ಶಿರಾ : ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿದರೆ ಉಚಿತ ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಉಚಿತ ಆರೋಗ್ಯ ವ್ಯವಸ್ಥೆ, ಉಚಿತ ವಿದ್ಯುತ್, ಉಚಿತ ನೀರು ಹಾಗೂ ನಿಮ್ಮ ಮನೆಯ ಬಾಗಿಲಿಗೆ ಸರ್ಕಾರಿ ಸೇವೆಗಳು ಬರಲಿವೆ ಎಂದು ಶಿರಾ ವಿಧಾನಸಭಾ ಆಮ್ ಆದ್ಮಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಹಾಗೂ ತಾಲ್ಲೂಕು ಅಧ್ಯಕ್ಷರಾದ ಶಶಿಕುಮಾರ್.ಆರ್ ಅವರು ಹೇಳಿದರು.
ಅವರು ನಗರದ ಮಂಜುಶ್ರೀ ಕಂಫಟ್ಸ್ನಲ್ಲಿ ಏರ್ಪಡಿಸಿದ್ದ ಆಮ್ ಆದ್ಮಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಇತರೆ ಪಕ್ಷದ ಕಾರ್ಯಕರ್ತರನ್ನು ಆಮ್ ಆದ್ಮಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಆಮ್ ಆದ್ಮಿ ಪಕ್ಷಕ್ಕೆ ಯುವಕರು ಸ್ವಯಂ ಪ್ರೇರಿತರಾಗಿ ಸೇರ್ಪಡೆಯಾಗುತ್ತಿರುವುದು ಉತ್ತಮ ಕಾರ್ಯ. ಆದ್ದರಿಂದ ಮತದಾರರು ಹಣ, ಹೆಂಡಕ್ಕೆ ಮತಗಳನ್ನು ಮಾರಿಕೊಳ್ಳದೆ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ, ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯಾಗುತ್ತೀರಿ ಎಂದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಶ್ವನಾಥ್ ಮಾತನಾಡಿ ಆಮ್ ಆದ್ಮಿ ಪಕ್ಷದಿಂದ 2023ನೇ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಸ್ಪರ್ದೇ ಮಾಡಲಿದೆ. ಈ ನಿಟ್ಟಿನಲ್ಲಿ ಮೇ ತಿಂಗಳಿAದ ಗ್ರಾಮ ಸಂಪರ್ಕ ಅಬಿಯಾನ ಪ್ರಾರಂಭ ಮಾಡಿದ್ದೇವೆ. ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದೇವೆ. ಈಗ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ಬೇರೆ ಪಕ್ಷದವರ ಬಳಿ ಇರುವುದು ಹಣ ಒಂದೇ ಬಂಡವಾಳ. ಹಣ ಖರ್ಚು ಮಾಡಿ ಚುನಾವಣೆ ಮಾಡುತ್ತಾರೆ. ಅವರಿಗೆ ರಾಜಕೀಯ ಒಂದು ವ್ಯವಹಾರವಾಗಿದೆ. ಜನರನ್ನು ಶಾಸಕರನ್ನು ಹಣವಿಲ್ಲದೆ ಮಾಡಿದ್ದರೆ ಅದು ಆಮ್ ಆದ್ಮಿ ಪಕ್ಷದವರು ಮಾತ್ರ. ಪಂಜಾಬ್‌ನಲ್ಲಿ ಶೇ. 85 ರಷ್ಟು ಗೆದ್ದಿರುವವರು ಯಾವುದೇ ಹಣ ಇಲ್ಲದೆ ಮೊದಲ ಬಾರಿಗೆ ಸ್ಪರ್ಧಿಸಿರುವವರು ಮಾತ್ರ. ದೆಹಲಿಯಲ್ಲಿ ಖಾಸಗಿ ಶಾಲೆಗಳನ್ನು ಬಿಟ್ಟು ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ. ಇಂತಹ ಗುಣಮಟ್ಟದ ಶಿಕ್ಷಣ, ದೆಹಲಿಯಲ್ಲಿ ಎಲ್ಲಾ ವೈದ್ಯಕೀಯ ಚಿಕಿತ್ಸೆ ಉಚಿತವಾಗಿ ಸಿಗುತ್ತವೆ. ಕರ್ನಾಟಕದಲ್ಲಿ 2.50 ಲಕ್ಷ ಕೋಟಿ ರೂ. ಸಾಲ ಇದೆ. ಆದರೆ ದೆಹಲಿಯಲ್ಲಿ 9000 ಕೋಟಿಗಿಂತ ಹೆಚ್ಚು ಉಳಿಕೆ ಹಣ ಇದೆ. ಆದ್ದರಿಂದ ಎಲ್ಲರೂ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಎಂದರು.
ಕಾರ್ಯಕ್ರಮದಲ್ಲಿ ನೂರಾರು ಮಂದಿ ಇತರೆ ಪಕ್ಷವನ್ನು ತೊರೆದು ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಧುಸೂಧನ್, ಪ್ರಶಾಂತ್, ನಾಗೇಶ್ ಬಾಬು, ಜಗದೀಶ್ ಸೇರಿದಂತೆ ಹಲವರು ಹಾಜರಿದ್ದರು.