ಕ್ಷುಲ್ಲಕ ಕಾರಣಕ್ಕೆ ದೊಡ್ಡಪ್ಪನನ್ನೇ ಚಾಕುವಿನಿಂದ ಇರಿದು ಕೊಂದ ಪಾಪಿ ಮಗ

ಗುಬ್ಬಿ :- ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೊಡ್ಡಪ್ಪ ಮತ್ತು ತಾಯಿ ನಡುವೆ ಜಗಳ ನಡೆದು ಜಗಳ ತರಕ್ಕೇರಿ ತಾಯಿಯ ಫೋನ್ ಕರೆಯಿಂದ ಕುಪಿತಗೊಂಡ ಮಗ ಸ್ವಂತ ತಂದೆಯ ಅಣ್ಣ ಎಂಬುದನ್ನು ಮರೆತು ರಕ್ತ ಸಂಬಂದಿಯನ್ನು ರಕ್ತದ ಮಡುವಿನಲ್ಲಿ ತೇಲುವಂತೆ ಮಾಡಿ ಚಾಕು ಇರಿದು ಕೊಲೆಗೈದ ಧಾರುಣ ಘಟನೆ ನಡೆದಿದೆ.
ಗುಬ್ಬಿ ತಾಲ್ಲೋಕಿನ ಸಿ ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂಕಳಕೊಪ್ಪ ಅಂದರೆ ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಮಸಾಲೆ ಜಯರಾಮ್ ಅವರ ಸ್ವಗ್ರಾಮದಲ್ಲಿ ತಮ್ಮನ ಮಗನೊಬ್ಬ ತನ್ನ ದೊಡ್ಡಪ್ಪ ನನ್ನೇ ದಾರುಣವಾಗಿ ಕೊಲೆಗೈದ ಘಟನೆ ನಡೆದಿದೆ.
ಅಫ್ರಿದ್ ಸುಮಾರು (25) ವರ್ಷದವನು ದೊಡ್ಡಪ್ಪನನ್ನೇ ಕೊಲೆಗೈದ ವ್ಯಕ್ತಿ ಎನ್ನಲಾಗಿದ್ದು. ದೊಡ್ಡಪ್ಪ ಕರಿಂ ಸಾಬ್ ಸುಮಾರು (60) ವರ್ಷದವನು ಕೊಲೆಯಾದ ದುರ್ದೈವಿಯಾಗಿದ್ದಾನೆ.
ಅಫ್ರಿದ್ ತಾಯಿ ಬೇಬಿ ಜಾನ್ ಎಂಬುವರು ಕೊಲೆಯಾದ ಕರೀಮ್ ಸಾಬ್ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ಮೇಕೆ ಮೇಯಿಸುತ್ತಿದ್ದ ವೇಳೆ ಈ ಜಮೀನು ನನಗೆ ಸೇರಿದ್ದು ಯಾಕೆ ಇಲ್ಲಿ ಮೇಕೆ ಮೇಯಿಸುತ್ತಿದ್ದಿಯ ಎಂದು ಕೇಳಲಾಗಿ ಬೇಬಿ ಜಾನ್ ಮತ್ತು ಮೃತ ವ್ಯಕ್ತಿಯ ನಡುವೆ ಜಗಳ ನಡೆದಿದ್ದು ಈ ವಿಚಾರವನ್ನು ಬೇಬಿ ಜಾನ್ ಮಗನಾದ ಅಫ್ರಿದ್ ಗೆ ಫೋನ್ ಮಾಡಿ ತಿಳಿಸಿದ್ದು ಇದರಿಂದ ಆಕ್ರೋಶಗೊಂಡ ಅಫ್ರಿದ್ ರಸ್ತೆಯಲ್ಲಿ ಬರುತ್ತಿದ್ದ ದೊಡ್ಡಪ್ಪ ಕರೀಮ್ ಸಾಬ್ ಎಂಬಾತನನ್ನು ಅಡ್ಡಗಟ್ಟಿ ಕೊಲೆ ಮಾಡಿದ್ದಾನೆ ಎಂದು ತಿಳಿಯಲಾಗಿದೆ.
ಅದು ಏನೇ ಇರಲಿ ಕ್ಷಲ್ಲಕ ಕಾರಣಕ್ಕೆ ತನ್ನ ತಂದೆಯ ಅಣ್ಣ ಎಂಬುದನ್ನು ಮರೆತು ಕೊಲೆ ಮಾಡಲು ಮುಂದಾದ ಬಗ್ಗೆ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಕುಮಾರ್ ಸೇರಿದಂತೆ ಶಿರಾ ಡಿವೈಎಸ್ಪಿ ಶೇಖರ್, ಗುಬ್ಬಿ ವೃತ್ತ ನಿರೀಕ್ಷಕ ರಾಘವೇಂದ್ರ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿ.ಎಸ್ ಪುರ ಪೊಲೀಸ್ ಠಾಣೆಯಲ್ಲಿ ಅಫ್ರಿದ್ ಸೇರಿದಂತೆ ಅಶ್ವಕ್, ಗೌಸ್ ಪೀರ್, ಬೇಬಿ ಜಾನ್, ಎಂಬುವರ ನಾಲ್ಕು ಜನರ ಮೇಲೆ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.