ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಪ್ರಯುಕ್ತ ಸಿದ್ಧಗಂಗಾ ಮಠಕ್ಕೆ ಡಾ.ಜಿ.ಪರಮೇಶ್ವರ್ ಭೇಟಿ
ತುಮಕೂರು : ಡಾ.ಶಿವಕುಮಾರ ಮಹಾಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ಶ್ರೀ ಸಿದ್ಧಲಿಂಗಸ್ವಾಮೀಜಿ ಆರ್ಶೀವಾದವನ್ನು ಪಡೆದರು.
ಪೂರ್ವ ನಿಯೋಜಿತ ಕಾರ್ಯಕ್ರಮದ ಅಂಗವಾಗಿ ಮಂಗಳೂರಿಗೆ ತೆರಳಲಿರುವುದರಿಂದ ಪುಣ್ಯಸ್ಮರಣೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಇಂದು ಮಠಕ್ಕೆ ಬಂದು ಶ್ರೀಗಳ ಆರ್ಶೀವಾದವನ್ನು ಪಡೆದಿರುವುದಾಗಿ ತಿಳಿಸಿದರು.
ಮೋದಿ ಭೇಟಿ ಸ್ವಾಭಾವಿಕ: ರಾಜ್ಯದಲ್ಲಿ ಚುನಾವಣೆ ಇರುವುದರಿಂದ ಪ್ರಧಾನಿ ಮೋದಿ ಅವರು ಪದೆಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಸ್ವಾಭಾವಿಕವಾಗಿದ್ದು, ಚುನಾವಣೆಯಲ್ಲಿ ಹುರುಪು ತುಂಬುತ್ತಿದ್ದಾರೆ, ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಮಹಿಳೆಯರಿಗೆ 2000 ಸಹಾಯಧನವನ್ನು ಯಾರಿಗೆ ಕೊಡಬೇಕು ಎನ್ನುವುದನ್ನು ತೀರ್ಮಾನ ಮಾಡಿಲ್ಲ, ಈ ಯೋಜನೆಗೆ 24 ಸಾವಿರ ಕೋಟಿ ಪ್ರತಿ ವರ್ಷ ಅವಶ್ಯಕವಾಗಿದ್ದು, ಪ್ರಣಾಳಿಕೆ ಬಿಡುಗಡೆ ಮಾಡುವಷ್ಟರಲ್ಲಿ ಅಂತಿಮಗೊಳಿಸು ವುದಾಗಿ ತಿಳಿಸಿದರು.
ಟಿಕೆಟ್ ಹಂಚಿಕೆ ಆದಷ್ಟು ಶೀಘ್ರವಾಗಲಿದೆ, ತಯಾರಿ ನಡೆಯುತ್ತಿದ್ದು ಪ್ರದೇಶ ಚುನಾವಣಾ ಸಮಿತಿ ಸಭೆಯ ನಂತರ ಫೆಬ್ರವರಿ ಎರಡನೇ ವಾರದಲ್ಲಿ ಅಂತಿಮಗೊಳ್ಳಲಿದ್ದು, ಸಿದ್ಧರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ, ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.
ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ, ಕರ್ನಾಟಕದವರೇ ನಮ್ಮ ಪಕ್ಷದ ಅಧ್ಯಕ್ಷರಾಗಿರುವುದರಿಂದ ನಮ್ಮವರು ಬರುತ್ತಾರೆ ಎಂದು ಸೂಚ್ಯವಾಗಿ ತಿಳಿಸಿದರು.