ಪಾವಗಡ : ರೈತರ ಮನೆಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಡಿಜಿಟಲ್ ಸಂಚಾರಿ ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸಮಗ್ರ ಸೇವಾಭಿವೃದ್ದಿ ಟ್ರಸ್ಟ್ನ ಮಾರ್ಗದರ್ಶಕರಾದ ಎಸ್.ಆರ್.ರಾಘವೇಂದ್ರ ತಿಳಿಸಿದರು.
ಇತ್ತೀಚೆಗೆ ವದನಕಲ್ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಅವರಣದಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಪಾವಗಡ ಸಂಚಾರಿ ವಾಹನ, ಮತ್ತು ವೈ.ಎನ್.ಹೊಸಕೋಟೆಯಲ್ಲಿನ ಡಿಜಿಟಲ್ ಪಾವಗಡ ಈ ಸೇವಾಕೆಂದ್ರ ಲೋಕಾರ್ಪಣೆಗೊಳಿಸಿ, ಮಾತನಾಡಿದ ಅವರು, ನಮ್ಮ ಟ್ರಸ್ಟ್ನ ಬಹುದಿನಗಳ ಕನಸು ಇಂದು ನನಸಾಗಿದ್ದು, ತಾಲ್ಲೂಕಿನಲ್ಲಿನ ಪ್ರತಿಯೊಂದು ಸವಲತ್ತು ಪಡೆಯಲು ಪಾವಗಡ ಕೇಂದ್ರಸ್ಥಾನಕ್ಕೆ ಹೋಗಬೇಕು, ಈ ವೇಳೆ ಹಣ ಮತ್ತು ಸಮಯ ಪೋಲಾಗುತ್ತಿದೆ, ಈ ದೃಷ್ಟಿಯಿಂದ ಡಿಜಿಟಲ್ ಸಂಚಾರಿ ವಾಹನದ ಮೂಲಕ ನಿತ್ಯ ಗ್ರಾಮಗಳಿಗೆ ತೆರಳಲಿದ್ದು, ಕೇಂದ್ರ ಮತ್ತು ರಾಜ್ಯ ಸಕಾರದ ಎಲ್ಲಾ ಸೇವೆಗಳು ಒಂದೇ ಸೂರಿನಡಿಯಲ್ಲಿ, ಅಲ್ಲದೆ ನಾಡ ಕಛೇರಿಯಲ್ಲಿ ಸಿಗುವ ಸೌಲಭ್ಯಗಳಾದ ಪಹಣಿ, ಜಾತಿಮತ್ತು ವರಮಾನ, ಸಂದ್ಯಾಸುರಕ್ಷಾ, ವಿಧವಾವೇತನ, ವೃದ್ಯಾಪ್ಯವೇತನ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಜಿಸಲ್ಲಿಬಹುದಾಗಿದೆ, ಇಂದಿನ ಡಿಜಿಟಲ್ ಯುಗದಲ್ಲಿ ಗ್ರಾಮಗಳಲ್ಲಿ ನಡೆಯು ಪ್ರತಿಯೊಂದು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ ಎಂದರು. ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ನಿಡಗಲ್ ವಾಲ್ಮೀಕಿ ಆಶ್ರಮದ ಶ್ರೀ ಸಂಜಯಕುಮಾರಸ್ವಾಮಿ ಮಾತನಾಡಿ, ಕೋರೋನಾ ಸಂಕಷ್ಟದಲ್ಲಿ, ಅಟೋಚಾಲಕರಿಗೆ ಸೇರಿದಂತೆ ತಾಲ್ಲೂಕಿನ ಕೂಲಿಕಾರ್ಮಿಕರಿಗೆ, ಬಡವರಿಗೆ ಆಹಾರ ಕಿಟ್ ವಿತರಿಸಿದ್ದು ತಿಂಗಳಿಗೆ ಒಂದು ಗ್ರಾಮದಲ್ಲಿ ಶ್ರಮದಾನ ಮಾಡುತ್ತಾ ಸ್ವಚ್ಚತೆಯ ಬಗ್ಗೆ ಅರಿವನ್ನು ಮೂಡಿಸುತ್ತಾ, ಹೀಗ ಡಿಜಿಟಲ್ ಪಾವಗಡ ಸಂಚಾರಿ ವಾಹನದ ಮೂಲಕ ಗ್ರಾಮಗಳಿಗೆ ತೆರಳಿ ರೈತರ, ಕೂಲಿಕಾರ್ಮಿಕರಿಗೆ ಅನುಕೂಲ ಮಾಡಿಕೊಡುತ್ತಿರುವುದು ನಿಜವಾದ ಸೇವೆ ಎಂದು ಟ್ರಸ್ಟö ಕಾರ್ಯಕ್ರಮಗಳ ಬಗ್ಗೆ ಸ್ವಾಮೀಜಿ ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಸಣ್ಣಾರೆಡ್ಡಿ, ಜಿಪಂ ಮಾಜಿ ಸದಸ್ಯ ಗೋಪಾಲರೆಡ್ಡಿ, ತಾಪಂ ಮಾಜಿ ಉಪಾದ್ಯಕ್ಷ ಜಗನ್ನಾಥ್, ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಶಶಾಂಖ್, ನಿದೇಶಕರಾದ ವರ್ಮಾಪ್ರಸಾದ್, ಶ್ರೀಧರ್‌ಗುಪ್ತಾ, ಹರಿನಾಥ್, ವಿನೋದ್ ರವಿಕುಮಾರ್, ವೆಂಕಟೇಶ್ ಗೌಡ, ಕಲ್ಪನಾ, ಸುಭಾಶ್ ಪಾಳ್ಳೆಗಾರ್ ಉಪಸ್ಥಿತರಿದ್ದರು.