ಮಕ್ಕಳಲ್ಲಿನ ನಾನಾ ರೀತಿಯ ಪ್ರತಿಭೆಗಳು ಕಲಿಕಾ ಹಬ್ಬದ ಮೂಲಕ ಹೊರಬರುತ್ತವೆ : ಶಶಿಧರ್ ಬೈರಾಪುರ
ತಿಪಟೂರು : ಕೋವಿಡ್ ಸಂದರ್ಭದಲ್ಲಿ ಮಕ್ಕಳ ವಿದ್ಯಾಬ್ಯಾಸದ ಕಲಿಕೆಯಲ್ಲಿ ಕುಂಠಿತವಾದಾಗ ಮತ್ತೆ ಮಕ್ಕಳಿಗೆ ಕಲಿಕೆಯಲ್ಲಿ ಒಂದು ಆತ್ಮವಿಶ್ವಾಸ ಹಾಗೂ ಉತ್ಸಾಹ ತುಂಬುವ ಸಲುವಾಗಿ ಕಲಿಕಾ ಚೇತರಿಕೆ ಕರ‍್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಇದರಿಂದ ಮಕ್ಕಳಿಗೆ ವಿದ್ಯಾರ್ಜನೆಗೆ ಒಂದು ಕಲಿಕೆಗೆ ಮೆಟ್ಟಿಲು ಆಗಿದೆ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸದರು.
ಕೋನೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಕಸ್ಟರ್ ಮಟ್ಟದ ಕಲಿಕಾ ಹಬ್ಬ ಕರ‍್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಪ್ರಾರಂಭವಾದ ಕಲಿಕಾಚೇತರಿಕೆ ಕರ‍್ಯಕ್ರಮವು ದೇಶಾದ್ಯಾಂತ ಒಂದು ಮಾದರಿಯಾದ ಕರ‍್ಯಕ್ರಮವಾಗಿದೆ. ಶಾಲೆಗೆ ಬರುವ ಮಕ್ಕಳು ಯಾವ ಕಾರಣಕ್ಕೂ ಕಲಿಕೆಯಲ್ಲಿ ಹಿಂದುಳಿಯಬಾರದು ಎಂಬ ಕಾರಣಕ್ಕೆ ಈ ಕರ‍್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಮಕ್ಕಳಲ್ಲಿ ಅಡಗಿರುª ಪ್ರತಿಭೆ, ಕಲೆಗಳನ್ನು ಶಿಕ್ಷಕರು ಗಮನಿಸಿ ಹೊರತರುವ ಕೆಲಸವನ್ನು ಮಾಡಬೇಕಾಗಿದೆ.
ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷ ಅರುಣ್ ಕುಮಾರ್ ಮಾತನಾಡಿ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ನಮ್ಮ ಶಾಲೆಯಲ್ಲಿ ಎಲ್ಲಾ ಪೂರಕ ವಾತಾವರಣವನ್ನು ನಿರ್ಮಿಸಲಾಗಿದ್ದು, ಶಾಲೆಯಲ್ಲಿ ಮಕ್ಕಳು ಕಲಿತು ಉತ್ತಮ ವಿದ್ಯಾರ್ಥಿಗಳಾಗಿ ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕಾಗಿದೆ ಎಂದರು.
ಸಮಾಜ ಸೇವಕ ಅರಣ್ಯ ಶಶಿಧರ್‌ಬೈರಾಪುರ ಮಾತಾನಾಡಿ ಮಕ್ಕಳಲ್ಲಿ ನಾನಾ ರೀತಿಯ ಪ್ರತಿಭೆಗಳು ಇರುತ್ತದೆ ಅಂತಹ ಪ್ರತಿಬೆಗಳನ್ನು ಇಂತಹ ಕಲಿಕಾ ಹಬ್ಬದ ಮೂಲಕ ಹೊರಬರುತ್ತವೆ ಅದ್ದರಿಂದ ಉತ್ತಮ ಕಲಿಕೆ ಉತ್ತಮ ಶಿಕ್ಷಕರಿಂದ ಮಾತ್ರ ಆಗಿರುತ್ತದೆ ಹಾಗಾಗಿ ಶಿಕ್ಷಕರು ಮಕ್ಕಳನ್ನು ಉನ್ನತ ಮಾರ್ಗದ ಕಡೆಗೆ ಕೊಂಡ್ಯೋಯ ಶಕ್ತಿಯಿದೆ ಎಂದರು.
ಕರ‍್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿಯ ಉಪಾಧಕ್ಷೆ ಶೋಭಾ, ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಜ್ಯೋತಿಸುರೇಶ್, ಎಮ್.ಪಿ ಹರೀಶ್, ರಮೇಶ್, ನಟರಾಜು ಮಾಜಿ ಸದಸ್ಯ ಮಲ್ಲೇಶ್, ಸಮಾಜ ಸೇವಕ ಬೊಜೆಗೌಡ, ಸಿಆರ್‌ಪಿ ಮಂಜುನಾಥ, ಕೊನೇಹಳ್ಳಿ ಆರ್ಯುವೇದ ಆಸ್ವತ್ರೆಯ ವೈದ್ಯಾಧೀಕಾರಿ ಡಾ,ಸುಮುನಾ, ಹಿರೇಗೌಡ, ಮುಖ್ಯಶಿಕ್ಷಕರು ಸೀತಮ್ಮ, ಹರೀಶ್ ಷಾಣೈ, ಪೊಷಕರು, ಮತ್ತಿತ್ತರು ಹಾಜರಿದ್ದರು.