ತುಮಕೂರು : ದೇಶದ ಐಕ್ಯತೆಗಾಗಿ ರಾಹುಲ್ ಗಾಂಧಿ ಅವರು ಪ್ರಾರಂಭಿಸಿರುವ ಭಾರತ್
ಜೋಡೋ ಯಾತ್ರೆ ತುಮಕೂರು ಜಿಲ್ಲೆಯಲ್ಲಿ 4 ದಿನ ಸಂಚರಿಸಲಿದ್ದು,ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ಮಂಚೂಣಿ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಹುಲ್‌ಗಾಂಧಿ ಯವರ ಆರಂಭಿಸಿರುವ ಭಾರತ್ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಿದ್ದತೆಯ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ತುರುವೇಕೆರೆ,ಗುಬ್ಬಿ ತಾಲೂಕುಗಳಿಗೆ ಭೇಟಿ ನೀಡಿ,ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿ, ಅವರಿಗೆ ಅಗತ್ಯ ಸಲಹೆ,ಸೂಚನೆಗಳನ್ನು ನೀಡುವ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ 22 ದಿನ ಸಂಚಾರ ನಡಸುವ ಭಾರತ ಜೋಡೋ ಯಾತ್ರೆ 510 ಕಿ.ಮಿ.ಸಂಚರಿಸಲಿದೆ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ದಿನ ಐಕ್ಯತಾ ಯಾತ್ರೆ ಸಂಚರಿಲಿದೆ ಎಂದರು.ತುಮಕೂರು ಜಿಲ್ಲೆಯಲ್ಲಿ ಅಕ್ಟೋಬರ್ 09 ರಿಂದ
12ರವರಗೆ ನಾಲ್ಕು ದಿನಗಳ ಕಾಲ ಭಾರತ್ ಐಕ್ಯತಾ ಯಾತ್ರೆ ನಡೆಯಲಿದ್ದು, ಪ್ರತಿದಿನ 20 ಸಾವಿರ ಜನ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.ದಿನಕ್ಕೆ 25 ಕಿಮಿ.ಯಂತೆ ಪಾದಯಾತ್ರೆ ಸಂಚರಿಸಲಿದೆ. ಬೆಳಗ್ಗೆ ನಡಿಗೆ, ಮಧ್ಯಾಹ್ನ ಊಟದ ನಂತರ ಸ್ಥಳೀಯ ಸಮಸ್ಯೆಗಳ ಕುರಿತು ಮುಖಂಡರೊಂದಿಗೆ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ.ಆ ವೇಳೆ
ಪಕ್ಷದ ಬಲವರ್ಧನೆ, ಟಿಕೇಟ್ ಆಕಾಂಕ್ಷಿಗಳ ನಡುವೆ ಮಾತುಕತೆ ನಡೆಯಲಿದೆ ಎಂದು ಡಿ.ಕೆ.ಶಿ ವಿವರ ನೀಡಿದರು.
ಪಕ್ಷವನ್ನು ಸಂಘಟಿಸುವ ಮೂಲಕ ಪಕ್ಷವನ್ನುಅಧಿಕಾರಕ್ಕೆ ತರಬೇಕು ಎಂಬ ಮಹತ್ವದ ಉದ್ದೇಶದಿಂದ ಈ ಯಾತ್ರೆ ಕೈಗೊಳ್ಳಲಾಗಿದೆ.ಯಾತ್ರೆ ಸಮಯದಲ್ಲಿ ಸೆಕ್ಯೂರಿಟಿ ಉದ್ದೇಶದಿಂದ ರಾಹುಲ್‌ಗಾಂಧಿ ಅವರಿಗೆ ಹಾರ, ತುರಾಯಿಗೆ ಅವಕಾಶ ನೀಡಿಲ್ಲ. ಇದನ್ನು ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಮನದಟ್ಟು ಮಾಡಿಕೊಳ್ಳಬೇಕು. ಹಾಗೆಯೇ ಪಾದಯಾತ್ರೆ
ಸಂದರ್ಭದಲ್ಲಿ ಮಸೀದಿ, ದರ್ಗ, ಚರ್ಚ್,ದೇವಾಲಯಗಳಿಗೆ ಭೇಟಿ ನೀಡಿ ಅಶೀರ್ವಾದ ಪಡೆಯಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಮುಂಬರುವ 2023ರ ಚುನಾವಣೆಯಲ್ಲಿ ಪಕ್ಷದ ಕಾರ್ಯಕ್ರಮಗಳಲ್ಲಿ ಯಾರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೋ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೋ ಅವರಿಗೆ ಪಕ್ಷದ ಟಿಕೇಟ್ ದೊರೆಯಲಿದೆ.ಗುಬ್ಬಿಯಲ್ಲಿ ತುಂಬಾ ವರ್ಷದಿಂದ
ಕಾಂಗ್ರೆಸ್ ಶಾಸಕರಿಲ್ಲ. ಹಾಗಾಗಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ,ಮಾಜಿ ಶಾಸಕ ಕೆ.ಷಡಕ್ಷರಿ,ಮಾಜಿ
ಎಂಎಲ್‌ಸಿ ಬೆಮಲ್ ಕಾಂತರಾಜು, ಜಿ.ಎಸ್. ಪ್ರಸನ್ನಕುಮಾರ್, ಹೊನ್ನಗಿರಿಗೌಡ, ಶಂಕರಾನಂದ,ಹೆಚ್.ವಿ.ವೆಂಕಟೇಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಮುರುಳೀಧರ ಹಾಲಪ್ಪ ಇದ್ದರು.