ನಾನು ಗ್ರಾಮಾಂತರ ಕ್ಷೇತ್ರದ ಶಾಸಕನಲ್ಲ ನಿಮ್ಮ ಮನೆಮಗ ನಿಮ್ಮಗಳ ಅಭಿವೃದ್ಧಿಗೆ ಸದಾ ಸಿದ್ದ : ಶಾಸಕ ಗೌರಿಶಂಕರ್
ಗೂಳೂರು ಹಾಗೂ ಹೆತ್ತೇನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ
ತುಮಕೂರು : ನಾನು ಗ್ರಾಮಾಂತರ ಕ್ಷೇತ್ರದ ಶಾಸಕನಲ್ಲ ನಿಮ್ಮ ಮನೆ ಮಗ ನಿಮ್ಮಗಳ ಅಭಿವೃದ್ಧಿಗೆ ನಾನು ಸದಾ ಸಿದ್ದ ಎಂದರು ವಿರೋಧಿಗಳ ಟೀಕೆಗಳಿಗೆ ಉತ್ತರ ನೀಡುವಷ್ಟು ಕಾಲಾವಕಾಶ ಇಲ್ಲ ವಿರೋಧಿಗಳ ಟೀಕೆಗೆ ಉತ್ತರ ನೀಡುವ ಕಾಲಾವಕಾಶವನ್ನು ಅಭಿವೃದ್ಧಿಗೆ ಮೀಸಲಿಟ್ಟಿದ್ದೇನೆ, ಅಭಿವೃದ್ಧಿಯ ಮೂಲಕ ವಿರೋದಿಗಳಿಗೆ ಉತ್ತರ ನೀಡಿದ್ದೇನೆ,
ಗ್ರಾಮಾಂತರ ಕ್ಷೇತ್ರದಲ್ಲಿ ಹತ್ತು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಕಾಣದ ಹಳ್ಳಿಗಳನ್ನು ಗುರುತಿಸಿ ಅಭಿವೃದ್ಧಿ ಮಾಡಲಾಗಿದೆ, ಅಭಿವೃದ್ಧಿ ದೃಷ್ಟಿಯಿಂದ ಗ್ರಾಮಾಂತರ ಕ್ಷೇತ್ರವನ್ನು ಇಡೀ ಜಿಲ್ಲೆಗೆ ಮಾದರಿ ಮಾಡುವ ಕನಸು ಹೊಂದಿರುವುದಾಗಿ ಶಾಸಕ ಗೌರಿಶಂಕರ್ ತಿಳಿಸಿದರು.
ಗ್ರಾಮಾಂತರ ಕ್ಷೇತ್ರದ ಗೂಳೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಗೂಳೂರು ಹಾಗೂ ಹೆತ್ತೇನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರಾದ ಡಿ ಸಿ ಗೌರಿಶಂಕರ್ ಚಾಲನೆ ನೀಡಿ ಮಾತನಾಡಿದರು.
ಗೂಳೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಮಾನಂಗಿ ವಡೇರಹಳ್ಳಿಯಲ್ಲಿ 41 ಲಕ್ಷ ವೆಚ್ಚದಲ್ಲಿ ಮನೆಮನೆ ನಲ್ಲಿ ಕಾರ್ಯಕ್ರಮ, ದೊಡ್ಡಹೊಸೂರು,ಚಿಕ್ಕಹೊಸೂರು ಗ್ರಾಮದಲ್ಲಿ 36 ಲಕ್ಷ ವೆಚ್ಚದ ಮನೆ ಮನೆ ನಲ್ಲಿಕಾರ್ಯಕ್ರಮ,ಗೂಳರಿವೆ ಗ್ರಾಮದ ಮುಖ್ಯ ರಸ್ತೆಯಿಂದ ಕೆ.ಪಾಲಸಂದ್ರ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ದಿಗೆ 10 ಲಕ್ಷ , ಗೂಳರಿವೆ ಗ್ರಾಮದ ಮುಖ್ಯ ರಸ್ತೆಯಿಂದ ತೋಟದ ಸಾಲಿನ ರಸ್ತೆ ಅಭಿವೃದ್ದಿಗೆ 10 ಲಕ್ಷ,ಮಾನಂಗಿ ಗ್ರಾಮದ ಅಂಗನವಾಡಿ ನಿರ್ಮಾಣಕ್ಕೆ 15 ಲಕ್ಷ,ಗಂಗಸಂದ್ರ ದೊಡ್ಡ ಸಾರಂಗಿ ರಸ್ತೆಯಿಂದ ಕುಮ್ಮಂಜಿ ಪಾಳ್ಯ ಭೋವಿಕಾಲೋನಿಗೆ ಸಿಸಿರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ 20 ಲಕ್ಷ,ಗೂಳೂರು ಗ್ರಾಮದ ವಿವಿದ ಬಡಾವಣೆಗಳಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ, ಹೆತ್ತೇನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗಂಗಸಂದ್ರ ದೊಡ್ಡಸಾರಂಗಿ ರಸ್ತೆಯಿಂದ ಕುಮ್ಮಂಜಿವಪಾಳ್ಯ ಭೋವಿ ಕಾಲೋನಿವರೆಗೆ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಗೆ 20 ಲಕ್ಷ,ಕೈದಾಳ ಕಲ್ಲುಮಠ ಮನೆ ಮನೆಗೆ ಕುಡಿಯುವ ನಲ್ಲಿ ಸಂಪರ್ಕ ಕಾಮಗಾರಿಗೆ 19 ಲಕ್ಷ,ಕೈದಾಳ ಗ್ರಾಮದಲ್ಲಿ ಮನೆಮನೆಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಾಮಗಾರಿಗೆ 81 ಲಕ್ಷ,ಹಾಲುಹೊಸಹಳ್ಳಿ ಯಲ್ಲಿ ಕುಡಿಯುವ ನೀರಿನ ಸಂಪರ್ಕಕಾಮಗಾರಿಗೆ 50 ಲಕ್ಷ,ಹೆತ್ತೇನಹಳ್ಳಿ ಗ್ರಾಮದಲ್ಲಿ ನಲ್ಲಿ ಸಂಪರ್ಕ ಕಾಮಗಾರಿಗೆ 66 ಲಕ್ಷ,ಕೊಂಡಾಪುರ ಗ್ರಾಮದ ನಲ್ಲಿ ಸಂಪರ್ಕ ಕಾಮಗಾರಿಗೆ 37 ಲಕ್ಷ,ನಂದಿಹಳ್ಳಿ ಗ್ರಾಮದಲ್ಲಿ ನಲ್ಲಿ ಸಂಪರ್ಕ ಕಾಮಗಾರಿಗೆ 30 ಲಕ್ಷ,ಕುಮ್ಮಂಜಿಪಾಳ್ಯ,ಹೆತ್ತೇನಹಳ್ಳಿ ಪಾಳ್ಯ ನಲ್ಲಿ ಸಂಪರ್ಕ ಕಾಮಗಾರಿಗೆ 45 ಲಕ್ಷ,ರಂಗಯ್ಯನಪಾಳ್ಯ ,ಲಕ್ಷ್ಮಣಸಂದ್ರ ನಲ್ಲಿ ಸಂಪರ್ಕ ಕಾಮಗಾರಿ 38 ಲಕ್ಷ,ದೊಡ್ಡಸಾರಂಗಿ ಪಾಳ್ಯ ಗ್ರಾಮದ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣ ಕಾಮಗಾರಿಗೆ 14 ಲಕ್ಷ,ದೊಡ್ಡ ಸಾರಂಗಿ ಪಾಳ್ಯದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ 10 ಲಕ್ಷ ,ಹೆತ್ತೇನಹಳ್ಳಿ ಮುಖ್ಯರಸ್ತೆಯಿಂದ ಕಲ್ಮಟಕ್ಕೆ ಹೋಗುವ ರಸ್ತೆ ಅಭಿವೃದ್ದಿಗೆ 10 ಲಕ್ಷ,ಹೆತ್ತೇನಹಳ್ಳಿ ಗ್ರಾಮದ ಪರಿಮಿತಿಯಲ್ಲಿ 10 ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದರು.
ಈ ವೇಳೆ ಗುಳೂರು ಜಿಲ್ಲಾ ಪಂಚಾಯತ್ ಜೆಡಿಎಸ್ ಅಧ್ಯಕ್ಷ ಜಿ ಪಾಲನೇತ್ರಯ್ಯ ,ಮಾಜಿ ಎಪಿಎಂಸಿ ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯೆ ಎಸ್ ವಿಜಯಕುಮಾರಿ ಗುಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣೇಗೌಡ , ಗ್ರಾಮ ಪಂಚಾಯಿತಿ ಸದಸ್ಯರುಗಳು ಮುಖಂಡರು, ಜೆಡಿಎಸ್ ಕಾರ್ಯಕರ್ತರು ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ಜೆಡಿಎಸ್ ಸದಸ್ಯರು, ಮುಖಂಡರು, ಹಾಗೂ ಜೆಡಿಎಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು