ಸುದ್ದಿ

ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ : ಡಾ.ಪಾಪಣ್ಣ

ರಾಜ್ಯಮಟ್ಟದ ಕಾಡುಗೊಲ್ಲರ ಚಿಂತನ ಮಂಥನ

ಕುಣಿಗಲ್ : ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಶೀಘ್ರವಾಗಿ
ನೂತನ ಕಾಡುಗೊಲ್ಲರ ನಿಗಮಕ್ಕೆ ಅಧ್ಯಕ್ಷರ ನೇಮಕ ವಾಗಬೇಕು ಎಂದು ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಹಾಗೂ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ, ಪಾಪಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.                                                                                                                                                              ತಾಲ್ಲೂಕಿನ ಯಡಿಯೂರು ಹೋಬಳಿ ಆಲಪ್ಪನಗುಡ್ಡೆಯ ಹಾಲಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ  ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾಡುಗೊಲ್ಲರ ಚಿಂತನ ಮಂಥನ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಜನಾಂಗ ಹಲವಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿ ಸಾಮಾಜಿಕವಾಗಿ,ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ,ಧಾರ್ಮಿಕವಾಗಿ, ತುಂಬಾ ಅನ್ಯಾಯವಾಗಿದೆ ಇವುಗಳನ್ನು ನಾವು ಸರಿಪಡಿಸಿಕೊಳ್ಳಬೇಕು ಎಂದರೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಹೋಬಳಿ ಮಟ್ಟದ ಕಾಡುಗೊಲ್ಲ ಮುಖಂಡರುಗಳು ಒಗ್ಗಟ್ಟಾಗಿ ಪಕ್ಷಾತೀತವಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡಿದರೆ ಫಲ ಲಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮುದಾಯದ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ ಈಗಾಗಲೇ ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ಅವರಿಗೆ ಕಾಡುಗೊಲ್ಲ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದೇವೆ ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ ಅವರು ಜನಾಂಗದ ಮುಖಂಡರು ಯಾವುದೇ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದರೂ ಪರವಾಗಿಲ್ಲ ಆದರೆ ಜನಾಂಗದ ಸಮಸ್ಯೆಗಳು ಬಂದಾಗ ಅವುಗಳನ್ನು ಬದಿಗೊತ್ತಿ ಪ್ರಾಮಾಣಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು. ಚಿಂತನ ಮಂಥನ ಸಭೆಯಲ್ಲಿ ಜಾತಿ ಪ್ರಮಾಣ ಪತ್ರ, ವಿದ್ಯಾರ್ಥಿಗಳ ಆದಾಯ ಮಿತಿ,ಕಾಡುಗೊಲ್ಲ ನಿಗಮಕ್ಕೆ ಅಧ್ಯಕ್ಷರ ನೇಮಕ ಒಳಗೊಂಡಂತೆ ಹಲವಾರು ಜ್ವಲಂತ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಜನಾಂಗಕ್ಕೆ ಆಗಿರುವ ಲೋಪದೋಷಗಳನ್ನು ಗಂಭೀರವಾಗಿ ಚರ್ಚಿಸಲು ಮತ್ತೊಮ್ಮೆ ಸೆಪ್ಟೆಂಬರ್ 26ರಂದು ಸಭೆ ಆಯೋಜನೆ ಮಾಡುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಬದಲ್ಲಿ ರಾಜ್ಯದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾದ ಹಟ್ಟಿಲಕ್ಕಮ್ಮ ದೇವಾಲಯದ ಪ್ರಧಾನ  ಅರ್ಚಕ ಹಾಗೂ ಜನಾಂಗದ ಮುಖಂಡ ಗೋಪಾಲಯ್ಯ, ಹರೀಶ್, ರಾಜಪ್ಪ, ಹಾರೋಗೆರೆ ಮಹೇಶ್, ಡಾಕ್ಟರ್ ದೊಡ್ಡನಂಜಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕೃಷ್ಣಪ್ಪ, ಗೊಲ್ಲರಹಟ್ಟಿ ರಾಜಣ್ಣ, ಹಿಂದುಳಿದ ರ‍್ಗದ ಆಯೋಗದ ಮಾಜಿ ಸದಸ್ಯ ಪ್ರೊಫೆಸರ್ ಗುರುಲಿಂಗಯ್ಯ ಸಮುದಾಯದ ಜಿಲ್ಲಾಧ್ಯಕ್ಷ ಶಿವಯಾದವ್, ಸಮುದಾಯದ ಮುಖಂಡರುಗಳಾದ ಮಾಜಿ ಜಿಪಂ ಸದಸ್ಯ ಉಗ್ರಯ್ಯ ಮತ್ತು ಎ ಇ ಈ ಷಣ್ಮುಖಪ್ಪ ರಾಜಪ್ಪ ಮೀನಾಕ್ಷಿ ಶಿಕ್ಷಕ ಉಮೇಶ್, ಆರ್ ಪ್ರಕಾಶ್, ರಾಜೇಶ್, ಜಯಣ್ಣ, ಶಿವರಾಜು,ಒಳಗೊಂಡಂತೆ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker