
ಗುಬ್ಬಿ : ನನ್ನ 25 ವರ್ಷಗಳ ರಾಜಕಾರಣವನ್ನು ಹೇಗೆ ಕುತಂತ್ರದಿಂದ ಮುಗಿಸಿದ್ದೀಯೋ ಹಾಗೆಯೇ ನಿನ್ನ 25 ವರ್ಷಗಳ ರಾಜಕೀಯ ಮುಗಿದು ನನ್ನ ಹಾಗೆ ತೋಟ ಕಾಯುವ ಕಾಲ ಹತ್ತಿರದಲ್ಲಿದೆ ಜಿ.ಕೆ ಗಂಗೇಗೌಡರ ಮನೆಗೆ ಕೈಯಿಟ್ಟು ನೀ ಕೆಟ್ಟೆ ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ವಿರುದ್ಧ ಕೆಎಂಎಫ್ ಮಾಜಿ ನಿರ್ದೇಶಕ ಗೋಪಾಲಪುರ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಗೋಪಾಲಪುರದ ತಮ್ಮ ಸ್ವಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಎಂಎಫ್ ಚುನಾವಣೆಯಲ್ಲಿ ಜನಾಭಿಪ್ರಾಯದಿಂದ ಗೆದ್ದಿದ್ದೇನೆ ಎಂದು ಬೀಗುವ ನೀವು 5 ರಿಂದ 8 ಲಕ್ಷ ಕೊಟ್ಟು ಮತ ಪಡೆದಿದ್ದು ಜೊತೆಗೆ ಡಬಲ್ ಗೇಮ್ ಮಾಡುವವರ ಜೊತೆ ಸೇರಿ ನನ್ನನ್ನ ಸೋಲಿಸಲು ಮುಂದಾಗಿದ್ದು ಅದನ್ನ ಬಿಟ್ಟು ಬೇರೇನು ಇಲ್ಲ ನನ್ನ 25 ವರ್ಷಗಳ ರಾಜಕೀಯ ಹೇಗೆ ಮುಗಿದಿದೆಯೋ ಹಾಗೆ ನಿಮ್ಮ ರಾಜಕೀಯ ಅಂತ್ಯವಾಗಲಿದೆ ಎಂದು ಗುಬ್ಬಿ ಶಾಸಕರನ್ನ ರಾಜಕೀಯವಾಗಿ ಮುಗಿಸುವ ಮಾತುಗಳನ್ನು ಮಾಜಿ ನಿರ್ದೇಶಕರು ತಿಳಿಸಿದರು.
ನನ್ನನ್ನು ತೆಗೆದ ನಿನ್ನನ್ನು ತೆಗೆಯಲು ನನ್ನದು ಒಂದು ಪಡೆಯಿದೆ ಗಂಗೆಗೌಡರ ಮನೆಗೆ ಕೈಯಿಟ್ಟು ನೀ ಕೆಟ್ಟೆ, ಸುದೀರ್ಘ 25 ವರ್ಷಗಳಿಂದ ಯಾವುದೇ ರಾಜಕೀಯ ಬೆರೆಸದೆ ಸಹಕಾರ ಸಂಘ ನಡೆಸಿಕೊಂಡು ಬಂದ ನನ್ನನ್ನು ಮುಗಿಸಲು ನಿಮ್ಮ ಧರ್ಮಪತ್ನಿಯನ್ನು ಕರೆತಂದ ಹಾಗೆ ನಿನ್ನನ್ನು ಮುಗಿಸಲು ಮುಂದೊಬ್ಬ ಬಂದೇ ಬರುತ್ತಾನೆ ನಿಮ್ಮ ರಾಜಕೀಯ ಅಂತ್ಯ ಕಂಡೆ ಕಾಣುತ್ತೆ ನನ್ನನ್ನು ರಾಜಕೀಯವಾಗಿ ಮುಗಿಸಲು ನಿನ್ನ ಜೊತೆ ಕೈಜೋಡಿಸಿದ ಡಬಲ್ ಗೇಮ್ ಮಾಡುವವರ ದೂರವಿಟ್ಟು ರಾಜಕಾರಣ ಮಾಡು ಎಂದು ತಿಳಿಸಿದರು.
ಸಕಾಲಕ್ಕೆ ಚುನಾವಣೆ ನಡೆದಿದ್ದರೆ ನಿಮ್ಮ ಧರ್ಮಪತ್ನಿ ಅಲ್ಲ ನನ್ನ ಮುಂದೆ ನೀನೇ ಚುನಾವಣೆ ಎದುರಿಸಿದ್ದರು ಗೆಲ್ಲುತ್ತಿದ್ದು ನಾನೇ ಎಂಬುದನ್ನ ಮನಗಂಡ ನೀವು ಅಲ್ಲಿಯೂ ತಂತ್ರಗಾರಿಕೆ ಮಾಡಿ ಚುನಾವಣೆ ಒಂದು ವರ್ಷ ಮುಂದೆ ಹೋಗುವಂತೆ ಮಾಡಿ ಕೆಟ್ಟ ರಾಜಕಾರಣಕ್ಕೆ ಮುಂದಾಗಿದ್ದೀರಿ ರಾಜಕಾರಣವನ್ನು ನಾನು ಸುಮಾರು ಮೂವತ್ತು ವರ್ಷಗಳಿಂದ ಬಲ್ಲೆ ಇಂತಹ ಎಲ್ಲಾ ತಂತ್ರ ಕುತಂತ್ರಗಳನ್ನ ನೋಡಿದ್ದೇನೆ ಆದರೆ ನಿನ್ನಷ್ಟು ಕೀಳುಮಟ್ಟದ ರಾಜಕಾರಣವನ್ನ ಎಂದಿಗೂ ಮಾಡಿಲ್ಲ ಸರ್ಕಾರವನ್ನ ಬಳಸಿಕೊಂಡು ಎಷ್ಟರಮಟ್ಟಿಗೆ ನನಗೆ ತೊಂದರೆ ನೀಡಿದ್ದೀಯ ಎಂಬುದನ್ನ ತಾಲೂಕಿನ ಜನತೆ ಗಮನಿಸಿದೆ, ಮುಂದೆ ನಿನ್ನ ರಾಜಕೀಯ ಜೀವನದ ಅಂತ್ಯ ಶತಸಿದ್ಧ ಎಂದರು.