
ಗುಬ್ಬಿ:- ಸಾಮಾಜಿಕ ಜಾಲತಾಣದಲ್ಲಿ ತುಕಾಲಿ ಸಂವಿಧಾನ ಎಂಬ ವಿರೋಧಿ ಬರಹವನ್ನು ಹಾಕುವ ಮೂಲಕ ಸಂವಿಧಾನಕ್ಕೆ ಅವಮಾನ ಮಾಡಿರುವ ಮತ್ತು ಕೋಟ್ಯಂತರ ದಲಿತರ ಭಾವನೆಗೆ ದಕ್ಕೆ ಉಂಟು ಮಾಡಿರುವ ವೀರೇಶ್ ಪ್ರಸಾದ್ ಎಂಬ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುಬ್ಬಿ ದಲಿತ ಪರ ಸಂಘನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಭೀಮಪುತ್ರಿ ಮಂಜು ಎಂಬ ಫೇಸ್ ಬುಕ್ ಖಾತೆಯಿಂದ ದಲಿತ ಕವಿ ಸಿದ್ದಲಿಂಗಯ್ಯ ನವರ ಹೊಲೆಯ ಮಾದಿಗರ ಕವಿತೆಗಳ ಸಂಕಲನದ ಒಂದು ಹಾಡಿಗೆ ವೀರೇಶ್ ಪ್ರಸಾದ್ ಎಂಬ ವ್ಯಕ್ತಿ ತುಕಾಲಿ ಸಂವಿಧಾನ ಎಂಬ ಪದ ಬಳಸಿ ದಲಿತರ ಭಾವನೆಗೆ ದಕ್ಕೆ ಉಂಟು ಮಾಡಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ನೀನು ನಿನ್ನ ಪುಸ್ತಕ ಎರಡು ಶುದ್ಧ ತುಕಾಲಿಗಳು ಅಜ್ಞಾನದಿಂದ ಕೂಡಿದ್ದರಿಂದ ಸುಜ್ಞಾನದ ಕಡೆಗೆ ಬೆಳಕಿಗೆ ಕೊಟ್ಟವರು ಅದೆಷ್ಟೋ ಜನ ತ್ರಿವಿಧ ದಾಸೋಹ ನೀಡಿದವರು ಎಷ್ಟೋ ಜನ ಅವರುಗಳ ಸ್ಮರಣೆ ಮಾಡು ತುಕಾಲಿ ಸಂವಿಧಾನ ಬರುವ ಮುಂಚೆ ಎಷ್ಟೋ ಮಠ ಮಾನ್ಯಗಳು ವಿದ್ಯಾಭ್ಯಾಸ ಕೊಟ್ಟಿವೆ ನಿಮಗೆ ಉಂಡು ತಟ್ಟೆಯಲ್ಲಿ ಹೇಳೊ ಜನ ನೀವು ಉಪಕಾರ ಸ್ಮರಣೆ ಮಾಡೋದು ಕಲಿರಿ ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಬಗ್ಗೆ ದೂರು ದಾಖಲಿಸಲು ಮುಂದಾದ ಘಟನೆ ನಡೆದಿದೆ.
ಗುಬ್ಬಿ ಪೊಲೀಸ್ ಠಾಣೆ ಬಳಿ ಜಮಾಯಿಸಿದ ನೂರಾರು ದಲಿತ ಪರ ಸಂಘಟನೆಗಳ ಒಕ್ಕೂಟದ ಮುಖಂಡರು ದಲಿತ ವಿರೋಧಿ ಹೇಳಿಕೆ ಖಂಡಿಸಿ ಘೋಷಣೆ ಕೂಗಿದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ಜಿ. ಎಚ್ ಜಗನ್ನಾಥ್, ನಿಟ್ಟೂರು ರಂಗಸ್ವಾಮಿ, ರೇಣುಕಾ ಪ್ರಸಾದ್, ಸಚಿನ್, ಕೀರ್ತಿ, ಮಧು, ಚೇತನ್, ನಟರಾಜು, ಈಶ್ವರಯ್ಯ, ಮನೋಹರ್, ಸೇರಿದಂತೆ ಇನ್ನಿತರರು ಸ್ಥಳದಲ್ಲಿದ್ದರು.