ಚಿಕ್ಕನಾಯಕನಹಳ್ಳಿ ತಾಲೂಕಿನ ಬಹುತೇಕ ಕಾಮಗಾರಿಗಳು ಕಳಪೆ : ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್
ಹುಳಿಯಾರು : ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಅಭಿಮಾನಿಗಳ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ 2023ರ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಕಣದಲ್ಲಿರುವುದು ನಿಶ್ಚಿತ.ನಿಮ್ಮೆಲ್ಲರ ಶುಭ ಹಾರೈಕೆಯಿಂದ ಚುನಾವಣೆಯಲ್ಲಿ ನನ್ನ ಗೆಲುವು ಸಹ ನಿಶ್ಚಿತ. ಅಧಿಕಾರ ಇಲ್ಲದಿದ್ದಾಗ ನೀರಾವರಿಗೆ ಹೋರಾಟ ಮಾಡಿ ನೀರು ಹರಿಸುವ ಕಾರ್ಯ ಮಾಡಿದ್ದೆ. ಆಗ ನೀರಾವರಿಗೆ ಸ್ವಾಮೀಜಿಗಳು ಹಾಗೂ ಸಂಘಟನೆಯೊಂದಿಗೆ ಹೋರಾಟ ಮಾಡಿದ್ದ ನನ್ನನ್ನು ಕೀಳಾಗಿ ದೂಷಣೆ ಮಾಡಿ,ಗೇಲಿಯಾಗಿ ಮಾತನಾಡಿದ ವ್ಯಕ್ತಿ ಇದೀಗ ನಮ್ಮ ಯೋಜನೆಗಳ ಫಲ ಅನುಭವಿಸಿ ತಾನೇ ನೀರಾವರಿ ಹರಿಕಾರ ಎಂದು ಬಿಂಬಿಸಿಕೊಳ್ಳ ಹೊರಟಿರುವುದು ನಾಚಿಕೆಗೇಡಿತನ.ನೀರಾವರಿ ಯೋಜನೆ ತರುವುದಾಗಿ ಎಲ್ಲಿಯೂ ಮಾತನಾಡದ ಅವರು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಎಲ್ಲೂ ಹೆಸರು ಪ್ರಸ್ತಾಪ ಮಾಡದೆ ಸಚಿವರನ್ನು ಕುಟುಕಿದರು. ಹುಳಿಯಾರು ತಾಲೂಕು ಮಾಡುವುದು ನನ್ನ ಆಶಯವಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.ಪರ್ಸೆಂಟೇಜ್ ಆಸೆಗಾಗಿ ನಾನು ಯಾವುದೇ ಅಭಿವೃದ್ಧಿ ಮಾಡಲು ಹೊರಟಿಲ್ಲ ತಾಲೂಕಿನಲ್ಲಿ ಆಗಿರುವ ರಸ್ತೆ ಕಾಮಗಾರಿ, ಪೈಪ್ಲೆöÊನ್ ಕಾಮಗಾರಿ, ಹೆದ್ದಾರಿ ಕಾಮಗಾರಿ ಎಲ್ಲಾ ಕಳಪೆಯಾಗಿದ್ದು ಇದನ್ನು ಪ್ರಶ್ನಿಸುವ ನೈತಿಕತೆ ಸಚಿವರು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.