ಕೊರಟಗೆರೆ : ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಜನವರಿ ೨೧ ರಿಂದ ೨೯ ರ ವರೆಗೆ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಗಂಗಹನುಮಯ್ಯ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ಈ ಅಭಿಯಾನದಲ್ಲಿ ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು ಅವುಗಳ ಅನುಷ್ಟಾನ, ಜನ ಸಾಮಾನ್ಯರಿಗೆ ಈ ಯೋಜನೆಗಳಿಂದ ಆಗುತ್ತಿರುವ ಅನುಕೂಲಗಳನ್ನು ಮುದ್ರಿಸಿ ಪ್ರತಿಯೊಂದು ಮನೆಗೂ ತಲುಪಿಸುವ ಕೆಲಸವನ್ನು ಮಾಡಲಾಗುವುದು ಹಾಗೂ ಇದರೊಂದಿಗೆ ಬಿಜೆಪಿ ಪಕ್ಷದ ಸದಸ್ಯತ್ವ ನೋಂದಣಿ ಮತ್ತು ನವೀಕರಣವನ್ನು ಮಾಡಲಾಗುವುದು ಎಂದರು.
ಕೊರಟಗೆರೆ ಬಿಜೆಪಿ ಮಂಡಲಾದ್ಯಕ್ಷ ಪವನ್‌ಕುಮಾರ್ ಮಾತನಾಡಿ ವಿಜಯ ಸಂಕಲ್ಪ ಅಭಿಯಾನದಲ್ಲಿ ರಾಜ್ಯದ ಸರ್ಕಾರದ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನೀರಾವರಿ, ಸಾಂಸ್ಕೃತಿಕ ಪುನರುತ್ಥಾನ, ಮೀಸಲಾತಿ, ಆರ್ಥಿಕ ನೆರವು, ಸಾಮಾಜಿಕ ಹಿತಾಸಕ್ತಿ, ಮಹಾತ್ಮರಿಗೆ ಗೌರವ, ಕನ್ನಡ ವೈಭವ, ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಜನಪರ ಯೋಜನೆಗಳನ್ನು ಜನಸಾಮನ್ಯರಿಗೆ ತಲುಪಿಸಲಾಗುವುದು, ಅಗತ್ಯ ಬಿದ್ದಲ್ಲಿ ಜನರಿಗೆ ಓದಿ ತಿಳಿಸಿ ಅರಿವು ಮಾಡಿಸಲಾಗುವುದು ಮತ್ತು ಬಿಜೆಪಿ ಪಕ್ಷದ ಜನ ಕಲ್ಯಾಣ ಯೋಜನೆಗಳಿಂದ ಜನರಿಗೆ ಅಗಿರುವ ಉಪಯೋಗಗಳನ್ನು ತಿಳಿಸಲಾಗುವುದು ಎಂದರು.
ಜಿಲ್ಲಾ ಸಂಚಾಲಕ ಮಾರುತಿ ಮಾತನಾಡಿ ವಿಜಯ ಸಂಕಲ್ಪ ಅಭಿಯಾನಕ್ಕೆ ನಮ್ಮ ಪಕ್ಷದ ರಾಷ್ಟೀಯ ಅದ್ಯಕ್ಷರಾದ ಜೆ.ಪಿ.ನಡ್ಡಾ ರವರು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಚಾಲನೆ ನೀಡಲಿದ್ದಾರೆ, ಅವರೊಂದಿಗೆ ಪಕ್ಷದ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಕ್ಷರಾದ ನಳಿನಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು, ತುಮಕೂರು ಜಿಲ್ಲೆಯಲ್ಲಿ ಅಭಿಯಾನಕ್ಕೆ ನಮ್ಮ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಚಾಲನೆ ನೀಡಲಿದ್ದಾರೆ ಎಂದ ಅವರು ಈಗಾಗಲೆ ಬಿಜೆಪಿ ಪಕ್ಷವು ಸುಮಾರು ೨ ಕೋಟಿ ಸದಸ್ಯರನ್ನು ಹೊಂದಿದ್ದು ಅದನ್ನು ೨.೫೦ ಕೋಟಿಗೆ ತಲುಪಿಸಲಾಗುವುದು ಎಂದರು.