ಕೊರಟಗೆರೆ ;- ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಪಟ್ಟಣ ಪಂಚಾಯಿತಿಯ ವಸುಲಾಗುವ ಲಾಭಾಂಷದ ಮೊತ್ತದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇ.24 ರ ಅನುಪಾತವನ್ನು ತೆಗೆಯದೆ ಮೊಸ ಮಾಡುತ್ತಿದ್ದಾರೆ ಎಂದು ದಲಿತ ಸಬೆಯಲ್ಲಿ ಒಕ್ಕೂರಲ ಆರೋಪ ಕೇಳಿಬಂದಿದೆ.
ಕೊರಟಗೆರೆ ತಾಹಶೀಲ್ದಾರ್ ನಾಹಿದಾ ಜಮ್ ಜಮ್ ಅಧ್ಯಕ್ಷತೆಯಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಬೆಯಲ್ಲಿ ದಲಿತ ಮುಖಂಡ ವೆಂಕಟೇಶ್‌ಮೂರ್ತಿ ಮಾತನಾಡಿ ಸರ್ಕಾರದ ಆದೇಶದಂತೆ ತಾಲೂಕಿನ ಗ್ರಾಮ ಪಂಚಾಯತಿ ಮತ್ತು ಪಟ್ಟಣ ಪಂಚಾಯಿತಿ ಗಳಲ್ಲಿ ಶೇ.24 ರ ಅನುಪಾತವನ್ನು ಅನುಸರಿಸುತ್ತಿಲ್ಲಾ ಈ ಬಗ್ಗೆ ತಹಶೀಲ್ದಾರ್ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕೆಂದರು. ಅದೇ ರೀತಯಾಗಿ ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಇಲಾಖೆಗಳಲ್ಲಿ ಎಸ್ಸಿ-ಎಸ್ಟಿ ಗಳ ಗುತ್ತಿಗೆದಾರರಿಗೆ ತುಂಡು ಗುತ್ತಿಗೆಯಲ್ಲಿ ಬಾರಿ ಅವ್ಯವಹಾರ ನಡೆಯುತ್ತಿದೆ ಅದರಲ್ಲೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಯಲ್ಲಿ 36 ತುಂಡುಗುತ್ತಿಗೆಗಳನ್ನು ಇಲಾಖೆಯಲ್ಲಿಯೇ ಅಕ್ರಮವಾಗಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿರುವ ಇಬ್ಬರಿಗೆ ಬಹುಪಲು ನೀಡಿ ಅದನ್ನು ಅಧಿಕಾರಿಗಳು ಇತರ ಮೇಲ್ವರ್ಗದವರಿಗೆ ಮಾರಿಕೊಂಡಿದ್ದಾರೆ ಎಂದು ಆರೋಪಿಸಿದರು,
ಪರಿಶಿಷ್ಟ ವರ್ಗಗಳ ಮುಖಂಡ ಕೆ.ವಿ.ಮಂಜುನಾಥ್ ಮಾತನಾಡಿ ಪಟ್ಟಣ ಪಂಚಾಯಿತಿಯಲ್ಲಿ ವಾಲ್ಮಿಕಿ ಜಯಂತಿಯ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ, ಪ.ಪಂ.ಗೆ ಎಸ್,ಇ.ಟಿ/ಪಿಎಸ್‌ಟಿ ಅಡಿಯಲ್ಲಿ ಬಂದಂತಹ ಕೋಟ್ಯಾಂತರ ಅನುದಾನವನ್ನು ಎಸ್ಸಿ-ಎಸ್ಟಿ ಕಾಲೋನಿಗಳಲ್ಲಿ ಕಾಮಗಾರಿ ಮಾಡದೆ ಶೇ.90 ರಷ್ಟು ಅಧಿಕವಾಗಿರುವ ಸಾಮಾನ್ಯ ಕಾಲೋನಿಗಳಲ್ಲಿ ಕಾಮಗಾರಿ ಮಾಡಿದ್ದಾರೆ ಕೆಲವು ಕಾಮಗಾರಿ ಮಾಡದೆ ಹಣ ದುರುಪಯೋಗವು ಆಗಿದ್ದು ಈ ಕಾಮಗಾರಿಗಳ ಬಗ್ಗೆ ಸಮಗ್ರ ತನಿಕೆ ಆಗಬೇಕು ಎಂದು ಒತ್ತಾಯಿಸಿದರು. ಪ.ಪಂ.ಸದಸ್ಯ, ವಾಲ್ಮಿಕಿ ಸಂಘದ ಅಧ್ಯಕ್ಷ ಕೆ.ಎನ್.ಲಕ್ಷಿö್ಮನಾರಾಯಣ್ ಮಾತನಾಡಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಾಲ್ಮಿಕಿ ಭವನವನ್ನು ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸುವಂತೆ ಆಗ್ರಾಹಿಸಿದರು.
