ಮೊಳಕಾಲ್ಮೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಪ್ರಭಾಕರ ಮ್ಯಾಸನಾಯಕರ ಹೆಸರು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಮುಖಂಡರು ಮಾತನಾಡತೊಡಗಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವು ಎಸ್‌ಟಿ ಮೀಸಲು ಕ್ಷೇತ್ರವಾಗಿರುವುದರಿಂದ ಈ ಕ್ಷೇತ್ರದಲ್ಲಿ ಬೇರೆ ಅನ್ಯ ಸಮುದಾಯದವರು ಅಧ್ಯಕ್ಷರಾಗಲು ಹಿಂಜರಿಯುತ್ತಿದ್ದಾರೆ ಕಾರಣ ಎಸ್.ಟಿ ಮೀಸಲು ಕ್ಷೇತ್ರ ಆಗಿರುವುದರಿಂದ ಹಣ ಶ್ರಮ ಮತ್ತು ಸಮಯವನ್ನು ವ್ಯರ್ಥ ಮಾಡಿಕೊಳ್ಳಲು ಸುತಾರಾಮ್ ಸಿದ್ಧವಿಲ್ಲ
ಈ ಹಿನ್ನೆಲೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಪ್ರಭಾಕರ್ ಮ್ಯಾಸ ನಾಯಕರಿಗೆ ಎರಡು ಮಂಡಲಗಳ ಪೈಕಿ ಒಂದರಲ್ಲಿ ಜವಾಬ್ದಾರಿಯನ್ನು ನೀಡಲು ಪಕ್ಷ ಉತ್ಸುಕವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮ್ಯಾಸನ್ಯಾಯಕರನ್ನು ಪತ್ರಿಕೆ ಸಂಪರ್ಕಿಸಿದಾಗ ಈ ನಿಟ್ಟಿನಲ್ಲಿ ಎಲ್ಲೂ ಚರ್ಚೆ ನಡೆದಿಲ್ಲ ಹಾಗೂ ಈಗಿರುವ ಇಬ್ಬರು ಅಧ್ಯಕ್ಷರು ಮಂಜುನಾಥ ಡಾಕ್ಟರ್ ಮತ್ತು ರಾಮರೆಡ್ಡಿ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಸದ್ಯಕ್ಕೆ ಖಾಲಿ ಇಲ್ಲ.
ಪಕ್ಷ ಈ ನಿಟ್ಟಿನಲ್ಲಿ ಜವಾಬ್ದಾರಿ ನೀಡಿ ಕೆಲಸ ಮಾಡಿ ಎಂದರೆ ನಾನು ಸಿದ್ದ ಎಂದು ಹೇಳಿದ್ದಾರೆ.
ಪ್ರಭಾಕರ ಮ್ಯಾಸನಾಯಕರು ಈ ಹಿಂದೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿಯೂ ಕೂಡ ಕೆಲಸ ಮಾಡಿದ್ದರು.
ಕಳೆದ ಎರಡು ಅವಧಿಗಳಿಂದಲೂ ಕೂಡ ಮೊಳಕಾಲ್ಮುರು ಕ್ಷೇತ್ರದ ಬಿಜೆಪಿ ಟಿಕೆಟಿಗೆ ಇನ್ನಿಲ್ಲದ ಕಸರತ್ತು ಕೂಡ ನಡೆಸಿದ್ದರು.
ಪ್ರಭಾಕರ ಮ್ಯಾಸನಾಯಕರಿಗೆ ಈ ಬಾರಿ ಟಿಕೆಟ್ ಘೋಷಣೆ ಆಗಿಯೇ ಬಿಡ್ತು ಎಂಬ ಮಟ್ಟಕ್ಕೆ ಕ್ಷೇತ್ರದಲ್ಲಿ ವಾತಾವರಣ ನಿರ್ಮಾಣವಾಗಿತ್ತು.
ಕಳೆದ 2 ಅವಧಿಯಿಂದಲೂ ಕೂಡ ಎಸ್. ತಿಪ್ಪೇಸ್ವಾಮಿ ಮತ್ತು ಪ್ರಭಾಕರ ನಡುವೆ ನೇರ ನೇರ ಪೈಪೋಟಿ ಆಗಿತ್ತು. ಇಬ್ಬರ ಜಗಳ ಮೂರನೆಯವರಿಗೆ ಲಾಭ ಆಯ್ತು ಎಂಬಂತೆ ಅಳಿಯ ಪ್ರಭಾಕರ ಮಾವ ಎಸ್. ತಿಪ್ಪೇಸ್ವಾಮಿ ನಡುವಿನ ಜಗಳವನ್ನು ಲಾಭ ಮಾಡಿಕೊಂಡ ಶ್ರೀರಾಮುಲು ಕ್ಷೇತ್ರದ ಕಡೆ ಲಗ್ಗೆ ಇಟ್ಟಿದ್ದರು.ಆದರೆ ಈ ಬಾರಿ ಕ್ಷೇತ್ರದಲ್ಲಿ ತಮ್ಮದೇ ಆದಂತ ಪಡೆಯನ್ನು ಕಟ್ಟಿಕೊಂಡಿದ್ದ ಪ್ರಭಾಕರ ಮ್ಯಾಸನಾಯಕರು ಮಿಂಚಿನ ಸಂಚಾರ ನಡೆಸಿ ಕ್ಷೇತ್ರದಲ್ಲಿ ಮನೆ ಮಾತಾಗಿದ್ದರು.
ಸಂಘ ಪರಿವಾರದ ಹಿನ್ನೆಲೆ ಇರುವ ಪ್ರಭಾಕರ ಮ್ಯಾಸನಾಯಕರಿಗೆ ಹೈಕಮಾಂಡ್ ಮಟ್ಟದ ತನಕವೂ ಕೂಡ ಸಂಪರ್ಕ ಸಂಬಂಧ ಉತ್ತಮವಾಗಿತ್ತಾದರೂ ಕೊನೆ ಗಳಿಗೆಯಲ್ಲಿ ತಿಪ್ಪೇಸ್ವಾಮಿಗೆ ಪಕ್ಷ ಟಿಕೆಟ್ ನೀಡಿತು.
ಈ ಬಗ್ಗೆ ಎಲ್ಲೂ ಕೂಡ ಒಂದೇ ಒಂದು ಅಪಸ್ವರ ಮಾತನಾಡದೆ ತಿಪ್ಪೇಸ್ವಾಮಿಯವರ ಪರ ಕೆಲಸ ಮಾಡಿದ್ದರು
ಈಗಲೂ ಮ್ಯಾಸನಾಯಕರು ಕ್ಷೇತ್ರದಲ್ಲಿ ಜನರ ಕೈಗೆ ಸಿಗುತ್ತಾ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಪಕ್ಷ ಇವರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ವೃತ್ತಿಯಲ್ಲಿ ವಾಣಿಜ್ಯೋದ್ಯಮಿಯಾಗಿರುವ
ಪ್ರಭಾಕರ ಮ್ಯಾಸನಾಯಕರು, ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಸಬಲರಾಗಿರುವ ಯುವ ನಾಯಕ ಇದೆಲ್ಲವನ್ನು ಪಕ್ಷ ಗುರುತಿಸಿ ಈ ಬಾರಿ ನಾಯಕ ಸಮುದಾಯಕ್ಕೆ ಮಣೆ ಹಾಕುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ಮೂಲಗಳು ತಿಳಿಸಿವೆ.