ಪಾವಗಡ: ಗಣೇಶನ ಹಬ್ಬವನ್ನು ಪೂಜೆ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಅಯೋಜಿಸುವ ಜೊತೆಯಲ್ಲಿ ಅರೋಗ್ಯ ಶಿಬಿರ ಏರ್ಪಡಿಸಿ ತಾಂಡಾದ ವಾಸಿಗಳ ಅರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿರುವುದು ದಿನ್ನಪ್ಪ ಬಾವಿತಾಂಡಾದ ಯುವಕರು ಎಲ್ಲರಿಗೂ ಮಾದರಿಯಾಗಿದೆ ಎಂದು ಪಾವಗಡ ಪುರಸಭಾದ್ಯಕ್ಷ ರಾಮಾಂಜಿನಪ್ಪ ತಿಳಿಸಿದರು..
ಪಟ್ಟಣದ ಶಿರಾರಸ್ತೆಯ ಮಾರ್ಗದ ದಿನ್ನಪ್ಪಬಾವಿ ತಾಂಡಾದಲ್ಲಿನ ಯುವಕರು ಗÃಣೇಶ ಹಬ್ಬದ ಪ್ರಯುಕ್ತ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಉಚಿತ ಕೀಲು ಮತ್ತು ಮೂಳೆರೋಗ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂಗಳಿಗೆ ದಸರಾ, ದಿಪಾವಳಿ, ಯುಗಾದಿ ಹಬ್ಬಗಳಂತೆ ಗಣೇಶ ಹಬ್ಬವೂ ಸಹ ಶ್ರೇಷ್ಟವಾದದ್ದು, ಕಳೆರೆದಡು ವರ್ಷಗಳಿಂದ ಗಣೇಶ ಹಬ್ಬಕ್ಕೆ ಕರೋನಾದಿಂದ ಬ್ರೇಕ್ ಬಿದ್ದಿದ್ದರಿಂದ ಈ ಬಾರಿ ಬೆರಳೆಣಿಕೆಯಷ್ಟು ಕಡೆ ಮಾತ್ರ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದು, ಮನಷ್ಯನಿಗೆ ಉತ್ತಮಅಹಾರ, ಉತ್ತಮ ಅರೋಗ್ಯ ಇದ್ದರೆ ದಿನವೂ ಹಬ್ಬವೇ, ತಾಲ್ಲೂಕಿನ ತಾಂಡಾಗಳಲ್ಲಿ ಚಿಕ್ಕದಾದ ತಾಂಡಾ ದಿನ್ನಪ್ಪಬಾವಿ ತಾಂಡಾ, ಈ ತಾಂಡಾದಲ್ಲಿ ಗಣೇಶನ ಹಬ್ಬವನ್ನು ಉಚಿತ ಅರೋಗ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಅಚರಿಸಿದ್ದಾರೆ ಎಂದು ಕೊಂಡಾಡಿದರು.
ತಾಂಡಾದ ನಿವಾಸಿಗಳಿಗೆ ಚಿಕಿತ್ಸೆ ನೀಡಿ ಮಾತನಾಡಿದ ಸನ್ ರೈಸ್ ಅಸಪತ್ರೆಯ ಡಾ. ಶ್ರೀಕಾಂತ್ ಪುವ್ವಾಡಿ, ತಾಂಡಾದಲ್ಲಿ ಹೆಚ್ಚು ಮಂದಿ ಸೊಂಟ ಮತ್ತು ಬೆನ್ನುನೋವಿನಿಂದ ನರಳುತ್ತಿದ್ದಾರೆ, ಪ್ಲೋರೈಡ್ ನಿಂದ ತಾಲ್ಲೂಕಿನಲ್ಲಿ ಈ ರೀತಿಯಾದ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಶುದ್ದ ಕುಡಿಯುವ ನೀರು ಮತ್ತು ಉತ್ತಮ ಪೌಷ್ಟಿಕ ಅಹಾರ ಸೇವನೆ ಮಾಡಬೇಕು, ಮತ್ತು ನೋವು ಕಾಣಿಸಿದ ತಕ್ಷಣದಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಬೇಗ ಗುಣಮುಖರಾಗುತ್ತಾರೆ ಎಂದರು.
ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂಶಶಿಕಿರಣ್ ಮಾತನಾಡಿ, ತಾಂಡಾಗಳನ್ನು ಖಂದಾಯ ಗ್ರಾಮಗಳನ್ನಾಗಿ ಸರ್ಕಾರ ಘೋಷಿಸಬೇಕು, ಹಾಗೂ ಮೂಲಭೂತಸೌಕರ್ಯಗಳನ್ನು ಕಲ್ಪಿಸಬೇಕು,ತಾಂಡಾದ ವಾಸಿಗಳು ನಿತ್ಯ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವವರು, ಈ ಸಮಯದಲ್ಲಿ ತಮ್ಮ ಅರೋಗ್ಯದ ಕಡೆ ಗಮನ ಹರಿಸಬೇಕಾಗಿದೆ, ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಶಿಬಿರದಲ್ಲಿ ಸುಮಾರು 50 ರೋಗಿಗಳನ್ನು ಪರೀಕ್ಷಿಸಿ ಸೂಕ್ತಸಲಹೆ ನೀಡಿ ಉಚಿತವಾಗಿ ಸನ್ ರೈಸ್ ಅಸ್ಪತ್ರೆಯಿಂದ ಔಷಧಿಗಳನ್ನು ವಿತರಿಸಲಾಯಿತು.
ಈ ವೇಳೆ ತಾಂಡಾದ ಗಣೇಶ ಯುವಕ ಸಂಘದ ವೆಂಕಟೇಶ್‌ನಾಯ್ಕ, ಗೋಪಾಲನಾಯ್ಕ, ಕುಮಾರ್, ನಾಗೇಂದ್ರ, ಸೋಮಶೇಖರ್‌ನಾಯ್ಕ, ರೋಟರಿ ಅಧ್ಯಕ್ಷರಾದ ಶ್ರಿಧರ್ ಗುಪ್ತ,ಸ್ವಯಂಸೇವಕರಾದ ಅನಿಲ್‌ಕುಮಾರ್, ಬೇಕರಿನಾಗರಾಜ್, ಬ್ಲಡ್‌ಶಶಿಕಲಾ, ರಾಕೇಶ್, ಭೀಮರಾಜ್, ಹಾಜರಿದ್ದರು,