ಗುರುಹಿರಿಯರನ್ನು ಗೌರವದಿಂದ ಕಾಣುವುದೇ ಶ್ರೇಷ್ಟ ಸಂಸ್ಕಾರ : ಹೆಚ್.ಎನ್.ಮಹದೇವಯ್ಯ
ತುರುವೇಕೆರೆ : ಅಕ್ಷರ ಜ್ಞಾನ ದೀಕ್ಷೆ ನೀಡಿದ ಗುರುಗಳನ್ನು ಹಾಗೂ ಹೆತ್ತ ತಂದೆತಾಯಿಗಳನ್ನು ಗೌರವದಿಂದ ಕಾಣುವ ಸಂಸ್ಕಾರ ಅತ್ಯಂತ ಶ್ರೇಷ್ಟವಾದುದು ಎಂದು ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿಗಳಾದ ಹೆಚ್.ಎನ್.ಮಹದೇವಯ್ಯನವರು ತಿಳಿಸಿದರು.
ತಾಲೂಕಿನ ಹುಲ್ಲೇಕೆರೆ ಶ್ರೀ ಬಸವೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ 2001 ರಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿಧ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ 22 ವರ್ಷಗಳ ಹಿಂದೆ ಜ್ಞಾನದೀಕ್ಷೆ ನೀಡಿದ ಗುರುಗಳನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳ ಗುರುಭಕ್ತಿ ಅನನ್ಯವಾದುದು. ಮುಂದಿನ ಪೀಳಿಗೆಗೂ ಉತ್ತಮ ಸಂಸ್ಕಾರಗಳು ವಿಸ್ತರಣೆಯಾದಾಗ ಮಾತ್ರ ಸಮೃದ್ದ ರಾಷ್ಟç ನಿರ್ಮಾಣ ಸಾಧ್ಯ ಎಂದರು.
2001 ರಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಾದ ಹಾಲೇಗೌಡ, ಧರಣೀಶ್, ಮೋಹನ್ ಸೇರಿದಂತೆ 60 ಕ್ಕೂ ಹೆಚ್ಚು ಗೆಳೆಯರ ಗುರುವಂದನೆ ಸಂಕಲ್ಪ ಮಾದರಿಯಾದುದು. ಜ್ಞಾನ ನೀಡಿದ ಗುರುಗಳನ್ನು ಸ್ಮರಿಸುವ ಉದಾತ್ತ ಗುಣ ಮೆಚ್ಚುವಂತದ್ದು, ಜ್ಞಾನ ನೀಡಿದ ಗುರುವೇ ಶ್ರೇಷ್ಟ ಎಂಬದುನ್ನು ಗುರುವಂದನೆ ಕಾರ್ಯಕ್ರಮ ಸಾರಿ ಹೇಳಿದೆ ಎಂದರು.
ಹಿರಿಯ ವಿದ್ಯಾರ್ಥಿಗಳು ಜ್ಞಾನದೀಕ್ಷೆ ನೀಡಿದ ಶಿಕ್ಷಕ ಶಿಕ್ಷಕಿಯರಿಗೆ ಮೈಸೂರು ಪೇಟ ತೊಡಿಸಿ ಅವರ ಕಾಲಿU್ವರಗಿ ಗುರುವಂದನೆ ಸಲ್ಲಿಸಿದರು, ಗುರುಗಳಿಗೆ ಮಾತ್ರವಲ್ಲದೇ ಬೋದಕೇತರ ಸಿಬ್ಬಂದಿಗಳನ್ನು ಗೌರವಿಸುವ ಮೂಲಕ ಗುರುವಂದನೆ ಕಾರ್ಯಕ್ರಮ ವಿಶೇಷತೆ ಪಡೆದುಕೊಂಡಿತು.
ಅನನ್ಯ ಸಾದನೆ ಗೈದಿರುವ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಲೇಖಕ ಡಾ.ಅಮ್ಮಸಂದ್ರಸುರೇಶ್, ವನ್ಯಜೀವಿ ಛಾಯಾಗ್ರಾಹಕ ತಿಮ್ಮೇಗೌಡ, ಶೌರ್ಯಪ್ರಶಸ್ತಿ ಪುರಸ್ಕೃತ ಅಗ್ನಿಶಾಮಕ ದಳದ ಧರಣೀಶ್,ಮಿಮಿಕ್ರಿ ಕಲಾವಿದ ಸಾಗರ್ ಕೃಷಿತಜ್ಞ ಡಾ.ಹೊನ್ನಪ್ಪ, ಪ್ರೋ. ಹೆಚ್.ಎಂ. ಕಲ್ಪನಾ, ಅನೇಕರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.