ಬಿ.ಡಿ,ಪುರದ ಪರಿಶಿಷ್ಠ ಜಾತಿ ಮುಖಂಡ ಸುರೇಶ್ ಮಾತನಾಡಿ ತಾಲೂಕಿನಲ್ಲಿ ಮುಜರಾಯಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ಪರಿಶಿಷ್ಟ ಜಾತಿರವರಿಗೆ ಈಗಲೂ ಪ್ರವೇಶವಿಲ್ಲ ಅಂತಹ ದೇವಾಲ ಯಗಳನ್ನು ತನಿಖೆ ಮಾಡಿ ಅವರುಗಳ ವಿರುದ್ದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಬೆಯಲ್ಲಿ ತಾಲೂಕಿನ ಹಲವು ಗ್ರಾಮಗಳಲ್ಲಿ ಎಸ್ಸಿ-ಎಸ್ಟಿ ಗಳಿಗೆ ರದ್ರಭೂಮಿಗಳಿಲ್ಲದೆ ತೋಂದರೆಗೆ ಒಳಗಾಗಿದ್ದು ಕೋಡಲೆ ಸರ್ಕಾರಿ ಜಮೀನು ಗುರುತಿಸಿ ಆಥವಾ ಖಾಸಗಿ ಜಮೀನನ್ನ ಕೊಂಡು ರುದ್ರಭೂಮಿ ಯನ್ನು ಮಂಜೂರುಮಾಡಿಸಲು ಒತ್ತಾಯಿಸಲಾಯಿತು. ಪಟ್ಟಣದಲ್ಲಿ ಕಾಳಿದಾಸ ಪೌಢಶಾಲೆ ಹತ್ತಿರ ಇರುವ ಪರಿಶಿಷ್ಠ ಜಾತಿಯ ರುದ್ರಭೂಮಿಯನ್ನು ಮತ್ತು ಗಂಗಾಧರೇಶ್ವರ ಕೆರೆಯ ಹತ್ತಿರ ಇರುವ ಪರಿಶಿಷ್ಠ ಪಂಗಡದ ರುದ್ರಭೂಮಿಯನ್ನು ದುರಸ್ಥಿಗೊಳಿಸುವಂತೆ ಹಣ ಬಿಡುಗಡೆಗೊಳಿಸುವಂತ ಆಗ್ರಹಿಸಿದರು. ಪರಿಶಿಷ್ಠ ಜಾತಿ ಮತ್ತು ಪಂಗಡದ ಸಭೆಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ಕರೆಯುವಂತೆ ಒತ್ತಾಯಿಸಿದರು.
ಸಬೆಯಲ್ಲಿ ತಾಹಶೀಲ್ದಾರ್ ನಾಹಿದಾ ಜಮ್ ಜಮ್, ಸಿಪಿಐ ಸಿದ್ದರಾಮೇಶ್ವರ, ಆರ್.ಐ.ಚಂದ್ರಪ್ಪ, ಸಮಾಜ ಕಲ್ಯಾಣಾಧಿಕಾರಿ ಶಮೀಮ್ ಉನ್ನಿಸಾ, ಪ.ಪಂ.ಮುಖ್ಯಾಧಿಕಾರಿ ಲಕ್ಷö್ಮಣ್‌ಕುಮಾರ್, ಪ.ಪಂ.ಸದಸ್ಯ ಪುಟ್ಟನರಸಪ್ಪ, ನಂದೀಶ, ಮುಖಂಡರುಗಳಾದ ಚಿಕ್ಕರಂಗಯ್ಯ, ದೊಡ್ಡಯ್ಯ, ಶಿವರಾಮಯ್ಯ, ರಾಘವೇಂದ್ರ, ಮಾರುತಿ, ಸಿದ್ದಪ್ಪ, ಕಣಿವೆ ಹನುಮಂತರಾಯಪ್ಪ, ನಾಗರಾಜು, ಮಹೇಶ್, ನಾಗೇಶ್ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.