ಶಿರಾ
ನಾದೂರು ಗ್ರಾ.ಪಂ.ಅಧ್ಯಕ್ಷರಾಗಿ ಮೆಹರ್ ತಾಜ್ ಬಾಬು ಅವಿರೋಧ ಆಯ್ಕೆ
ಶಿರಾ : ತಾಲೂಕಿನ ನಾದೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಮೆಹರ್ ತಾಜ್ ಬಾಬು ಅವರು ಅವಿರೋಧವಾಗಿ ಆಯ್ಕೆಯಾದರು.
ಮಂಗಳವಾರ ನಡೆದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಮೆಹರ್ ತಾಜ್ ಬಾಬು ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರನ್ನು ಮಾಜಿ ಗ್ರಾಮ ಅಧ್ಯಕ್ಷ ಶ್ರೀಮತಿ ಕಲ್ಲೇಗೌಡ, ಪಾರ್ವತಮ್ಮ , ಉಪಾಧ್ಯಕ್ಷ ಭೂತರಾಜು, ಸದಸ್ಯರಾದ ತುಳಸಿ ಮಧುಸೂದನ್ ,ವಿಜಯಕುಮಾರ್ ಮಂಜುನಾಥ ಸ್ವಾಮಿ, ಮೇಘಶ್ರೀ ನವೀನ್, ರಕ್ಷಿತಾ ಆರ್.ಕೆ. ಮಾರುತಿ ,ಪಿ .ಬಿ. ನಾಗರಾಜು ಲಕ್ಷ÷್ಮಮ್ಮ ಕೆಂಚಪ್ಪ, ಸುನಂದ ಗಂಗಣ್ಣ ,ಲಕ್ಷ÷್ಮಮ್ಮ ಗುರುಸಿದ್ದಪ್ಪ, ರಾಮಣ್ಣ ,ಮಂಜುನಾಥ್, ಅಶೋಕ್, ಶ್ರೀನಿವಾಸ್, ರವಿ, ಪಿಡಿಒ ತಿಪ್ಪೇಸ್ವಾಮಿ ಅಭಿನಂದಿಸಿದರು. ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್ ಮಮತಾರವರು ಕಾರ್ಯನಿರ್ವಹಿಸಿದರು.