್ಯಾಪಕ ಭ್ರಷ್ಟಾಚರವೆ¸ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಟಿ.ಬಿ.ಸಿ. ನಾಲಾ ಅಗಲೀಕರಣದ ಹೆಸರಿನಲ್ಲಿ ಸುಮಾರು 475 ಕೋಟಿರೂಗಳಿಗೆ ಅಂದಾಜುಪಟ್ಟಿ ತಯಾರಿಸಲಾಗಿದೆ. ಮಾನದಂಢದನ್ವಯ ಟಿ.ಬಿ.ಸಿ. ನಾಲೆಯಲ್ಲಿ ವಿ.ಸಿ.ಆರ್. ಲೈನಿಂಗ್ ಮಾಡಬೇಕಿದೆ. ಪ್ರಾಥಮಿಕ ಹಂತದಲ್ಲಿ ಸೈಜು ಕಲ್ಲಿನ ಹಾಸು ನಿರ್ಮಿಸಬೇಕು, ಅದರ ಮೇಲೆ 40 ಎಂ.ಎA. ಕಬ್ಬಿಣ ಬಳಸಿ ಕಾಂಕ್ರೀಟ್ ನಿರ್ಮಾಣ ಮಾಡಿ ಅದರ ಮೇಲೆ 20 ಎಂ.ಎA. ಕಬ್ಬಿಣ ಬಳಸಿ ಕಾಂಕ್ರೀಟ್ ಹಾಕುವ ಮೂಲಕ ಕಾಮಗಾರಿ ನಿರ್ವಹಿಸಬೇಕಿತ್ತು. ಆದರೇ ಸದರಿ ಕಾಮಗಾರಿಯನ್ನು ಕೇವಲ 20 ಎಂ.ಎA. ಕಬ್ಬಿನ ಬಳಸಿ ಕಾಮಗಾರಿ ನಿರ್ವಹಿಸಿ ಕೈ ತೊಳೆದುಕೊಂಡಿದ್ದಾರೆ.. ಗುತ್ತಿಗೆದಾರರು ಅಧಿಕಾರಿಗಳು ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಶಾಮೀಲಾಗಿ ಈಗಾಗಲೇ 207 ಕೋಟಿ ರೂ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಒಟ್ಟಾರೇ ನಾಲಾ ಅಗಲೀಕರಣದ ಹೆಸರಿನಲ್ಲಿ ಹಣವನ್ನು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಲೂಟಿ ಹೊಡೆದಿದ್ದಾರೆ ಎಂದು ದೂರಿದರು.
ತನಿಖೆಗೆ ಆಗ್ರಹ: ಕಾವೇರಿ ನೀರಾವರಿ ನಿಗಮದ ಟಿ.ಬಿ.ಸಿ. ನಾಲಾ ಅಗಲೀಕರಣದ ಹೆಸರಿನಲ್ಲಿ ಕೋಟ್ಯಾಂತರ ರೂಗಳ ವ್ಯಾಪಕ ಭ್ರಷ್ಟಾಚಾರ ನೆಡೆದಿದೆ. ಇದನ್ನು ದಾಖಲೆ ಸಹಿತ ವಿವರಿಸಲು ನಾನು ಸಿದ್ದನಿದ್ದು ಮುಂಬರುವ ದಿನಗಳಲ್ಲಿ ಇದರಲ್ಲಿ ಶಾಮೀಲಾಗಿರುವ ಪ್ರಮುಖರ ಬಣ್ಣ ಬಯಲು ಮಾಡುತ್ತೇನೆ. ಈಗಾಗಲೇ ಲೋಕಾಯುಕ್ತರಿಗೆ ಭ್ರಷ್ಟಾಚಾರ ಕುರಿತು ಪತ್ರ ಬರೆದು ತನಿಖೆ ನೆಡೆಸುವಂತೆ ಮನವಿ ಮಾಡಿದ್ದೇನೆ. ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಈಕೂಡಲೇ ಕಾಮಗಾರಿ ನಿಲ್ಲಿಸಿ ಸಂಬAದಪಟ್ಟ ಅಧಿಕಾರಿಗಳನ್ನು ಅಮಾನತ್ತಿನಲ್ಲಿರಿಸಿ ತನಿಖೆ ನೆಡೆಸಲಿ ಎಂದರು.
ಬೃಹತ್ ಪ್ರತಿಭಟನೆ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೊಧಿ ನೀತಿಯನ್ನು ಖಂಡಿಸಿ ತುರುವೇಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಿ.ಎಸ್.ಪುರದಲ್ಲಿ ಇದೇ ತಿಂಗಳ 18 ರ ಸೋಮವಾರದಂದು ಸಾವಿರಾರು ಕಾರ್ಯಕರ್ತರನ್ನು ಒಗ್ಗೂಡಿಸಿ ಪ್ರತಿಭಟನೆ ನೆಡೆಸಲಾಗುವುದು ಎಂದರು.
ಗೋಷ್ಟಿಯಲ್ಲಿ ಯುವ ಜೆ.ಡಿ.ಎಸ್.ನ ರಮೇಶ್, ಎ.ಪಿ.ಎಂ.ಸಿ. ನಿರ್ದೇಶಕ ವಿಜಯಕುಮಾರ್, ಮಾಜಿ ಅಧ್ಯಕ್ಷ ಮಾಯಣ್ಣಗೌಡ, ವಕ್ತಾರ ಯೋಗೀಶ್, ಮತ್ತಿತರಿದ್ದರು.