ಹಿಂದೂ ವಿರೋಧಿ ಕಾಂಗ್ರೇಸ್ ಸೋಲಿಸುವುದೇ ನನ್ನ ಗುರಿ : ಎಂ.ಡಿ.ಲಕ್ಷ್ಮೀನಾರಾಯಣ
ತುರುವೇಕೆರೆ : ನಾನು ಯಾವುದೇ ಫಲಾಪೇಕ್ಷೆ ಇಲ್ಲದೇ ಬಿ.ಜೆ.ಪಿ. ಸೇರಿದ್ದೇನೆ. ಹಿಂದೂ ವಿರೋಧಿ ನಾನು ಕಾಂಗ್ರೇಸ್ ಪಕ್ಷವನ್ನು ಸೋಲಿಸುವುದೇ ನನ್ನ ಗುರಿ. ಎಂದು ರಾಜ್ಯ ನೇಕಾರ ಸಂಘದ ಮಾಜಿ ಅಧ್ಯಕ್ಷ ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ ತಿಳಿಸಿದರು.
ಪಟ್ಟಣದ ಬಿ.ಜೆ.ಪಿ. ಕಾರ್ಯಾಲಯಕ್ಕೆ ಆತ್ಮೀಯವಾಗಿ ಬರ ಮಾಡಿಕೊಂಡ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದ 224 ಕ್ಷೇತ್ರಗಳ ಪೈಕಿ 150 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ನಮ್ಮದಾಗಿದ್ದು ಅಂತಿಮವಾಗಿ 123 ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಗೆಲುವು ಸಾಧಿಸಲಿದೆ ನೇಕಾರ ಸಮುದಾಯವಿರುವ ರಾಜ್ಯದ 58 ಕ್ಷೇತ್ರಗಳಲ್ಲಿ ಬಿ.ಜೆ.ಪಿ.ಯ ಗೆಲುವು ಖಚಿತ. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಮಸಾಲಜಯರಾಮ್ ಅವರನ್ನು ಮತ್ತೆ ಗೆಲ್ಲಿಸಲು ಶ್ರಮಿಸುತ್ತೇನೆಂದರು.
ಕಾರ್ಯಕರ್ತರನ್ನು ಕೆಣಕಿದರೆ ಸುಮ್ಮನಿರಲ್ಲ;
ಶಾಸಕ ಮಸಾಲಜಯರಾಮ್ ಮಾತನಾಡಿ ಎಂ.ಡಿ.ಲಕ್ಷ್ಮಿನಾರಾಯಣ ಅವರು ನನ್ನ ರಾಜಕೀಯ ಗುರುಗಳು, ಅವರ ಆಗಮನದಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಎಂ.ಡಿ.ಎಲ್. ಅವರು ತುರುವೇಕೆರೆ ಕ್ಷೇತ್ರದಲ್ಲಿ ಒಂದು ಸುತ್ತು ಬಂದರೇ 10 ಸಾವಿರ ಮತಗಳು ಹೆಚ್ಚಳವಾಗಲಿವೆ ನನ್ನನ್ನು ಶಾಸಕನನ್ನಾಗಿ ಮಾಡಿದ ಕಾರ್ಯಕರ್ತರ ಋಣ ನನ್ನ ಮೇಲಿದೆ. ನಾನು ತಪ್ಪು ಮಾಡಿದೇನೆಂದು ಕಾರ್ಯಕರ್ತರು ಹೇಳಿದರೇ ತಿದ್ದಿಕೊಳ್ತೀನಿ, ನಮ್ಮ ಕಾರ್ಯಕರ್ತರ ತಂಟೆಗೆ ಯಾರಾದರೂ ಬಂದರೇ ನಾನು ಸುಮ್ಮನಿರಲ್ಲ ಎಂದು ಎಚ್ಚರಿಸಿದರು.
ತಾಲೂಕು ಘಟದಕ ಅಧ್ಯಕ್ಷ ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ದುಂಡರೇಣುಕಯ್ಯ, ವಕೀಲರುಗಳಾದ ಡಿ.ಟಿ.ರಾಜಶೇಖರ್, ಮುದ್ದೇಗೌಡ, ಮುಖಂಡರುಗಳಾದ ಕೊಂಡಜ್ಜಿವಿಶ್ವನಾಥ್, ಗೊಟ್ಟಿಕೆರೆಕಾಂತರಾಜ್, ವಿ.ಟಿ.ವೆಂಕಟರಾಮ್, ಕಡೇಹಳ್ಳಿ ಸಿದ್ದೇಗೌಡ, ವಿ.ಟಿ.ವೆಂಕಟರಾಮಯ್ಯ, ಕೆಂಪೇಗೌಡ. ವಿ.ಬಿ.ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಚೂಡಾಮಣಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.